India vs Australia Women: ಮಹಿಳಾ ವಿಶ್ವಕಪ್​​ನಲ್ಲೇ ಅತ್ಯಂತ ದೊಡ್ಡ ಸಿಕ್ಸ್: ದಾಖಲೆ ಬರೆದ ಸ್ಫೋಟಕ ಬ್ಯಾಟರ್ ಪೂಜಾ

Women's World Cup, Pooja Vastrakar: ನಾಯಕಿ ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಮತ್ತು ಹರ್ಮನ್​ಪ್ರೀತ್ ಕೌರ್ ಅವರ ಅಮೋಘ ಅರ್ಧಶತಕದ ಜೊತೆ ಪೂಜಾ ವಸ್ತ್ರಾಕರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ 277 ರನ್ ಸಿಡಿಸಿದೆ.

India vs Australia Women: ಮಹಿಳಾ ವಿಶ್ವಕಪ್​​ನಲ್ಲೇ ಅತ್ಯಂತ ದೊಡ್ಡ ಸಿಕ್ಸ್: ದಾಖಲೆ ಬರೆದ ಸ್ಫೋಟಕ ಬ್ಯಾಟರ್ ಪೂಜಾ
Pooja Vastrakar IND vs AUS CWC 2022
Follow us
TV9 Web
| Updated By: Vinay Bhat

Updated on: Mar 19, 2022 | 11:16 AM

ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವನಿತೆಯರ (India vs Asutralia Women) ವಿರುದ್ಧ ಸೆಣೆಸಾಟ ನಡೆಸುತ್ತಿದ್ದು ಸವಾಲಿನ ಟಾರ್ಗೆಟ್ ನೀಡಿದೆ. ನಾಯಕಿ ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಮತ್ತು ಹರ್ಮನ್​ಪ್ರೀತ್ ಕೌರ್ (Harmanpreet Kaur) ಅವರ ಅಮೋಘ ಅರ್ಧಶತಕದ ಜೊತೆ ಪೂಜಾ ವಸ್ತ್ರಾಕರ್ (Pooja Vastrakar) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ 277 ರನ್ ಸಿಡಿಸಿದೆ. ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಕೂಡ ಬಿರುಸಿನ ಆರಂಭ ಪಡೆದುಕೊಂಡಿದೆ. ಈ ಪಂದ್ಯ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಭಾರತ ಎದುರಾಳಿಗೆ ಕಠಿಣ ಟಾರ್ಗೆಟ್ ನೀಡಲು ಪ್ರಮುಖ ಕಾರಣ ಕೊನೇ ಹಂತದಲ್ಲಿ ಪೂಜಾ ವಸ್ತ್ರಾಕರ್ ನೀಡಿದ ಸ್ಫೋಟಕ ಪ್ರದರ್ಶನ. ಕೇವಲ 28 ಎಸೆತಗಳಲ್ಲಿ 1 ಫೋರ್ ಮತ್ತು 2 ಭರ್ಜರಿ ಸಿಕ್ಸರ್ ಸಿಡಿಸಿ 34 ರನ್ ಗಳಿಸಿ ಇನ್ನಿಂಗ್ಸ್​ನ ಕೊನೇ ಎಸೆತದಲ್ಲಿ ರನೌಟ್​ಗೆ ಬಲಿಯಾದರು.

ಕಾಂಗರೂ ಪಡೆಯ ಬೌಲರ್​​ಗಳನ್ನು ಕಾಡಿದ ಪೂಜಾ ಎರಡು ಬೊಂಬಾಟ್ ಸಿಕ್ಸರ್​​ಗಳ ಮೂಲಕ ಗಮನ ಸೆಳೆದರು. ಅದರಲ್ಲೂ ಇವರು ಸಿಡಿಸಿದ ಒಂದು ಸಿಕ್ಸ್ ದಾಖಲೆಯನ್ನೇ ಬರೆಯಿತು. ಹೌದು, ಮೆಘನ್ ಶೂಟ್ ಅವರ 49ನೇ ಓವರ್​​ನ 5ನೇ ಎಸೆತದಲ್ಲಿ ಪೂಜಾ ಅವರು ಲೆಂತ್ ವಾಲ್ ಅನ್ನು ಲಾಂಗ್ ಆನ್ ಮೂಲಕ ಸಿಕ್ಸರ್​ಗೆ ಅಟ್ಟಿದರು. ಈ 81 ಮೀಟರ್​ನ ಸಿಕ್ಸ್ ನೂತನ ದಾಖಲೆ ಬರೆದಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ರಲ್ಲಿ ದಾಖಲಾದ ಅತ್ಯಂತ ದೊಡ್ಡದಾದ ಸಿಕ್ಸ್​ ಇದಾಗಿದೆ.

ಈಡನ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆರಂಭದಲ್ಲಿ ಮೆಗ್‌ ಲ್ಯಾನಿಂಗ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡುವಲ್ಲಿ ಆಸ್ಟ್ರೇಲಿಯಾದ ಬೌಲರ್​​​ಗಳು ಯಶಸ್ವಿಯಾದರು. ಭರ್ಜರಿ ಫಾರ್ಮ್​​ನಲ್ಲಿದ್ದ ಸ್ಮೃತಿ ಮಂದಾನ ಕೇವಲ 11 ಎಸೆತಗಳಲ್ಲಿ 10 ರನ್​ಗೆ ಔಟಾದರೆ, ಶಫಾಲಿ 16 ಎಸೆತಗಳಲ್ಲಿ ತಲಾ 1 ಫೋರ್, ಸಿಕ್ಸರ್​​ನೊಂದಿಗೆ 12 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು.

ಕೇವಲ 28 ರನ್‌ಗಳಿಗೆ ಆರಂಭಿಕ ಇಬ್ಬರು ಬ್ಯಾಟರ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್ ಹಾಗೂ ಯಾಶ್ತಿಕಾ ಭಾಟಿಯಾ ಮೂರನೇ ವಿಕೆಟ್‌ಗೆ 130 ರನ್‌ಗಳ ಸಮಯೋಚಿತ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ವೃತ್ತಿಜೀವನದ ಎರಡನೇ ಅರ್ಧಶತಕ ಚಚ್ಚಿದ ಯಾಶ್ತಿಕಾ ಭಾಟಿಯಾ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಿದರು. ಯಾಶ್ತಿಕಾ ಭಾಟಿಯಾ 83 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 59 ರನ್‌ ಬಾರಿಸಿ ಡಾರ್ಸಿ ಬ್ರೌನ್‌ಗೆ ವಿಕೆಟ್ ಒಪ್ಪಿಸಿದರು. ಮಿಥಾಲಿ 96 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 68 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇವರಿಬ್ಬರ ನಿರ್ಗಮನದ ಬಳಿಕ ರಿಚ್ಚಾ ಘೋಷ್ (8) ಹಾಗೂ ಸ್ನೇಹ್ ರಾಣ (0) ಬೇಗನೆ ಔಟಾದರು. ಆದರೆ, ನಿಂತು ಆಡಿದ ಹರ್ಮನ್​ಪ್ರೀತ್ ಕೌರ್ ಕೊನೇ ಹಂತದಲ್ಲಿ ಅಬ್ಬರಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಇವರು ಕೇವಲ 47 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 57 ರನ್ ಚಚ್ಚಿದರು. ಇವರ ಜೊತೆ ಸೇರಿದ ಪೂಜಾ ವಸ್ತ್ರಾಕರ್ 28 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಿಡಿಸಿ  34 ರನ್ ಗಳಿಸಿದರು. ಭಾರತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿತು.

India vs Australia: ಹರ್ಮನ್ ಸ್ಫೋಟಕ ಆಟ, ಮಿಥಾಲಿ-ಯಸ್ತಿಕಾ ಶತಕದ ಜೊತೆಯಾಟ: ಆಸೀಸ್​ಗೆ 278 ರನ್ಸ್ ಟಾರ್ಗೆಟ್

IPL 2022 Captains: ಎಂಎಸ್ ಧೋನಿಯಿಂದ ಡುಪ್ಲೆಸಿಸ್ ವರೆಗೆ: ಐಪಿಎಲ್ 2022ರ ನಾಯಕರ ಪಟ್ಟಿ ಇಲ್ಲಿದೆ ನೋಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ