RCB Vs PBKS: ಚೇಸಿಂಗ್ ಇರಲಿ, ಡಿಫೆಂಡ್ ಮಾಡಿಕೊಳ್ಳೋದಿರಲಿ ಈ ಸಲ ಕಪ್ ನಮ್ದೇ ಅಂದ ಬೆಂಗಳೂರು ಬಾಯ್ಸ್
ಬೆಂಗಳೂರಿನ ಸುಮಾರು ಕ್ರಿಕೆಟ್ ಪ್ರೇಮಿಗಳು ಇವತ್ತು ಆರ್ಸಿಬಿ ಜೆರ್ಸಿಗಳನ್ನು ಧರಿಸಿದ್ದಾರೆ. ಆ ಮೂಲಕ ತಂಡದೊಂದಿಗೆ ಸಾಲಿಡಾರಿಟಿ ಪ್ರದರ್ಶಿಸುವ ಪ್ರಯತ್ನ ಎಂದು ಅಭಿಮಾನಿಗಳು ಹೇಳುತ್ತಾರೆ. ಬೆಂಗಳೂರು ಬಾಯ್ಸ್ ಗ್ರೂಪಿನ ಯುವಕರು ತಮ್ಮ ಕೈಯಲ್ಲಿ ಅರ್ಸಿಬಿ ಧ್ವಜಗಳ ಜೊತೆ ಪುನೀತ್ ರಾಜ್ಕುಮಾರ್ ಅವರ ಚಿತ್ರವಿರುವ ಧ್ವಜವೂ ಇದೆ. ಇವರೆಲ್ಲರ ಆಸೆ ಈಡೇರಲಿ, ರಾತ್ರಿ 11 ಗಂಟೆಗೆ ಅಪ್ಪು ಹೇಳಿರುವಂತೆಯೇ ಪಟಾಕಿ ಸಿಡಿಸಲಿ!
ಬೆಂಗಳೂರು, ಜೂನ್ 3: ದೂರದ ಅಹ್ಮದಾಬಾದ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18 ಫೈನಲ್ (Indian Premier League 2025 Final) ಪಂದ್ಯ ಶುರುವಾಗಿದೆ, ಇತ್ತ ಬೆಂಗಳೂರಲ್ಲಿ ಅರ್ಸಿಬಿ ಗೆಲುವಿನ ಸೆಲಿಬ್ರೇಷನ್ ಶುರುವಾಗಿದೆ. ಬೆಂಗಳೂರಿನ ಅನೇಕ ಬಾರ್, ರೆಸ್ಟೋರಂಟ್, ಪಬ್ ಮತ್ತು ಮಾಲ್ ಗಳಲ್ಲಿ ಗ್ರಾಹಕರು ರೋಚಕ ಫೈನಲ್ ವೀಕ್ಷಿಸಲು ದೈತ್ಯ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ. ಚರ್ಚ್ ಸ್ಟ್ರೀಟ್ನಲ್ಲಿ ಬೆಂಗಳೂರು ಸುತ್ತಮುತ್ತ ಪ್ರದೇಶನಗಳಿಂದ ಅಗಮಿಸಿರುವ ಯುವಕರು ಜೊತೆಗೂಡಿದ್ದಾರೆ. ತಮ್ಮ ಗ್ರೂಪ್ಗೆ ಅವರು ಬೆಂಗಳೂರು ಬಾಯ್ಸ್ ಅಂತ ಹೆಸರಿಟ್ಟುಕೊಂಡಿದ್ದು ಎಲ್ಲರ ಬಾಯಲ್ಲೂ ಒಂದೇ ಮಾತು; ಚೇಸಿಂಗ್ ಇರಲಿ, ಡಿಫೆಂಡ್ ಮಾಡಿಕೊಳ್ಳೋದಿರಲಿ, ಈ ಸಲ ಕಪ್ ನಮ್ದೇ!
ಇದನ್ನೂ ಓದಿ: ನಾ ನೋಡಿದ ಪಂದ್ಯದಲ್ಲಿ RCB ಸೋತೇ ಇಲ್ಲ: ಮಾಡೆಲ್ ಸೌಂದರ್ಯಾ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ