RCB Playing XI vs CSK: ಕೊನೆಯ ಪಂದ್ಯಕ್ಕೆ ಆರ್ಸಿಬಿಗೆ ಎಂಟ್ರಿ ಕೊಟ್ಟ ಸ್ಫೋಟಕ ಬ್ಯಾಟರ್: ಸಿಎಸ್ಕೆಗೆ ನಡುಕ ಶುರು
Royal Challengers Bengaluru vs Chennai Super Kings: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ 2024ರ ಬಹುದೊಡ್ಡ ಪಂದ್ಯ ಶನಿವಾರ (ಮೇ. 18) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯಕ್ಕೂ ಆರ್ಸಿಬಿಗೆ ಶುಭಸುದ್ದಿ ಸಿಕ್ಕಿದ್ದು ಈ ಸ್ಫೋಟಕ ಬ್ಯಾಟರ್ ಕಣಕ್ಕಿಳಿಯಲಿದ್ದಾರೆ. ಇಲ್ಲಿದೆ ನೋಡಿ ಆರ್ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಪಟ್ಟಿ.
ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪುತ್ತಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್ಗೆ ಕ್ವಾಲಿಫೈ ಆಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಪ್ಲೇ ಆಫ್ಗೆ ಪ್ರವೇಶಿಸುವ ನಾಲ್ಕನೇ ತಂಡ ಯಾವುದು ಎಂಬುದು ಶನಿವಾರ (ಮೇ. 18) ನಿರ್ಧಾರವಾಗಲಿದೆ. ಈ ದಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಿಎಸ್ಕೆ ಗೆದ್ದರೆ ಪ್ಲೇ ಆಫ್ಗೇರಲಿದೆ. ಆರ್ಸಿಬಿ 11 ಎಸೆತ ಬಾಕಿಯಿರುವಂತೆ ಅಥವಾ 18 ಕ್ಕಿಂತ ಅಧಿಕ ರನ್ಗಳಿಂದ ಗೆದ್ದರೆ ಟಾಪ್ 4 ರಲ್ಲಿ ಸ್ಥಾನ ಪಡೆಯಲಿದೆ.
ಸಾಕಷ್ಟು ಮಹತ್ವ ಪಡೆದುಕೊಂಡಿರುವ ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳಿಗೆ ಶುಭಸುದ್ದಿಯೊಂದು ಸಿಕ್ಕಿದೆ. ಇದರಿಂದ ಸಿಎಸ್ಕೆ ಆತಂಕ ಶುರುವಾಗುವುದು ಖಚಿತ. ಶನಿವಾರದ ಪಂದ್ಯದಲ್ಲಿ ಆರ್ಸಿಬಿ ಪರ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್ವೆನ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಮಹತ್ವದ ಪಂದ್ಯದಲ್ಲಿ ಅಥವಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಈವರೆಗೆ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಆರ್ಸಿಬಿಗೆ ಟಾರ್ಗೆಟ್ ಬೆನ್ನಟ್ಟುವ ಅವಕಾಶ ಸಿಕ್ಕರೆ ಚೇಸಿಂಗ್ ಅನ್ನು ಬೇಗನೇ ಮಾಡಬೇಕಿರುವುದರಿಂದ ಇಲ್ಲಿ ಮ್ಯಾಕ್ಸ್‌ವೆಲ್ ಬಹುಮುಖ್ಯ ಪಾತ್ರವಹಿಸಲಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ಗೆ ಮ್ಯಾಕ್ಸಿ ಕಮ್ಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.
ಐಪಿಎಲ್ನಲ್ಲಿಂದು ಮುಂಬೈ-ಲಕ್ನೋ ಮುಖಾಮುಖಿ: ಯಾವ ತಂಡ ಗೆದ್ದರೆ ಆರ್ಸಿಬಿಗೆ ಲಾಭ?
ವಿಲ್ ಜ್ಯಾಕ್ಸ್ ಅಲಭ್ಯತೆ:
ನಿರ್ಣಾಯಕ ಪಂದ್ಯಕ್ಕೆ ಮುಂಚಿತವಾಗಿ ಆರ್ಸಿಬಿ ಆದ ಬಹುದೊಡ್ಡ ಆಘಾತ ಎಂದರೆ ಇನ್ಫಾರ್ಮ್ ಬ್ಯಾಟರ್ ವಿಲ್ ಜ್ಯಾಕ್ಸ್ ರಾಷ್ಟ್ರೀಯ ಬದ್ಧತೆಗಳ ಕಾರಣದಿಂದ ತವರಿಗೆ ಮರಳಿರುವುದು. ಹೀಗಾಗಿ ಇವರ ಜಾಗಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಬರಲಿದ್ದಾರೆ. ಮ್ಯಾಕ್ಸ್‌ವೆಲ್ ಐಪಿಎಲ್ 2024 ರಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿಲ್ಲ. ಆದರೆ, ಅವರ ಕೌಶಲ್ಯ ಮತ್ತು ನಾಕೌಟ್ ಎನ್‌ಕೌಂಟರ್ ಪಂದ್ಯಗಳನ್ನು ಅನೇಕ ಬಾರಿ ಆಡಿದ ಅನುಭವವು ಆರ್ಸಿಬಿಗೆ ಲಾಭವಾಗಬಹುದು.
ಉಳಿದಂತೆ ಆರ್ಸಿಬಿಯ ಪ್ಲೇಯಿಂಗ್ XI ಬಗ್ಗೆ ನೋಡುವುದಾದರೆ, ಬ್ಯಾಟಿಂಗ್ಗೆ ಸಂಬಂಧಿಸಿದಂತೆ, ಫಾಫ್ ಡು ಪ್ಲೆಸಿಸ್ – ವಿರಾಟ್ ಕೊಹ್ಲಿ ಆರಂಭಿಕರಾಗಿ ಮತ್ತು ರಜತ್ ಪಾಟಿದಾರ್ ನಂ.3 ರಲ್ಲಿ ಆಡಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕು ನಂತರ ಮಹಿಪಾಲ್ ಲೊಮ್ರೋರ್, ಕ್ಯಾಮೆರಾನ್ ಗ್ರೀನ್ ಮತ್ತು ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ. ಕರ್ಣ್ ಶರ್ಮಾ ಸ್ಪಿನ್ ನೇತೃತ್ವ ವಹಿಸಲಿದ್ದಾರೆ. ವಿ ವೈಶಾಕ್ ಸ್ವಪ್ನಿಲ್ ಆಡುವ XI ನಲ್ಲಿ ಕಾಣಿಸಿಕೊಳ್ಳಬಹುದು. ಮೊಹಮ್ಮದ್ ಸಿರಾಜ್ ಮತ್ತು ಲಾಕಿ ಫರ್ಗುಸನ್ ವೇಗಿಗಳಾಗಿದ್ದರೆ.
ಕ್ವಾಲಿಫೈ ಆದ 3 ತಂಡಗಳು: ಕೊನೆಯ ಸ್ಥಾನಕ್ಕೆ ಆರ್ಸಿಬಿ-ಸಿಎಸ್ಕೆ ಪೈಪೋಟಿ, ಪ್ಲೇಆಫ್‌ನ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ
ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI:
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಮಹಿಪಾಲ್ ಲೊಮ್ರೋರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವಿ ವೈಶಾಕ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್
(ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಪ್ರಭುದೇಸಾಯಿ/ಅನುಜ್ ರಾವತ್)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ