RR vs DC: ರಾಜಸ್ಥಾನ್ ವಿರುದ್ಧ ಡೆಲ್ಲಿ ಗೆಲ್ಲುತ್ತಿದ್ದಂತೆ ಆರ್​​ಸಿಬಿ ತಂಡಕ್ಕೆ ಫುಲ್ ಖುಷ್: ಯಾಕೆ ಗೊತ್ತೇ?

| Updated By: Vinay Bhat

Updated on: May 12, 2022 | 11:29 AM

RCB, IPL 2022: ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (RR vs DC) ತಂಡದ ಈ ಜಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ತುಂಬಾನೆ ಖುಷಿ ನೀಡಿದೆ. ಇದಕ್ಕೆ ಕಾರಣ ಕೂಡ ಇದೆ.

RR vs DC: ರಾಜಸ್ಥಾನ್ ವಿರುದ್ಧ ಡೆಲ್ಲಿ ಗೆಲ್ಲುತ್ತಿದ್ದಂತೆ ಆರ್​​ಸಿಬಿ ತಂಡಕ್ಕೆ ಫುಲ್ ಖುಷ್: ಯಾಕೆ ಗೊತ್ತೇ?
RR vs DC and RCB IPL 2022
Follow us on

2022ರ ಇಂಡಿಯನ್ ಪ್ರೀಮಿಯರ್ ಲೀಗ್​ನ 58ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (RR vs DC) 8 ವಿಕೆಟ್​ಗಳ ಅಮೋಘ ಗೆಲುವು ಕಂಡಿತು. ಡಿಸಿ ಬ್ಯಾಟರ್ ಮಿಚೆಲ್ ಮಾರ್ಶ್ (Mitchell Marsh)​ ಅವರ ಸ್ಫೋಟಕ ಆಟ ಹಾಗೂ ಡೇವಿಡ್ ವಾರ್ನರ್ ಅವರ ಅತ್ಯುತ್ತಮ ಕೊಡುಗೆಯ ನೆರವಿನಿಂದ ಗೆಲುವು ಸಾಧಿಸಿದ ಪಂತ್ ಪಡೆ ಪ್ಲೇ ಆಫ್ ರೇಸ್​ನಲ್ಲಿ ಉಳಿದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಜಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ತುಂಬಾನೆ ಖುಷಿ ನೀಡಿದೆ. ಇದಕ್ಕೆ ಕಾರಣ ಕೂಡ ಇದೆ. ಸದ್ಯಕ್ಕೆ ಪಾಯಿಂಟ್ ಟೇಬಲ್​​ನಲ್ಲಿ ಆರ್​ಸಿಬಿ 12 ಪಂದ್ಯಗಳಲ್ಲಿ 14 ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧ ಸೋತ ಪರಿಣಾಮ ಆರ್​​ಆರ್​ ಕೂಡ ಆರ್​ಸಿಬಿ ರೀತಿಯಲ್ಲೇ ಇದ್ದು ರನ್​​ರೇಟ್ ಆಧಾರದ ಮೇಲೆ ಒಂದು ಸ್ಥಾನ ಮೇಲಿದೆಯಷ್ಟೆ. ಹೀಗಾಗಿ ಡುಪ್ಲೆಸಿಸ್ ಪಡೆಗೆ ಉಳಿದಿರುವ ಎರಡೂ ಪಂದ್ಯವನ್ನೀಗ ಉತ್ತಮ ಮೊತ್ತದ ಅಂತರದಲ್ಲಿ ಗೆದ್ದರೆ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಹೆಚ್ಚಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಉತ್ತಮ ಲಯದಲ್ಲಿದ್ದ ಜೋಸ್ ಬಟ್ಲರ್ 7 ರನ್ ಗಳಿಸಿ ಔಟ್ ಆದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ 19 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ನಡುವೆ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಆರ್. ಅಶ್ವಿನ್ ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಅವರಿಗೆ ದೇವದತ್ ಪಡಿಕ್ಕಲ್ ಅವರಿಂದ ಉತ್ತಮ ಬೆಂಬಲ ದೊರಕಿತು. 37 ಎಸೆತಗಳಲ್ಲಿ ಅಶ್ವಿನ್ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿ ಔಟಾದರು. ಇವರ ಖಾತೆಯಿಂದ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಬಂದವು.

ಕೊನೆಯ ಹಂತದಲ್ಲಿ ಪಡಿಕ್ಕಲ್‌ಗೆ ನಾಯಕ ಸಂಜು ಸ್ಯಾಮ್ಸನ್ (6) ಹಾಗೂ ರಿಯಾನ್ ಪರಾಗ್ (9) ಅವರಿಂದ ಉತ್ತಮ ಬೆಂಬಲ ದೊರಕಲಿಲ್ಲ. ಪ್ರಮುಖ ಬ್ಯಾಟರ್​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಅರ್ಧಶತಕದ ಅಂಚಿನಲ್ಲಿ ಪಡಿಕ್ಕಲ್ ಸಹ ಔಟ್ ಆಗುವುದರೊಂದಿಗೆ ಸವಾಲಿನ ಮೊತ್ತ ಪೇರಿಸುವ ರಾಜಸ್ಥಾನ್ ಪ್ರಯತ್ನಕ್ಕೆ ಹಿನ್ನಡೆಯಾಯಿತು. 30 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 48 ರನ್ ಗಳಿಸಿದರು. ಅಂತಿಮವಾಗಿ ಆರ್​ಆರ್​ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

ಇದನ್ನೂ ಓದಿ
IPL 2022: ಸಚಿನ್​ರ 13 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಗಿಲ್
MS Dhoni: ಸೂಪರ್ ಬೆಡಗಿ ಜೊತೆ ಸಿನಿಮಾ ನಿರ್ಮಿಸಲು ಮುಂದಾದ ಧೋನಿ..!
IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
IPL 2022: ಅಂದು ಲಯನ್ಸ್, ಇಂದು ಟೈಟನ್ಸ್: ಗುಜರಾತ್ ತಂಡದ ಫ್ಯಾನ್ಸ್​ಗೆ ಹೊಸ ಚಿಂತೆ ಶುರು..!

161 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌, ಆರಂಭದಲ್ಲೇ ಶ್ರೀಕರ್‌ ಭರತ್(0)‌ ವಿಕೆಟ್‌ ಕಳೆದುಕೊಂಡಿತು. ಎರಡನೇ ವಿಕೆಟ್​ಗೆ ಜೊತೆಯಾದ ಡೇವಿಡ್‌ ವಾರ್ನರ್‌ 52* ರನ್‌(41 ಬಾಲ್‌, 5 ಬೌಂಡರಿ, 1 ಸಿಕ್ಸ್‌) ಹಾಗೂ ಮಿಚೆಲ್‌ ಮಾರ್ಷ್‌ 89 ರನ್‌(62 ಬಾಲ್‌, 5 ಬೌಂಡರಿ, 7 ಸಿಕ್ಸ್‌) ಅಬ್ಬರ ಬ್ಯಾಟಿಂಗ್‌ ಪ್ರದರ್ಶಿಸಿದರು. ರಾಜಸ್ಥಾನ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದ ಈ ಜೋಡಿ 143 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಸ್ಪೋಟಕ ಆಟವಾಡಿದ ಮಾರ್ಷ್‌, 89 ರನ್‌ಗಳಿಸಿ ಔಟಾದರು. ನಂತರ ಬಂದ ರಿಷಭ್‌ ಪಂತ್‌(13*) ತಂಡವನ್ನು 18.1 ಓವರ್​ನಲ್ಲೇ ಗೆಲುವಿನ ದಡಸೇರಿದರು.

ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಇದೀಗ ಪ್ಲೇ-ಆಫ್‌ ರೇಸ್‌ನಲ್ಲಿ ಮತ್ತೊಂದು ಮೆಟ್ಟಿಲೇರಿದೆ. 12 ಪಂದ್ಯಗಳಿಂದ 12 ಪಾಯಿಂಟ್ಸ್‌ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌, ಪಾಯಿಂಟ್ಸ್‌ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಇದರೊಂದಿಗೆ ಪ್ಲೇ-ಆಫ್‌ ರೇಸ್‌ ಇನ್ನಷ್ಟು ರೋಚಕತೆ ಸೃಷ್ಟಿಸಿದೆ.

ಈ ಸುದ್ದಿಯನ್ನು ಇಂಗ್ಲಿಷ್​​​​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:54 am, Thu, 12 May 22