IPL 2022: ಈ ಬೌಲರ್​ನಿಂದ RCB ಕಪ್ ಗೆಲ್ಲಬಹುದು ಎಂದ ಕೈಫ್

RCB Team: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್.

IPL 2022: ಈ ಬೌಲರ್​ನಿಂದ RCB ಕಪ್ ಗೆಲ್ಲಬಹುದು ಎಂದ ಕೈಫ್
RCB
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 21, 2022 | 6:30 PM

IPL 2022: ಐಪಿಎಲ್ ಸೀಸನ್​ 15 ಆರ್​ಸಿಬಿ (RCB) ತಂಡವು ಉತ್ತಮ ಆರಂಭ ಪಡೆದಿದೆ. ಆಡಿರುವ 7 ಪಂದ್ಯಗಳಲ್ಲಿ ಆರ್​ಸಿಬಿ ತಂಡವು 5 ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಬಾರಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಆರ್​ಸಿಬಿ ಇದೀಗ ಬೌಲಿಂಗ್ ಲೈನಪ್​ನಲ್ಲೂ ಲಯ ಸಾಧಿಸಿದೆ. ಇದಕ್ಕೆ ಸಾಕ್ಷಿಯೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಆರ್​ಸಿಬಿ ತಂಡವು 18 ರನ್​ಗಳಿಂದ ಜಯ ಸಾಧಿಸಿದ್ದು. ಇತ್ತ ಆರ್​ಸಿಬಿ ತಂಡದ ಉತ್ತಮ ಬೌಲಿಂಗ್ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ನೀಡಿರುವ ಹೇಳಿಕೆಯೊಂದು ಎಲ್ಲರ ಗಮನ ಸೆಳೆದಿದೆ. ಆರ್​ಸಿಬಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿರುವ ಕೈಫ್, ಆರ್​ಸಿಬಿಗೆ ಉತ್ತಮ ಬೌಲರ್ ಒಬ್ಬರ ಅಗತ್ಯವಿತ್ತು. ಇದೀಗ ಜೋಶ್ ಹ್ಯಾಝಲ್​ವುಡ್ ಎಂಟ್ರಿಯೊಂದಿಗೆ ಆರ್​ಸಿಬಿ ತಂಡದ ಬೌಲಿಂಗ್ ಕೂಡ ಬಲಿಷ್ಠವಾಗಿದೆ.

ಜೋಶ್ ಹ್ಯಾಝಲ್​ವುಡ್ ಅತ್ಯುತ್ತಮ ಬೌಲರ್ ಎಂಬುದಕ್ಕೆ ಲಕ್ನೋ ವಿರುದ್ದದ ಪಂದ್ಯವೇ ಸಾಕ್ಷಿ. ಆತ ಆರ್​ಸಿಬಿ ತಂಡಕ್ಕೆ ಕಪ್ ಗೆಲ್ಲಿಸಿಕೊಡಬಲ್ಲ ಬೌಲರ್. ಅಂತಹ ಸಾಮರ್ಥ್ಯ ಹೊಂದಿರುವ ವೇಗಿ ಇರುವಾಗ ಒಂದು ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ನನ್ನ ಪ್ರಕಾರ, ಆರ್​ಸಿಬಿ ಹ್ಯಾಝಲ್​ವುಡ್​ನಂತಹ ಬೌಲರ್​ನ ಅಗತ್ಯವಿತ್ತು. ಏಕೆಂದರೆ ಆರ್​ಸಿಬಿ ಉತ್ತಮ ಬ್ಯಾಟಿಂಗ್ ಲೈನಪ್ ಹೊಂದಿದೆ. ಈ ಹಿಂದೆ ಕೂಡ ಆರ್​ಸಿಬಿ ತಂಡದ ಬ್ಯಾಟಿಂಗ್​ ಲೈನ್ ಉತ್ತಮವಾಗಿತ್ತು. ಕ್ರಿಸ್ ಗೇಲ್, ಎಬಿಡಿ ಅವರಂತಹ ಬ್ಯಾಟ್ಸ್​ಮನ್​ಗಳು ಈ ಹಿಂದೆ ಆರ್​ಸಿಬಿ ತಂಡದಲ್ಲಿದ್ದರು. ಇದಾಗ್ಯೂ ಬೌಲಿಂಗ್​ ಬಲಪಡಿಸಬೇಕಿತ್ತು. ಉತ್ತಮ ಬೌಲರ್​ಗಳನ್ನು ಹೊಂದಿದ್ದರೆ ಮಾತ್ರ ಕಪ್ ಗೆಲ್ಲಲು ಸಾಧ್ಯ. ಇದೀಗ ಜೋಶ್ ಹ್ಯಾಝಲ್​ವುಡ್​ನಂತಹ ಬೌಲರ್​ಗಳು ಆರ್​ಸಿಬಿ ತಂಡದಲ್ಲಿರುವುದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಹೀಗಾಗಿ ಈ ಸಲ ಆರ್​ಸಿಬಿಗೆ ಕಪ್ ಗೆಲ್ಲಲು ಸಾಧ್ಯವಿದೆ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಆರ್​ಸಿಬಿ ಪರ 3 ಪಂದ್ಯವಾಡಿರುವ ಜೋಶ್ ಹ್ಯಾಝಲ್​ವುಡ್ ಒಟ್ಟು 8 ವಿಕೆಟ್ ಪಡೆದಿದ್ದಾರೆ. ಇನ್ನು ಮೂರು ಪಂದ್ಯಗಳಲ್ಲಿ 12 ಓವರ್ ಬೌಲಿಂಗ್ ಮಾಡಿರುವ ಹ್ಯಾಝಲ್​ವುಡ್ ನೀಡಿರುವುದು ಕೇವಲ 86 ರನ್​ಗಳು ಮಾತ್ರ. ಹೀಗಾಗಿಯೇ ಜೋಶ್ ಹ್ಯಾಝಲ್​ವುಡ್-ಹರ್ಷಲ್ ಪಟೇಲ್ ಜುಗಲ್​ಬಂಧಿಯೊಂದಿಗೆ ಆರ್​ಸಿಬಿ ಬೌಲಿಂಗ್ ಲೈನಪ್ ಕೂಡ ಬಲಿಷ್ಠವಾಗಿದೆ. ಅದರಂತೆ ಮೊಹಮ್ಮದ್ ಕೈಫ್ ಹೇಳಿದಂತೆ ಈ ಸಲ ಆರ್​ಸಿಬಿ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.

RCB Team: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ