
ಬೆಂಗಳೂರು (ಮೇ. 03): ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಶಸ್ತಿ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್‌ಗೆ (RCB vs PBKS) ಗೆಲ್ಲಲು 191 ರನ್‌ಗಳ ಗುರಿಯನ್ನು ನೀಡಿದೆ. 2016 ರ ನಂತರ ಮೊದಲ ಬಾರಿಗೆ ಪ್ರಶಸ್ತಿ ತಲುಪಿದ ಆರ್‌ಸಿಬಿ ಪರ, ಮಾಜಿ ನಾಯಕ ವಿರಾಟ್ ಕೊಹ್ಲಿ 43 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು, 35 ಎಸೆತಗಳಲ್ಲಿ 3 ಬೌಂಡರಿಗಳು ಇದರಲ್ಲಿತ್ತು. ಜಿತೇಶ್ ಶರ್ಮಾ ಬಿರುಸಿನ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 190ರ ಗಡಿಗೆ ಬಂದು ನಿಂತಿತು. ಅವರು ಕೈಲ್ ಜೇಮಿಸನ್ ಅವರ ಒಂದೇ ಓವರ್‌ನಲ್ಲಿ 3 ಸಿಕ್ಸರ್‌ಗಳನ್ನು ಬಾರಿಸಿದರು. ಜಿತೇಶ್ 10 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 24 ರನ್‌ಗಳನ್ನು ಚಚ್ಚಿದರು.
ಈ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕೈಲ್ ಜೇಮಿಸನ್ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡುವ ಮೂಲಕ ಪಂಜಾಬ್‌ನ ನಿರ್ಧಾರವನ್ನು ಸರಿಯೆಂದು ಸಾಬೀತುಪಡಿಸಿದರು. ಸಾಲ್ಟ್ 16 ರನ್ ಗಳಿಸಿ ಔಟಾದರು, ವಿರಾಟ್ ಕೊಹ್ಲಿ ತಂಡಕ್ಕಾಗಿ 43 ರನ್ ಗಳಿಸಿದರೆ, ಮಾಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 24 ರನ್ ಗಳಿಸಿದರು, ಇದರಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಯ 19 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊನೆಯ 5 ಓವರ್‌ಗಳಲ್ಲಿ 58 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ, ಆರ್‌ಸಿಬಿ ಸ್ಕೋರ್ 5 ವಿಕೆಟ್‌ಗಳಿಗೆ 171 ರನ್‌ಗಳಾಗಿದ್ದರೆ, ಇನ್ನಿಂಗ್ಸ್ ಕೊನೆಗೊಂಡಾಗ 9 ವಿಕೆಟ್‌ಗಳಿಗೆ 190 ರನ್‌ಗಳಾಗಿತ್ತು. ಏತನ್ಮಧ್ಯೆ, ಜಿತೇಶ್ ಶರ್ಮಾ (24), ರೊಮಾರಿಯೊ ಶೆಫರ್ಡ್ (17), ಕೃನಾಲ್ ಪಾಂಡ್ಯ (4) ಮತ್ತು ಭುವನೇಶ್ವರ್ ಕುಮಾರ್ (1) ಔಟಾದರು.
ಐಪಿಎಲ್ ಫೈನಲ್: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಬಳಿ ಜನಜಾತ್ರೆ, ಹೆಚ್ಚು ಅರ್ಸಿಬಿ ಫ್ಯಾನ್ಗಳು
ಪಂಜಾಬ್ ಪರ ಅರ್ಶ್ದೀಪ್ ಸಿಂಗ್ ಕೂಡ ದುಬಾರಿಯಾಗಿದ್ದರು. ಅವರು 4 ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರೆ, ಅಜ್ಮತುಲ್ಲಾ 4 ಓವರ್‌ಗಳಲ್ಲಿ 35 ರನ್‌ಗಳನ್ನು ಬಿಟ್ಟುಕೊಟ್ಟು ವಿರಾಟ್ ಕೊಹ್ಲಿಯ ದೊಡ್ಡ ವಿಕೆಟ್ ಪಡೆದರು. ವಿಜಯ್ ಕುಮಾರ್ 4 ಓವರ್‌ಗಳಲ್ಲಿ 30 ರನ್‌ಗಳಿಗೆ ಒಂದು ವಿಕೆಟ್ ಮತ್ತು ಯುಜ್ವೇಂದ್ರ ಚಾಹಲ್ 4 ಓವರ್‌ಗಳಲ್ಲಿ 37 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ಸದ್ಯ ಪಂಜಾಬ್ ಗೆಲುವಿಗೆ ಆರ್‌ಸಿಬಿ 191 ರನ್‌ಗಳ ಟಾರ್ಗೆಟ್ ನೀಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಚೆಂಡು ಬ್ಯಾಟ್ಗೆ ಚೆನ್ನಾಗಿ ಬರುವ ಕಾರಣ ಆರ್‌ಸಿಬಿ ಬೌಲರ್ಗಳು ಕಠಿಣ ಪರಿಶ್ರಮ ಹಾಕಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ