ಮಿಸ್ಟರ್ ಅಂಡ್ ಮಿಸೆಸ್ ಮ್ಯಾಕ್ಸ್‌ವೆಲ್; ಚೆನ್ನೈ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಆರ್​ಸಿಬಿ ಆಲ್​ರೌಂಡರ್

| Updated By: ಪೃಥ್ವಿಶಂಕರ

Updated on: Mar 19, 2022 | 2:37 PM

Glenn Maxwell: ವಿನಿ ರಾಮನ್ ಅವರೇ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗಿನ ಮದುವೆಯ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿರುವ ಅವರು ಮಿಸ್ಟರ್ ಅಂಡ್ ಮಿಸೆಸ್ ಮ್ಯಾಕ್ಸ್‌ವೆಲ್ ಎಂದು ಬರೆದುಕೊಂಡಿದ್ದಾರೆ.

ಮಿಸ್ಟರ್ ಅಂಡ್ ಮಿಸೆಸ್ ಮ್ಯಾಕ್ಸ್‌ವೆಲ್; ಚೆನ್ನೈ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಆರ್​ಸಿಬಿ ಆಲ್​ರೌಂಡರ್
ಗ್ಲೆನ್ ಮ್ಯಾಕ್ಸ್‌ವೆಲ್ ವಿನಿ ರಾಮನ್ ಮದುವೆ
Follow us on

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ಆರ್​ಸಿಬಿ (RCB)ಯ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ತಮ್ಮ ಭಾರತೀಯ ಮೂಲದ ಗೆಳತಿ ವಿನಿ ರಾಮನ್ ಅವರನ್ನು ವಿವಾಹವಾಗಿದ್ದಾರೆ. ಈ ನವಜೋಡಿಗಳು ಮಾರ್ಚ್ 18 ರಂದು ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಮ್ಯಾಕ್ಸ್‌ವೆಲ್ ಮತ್ತು ವಿನ್ನಿ ಇಬ್ಬರೂ ದೀರ್ಘಕಾಲದಿಂದ ಒಟ್ಟಿಗಿದ್ದರು, ಎರಡು ವರ್ಷಗಳ ಹಿಂದೆ 14 ಮಾರ್ಚ್ 2020 ರಂದು ಈ ಪ್ರಣಯ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೊರೊನಾದಿಂದಾಗಿ ಈ ಜೋಡಿ ತಮ್ಮ ಮದುವೆಗಾಗಿ ಬಹಳ ಸಮಯ ಕಾಯಬೇಕಾಯಿತು. ಈ ಶುಭ ಸಮಾಚಾರವನ್ನು ವಿನಿ ರಾಮನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಪೋಸ್ಟ್‌ ಮಾಡುವ ಮೂಲಕ ಬಗ್ಗೆ ಬಹಿರಂಗಪಡಿಸಿದ್ದಾರೆ. ಅದೇ ಸಮಯದಲ್ಲಿ, ಐಪಿಎಲ್ ಫ್ರಾಂಚೈಸಿ RCB ಕೂಡ ಈ ನವವಿವಾಹಿತ ಜೋಡಿಯನ್ನು ಅಭಿನಂದಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮ್ಯಾಕ್ಸ್‌ವೆಲ್ ಮತ್ತು ವಿನ್ನಿ ಮಾರ್ಚ್ 27 ರಂದು ಮದುವೆಯಾಗಲು ನಿಶ್ಚಯಿಸಿದ್ದರಂತೆ.

ವಿನಿ ರಾಮನ್ ದಕ್ಷಿಣ ಭಾರತದ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದು, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ಮತ್ತೊಂದೆಡೆ, ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯನ್ ತಂಡದ ಪ್ರಮುಖ ಸದಸ್ಯನಾಗಿರುವುದರ ಜೊತೆಗೆ ಈಗ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಸಂಭ್ರಮ ಹಂಚಿಕೊಂಡ ವಿನಿ ರಾಮನ್
ವಿನಿ ರಾಮನ್ ಅವರೇ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗಿನ ಮದುವೆಯ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿರುವ ಅವರು ಮಿಸ್ಟರ್ ಅಂಡ್ ಮಿಸೆಸ್ ಮ್ಯಾಕ್ಸ್‌ವೆಲ್ ಎಂದು ಬರೆದುಕೊಂಡಿದ್ದಾರೆ.

ಮ್ಯಾಕ್ಸ್‌ವೆಲ್ ಮದುವೆಗೆ RCB ಅಭಿನಂದನೆ
ಆರ್​​ಸಿಬಿ ಕೂಡ ತಂಡದ ಸ್ಟಾರ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ವೈವಾಹಿಕ ಜೀವನಕ್ಕೆ ಶುಭಕೋರಿದೆ.

ಸದ್ಯ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಆದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಆ ಐತಿಹಾಸಿಕ ಪ್ರವಾಸದ ಭಾಗವಾಗಿಲ್ಲ. ಮದುವೆಯ ಕಾರಣದಿಂದ ಅವರು ಆ ಪ್ರವಾಸದಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಜೊತೆಗೆ ಐಪಿಎಲ್‌ನ ಮೊದಲ ವಾರದಲ್ಲಿಯೂ ಆಡುವುದಿಲ್ಲ ಎಂದು ವರದಿಯಾಗಿದೆ. ಐಪಿಎಲ್ 2022 ರಲ್ಲಿ RCB ತನ್ನ ಮೊದಲ ಪಂದ್ಯವನ್ನು ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಾಗಿದೆ.

ನಾಯಕತ್ವದ ಹೊರೆಯನ್ನು ತೆಗೆದುಹಾಕಿದ ನಂತರ, ವಿರಾಟ್ ಕೊಹ್ಲಿ ಈಗ ಮೊದಲಿಗಿಂತ ಹೆಚ್ಚು ಮುಕ್ತವಾಗಿ ಆಡುವುದನ್ನು ಕಾಣಬಹುದು ಎಂದು ಮ್ಯಾಕ್ಸ್‌ವೆಲ್ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಮತ್ತು ಈ ಸುದ್ದಿ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಗಂಟೆಗಿಂತ ಕಡಿಮೆಯಿಲ್ಲ ಎಂಬುದನ್ನು ಎಚ್ಚರಿಸಿದ್ದರು.

ಇದನ್ನೂ ಓದಿ:IPL 2022: ವಿರಾಟ್ ಕೊಹ್ಲಿ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ ಗ್ಲೆನ್ ಮ್ಯಾಕ್ಸ್​ವೆಲ್