IPL 2022: ನೀಲಿ ಬಣ್ಣಕ್ಕೆ ತಿರುಗಿದ ಕೆಂಪು: ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ ಮುಂಬೈ, RCB
RCB Turns Blue: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವಣ ಪಂದ್ಯವಾಗಿ ಮಾರ್ಪಟ್ಟಿದೆ.
IPL 2022: ಐಪಿಎಲ್ನ 69ನೇ ಪಂದ್ಯವು 2 ತಂಡಗಳ ಪಾಲಿಗೆ ನಿರ್ಣಾಯಕ. ಆದರೆ ಇಲ್ಲಿ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ಗೆ ಇದು ಔಪಚಾರಿಕ ಪಂದ್ಯ ಎಂಬುದು ವಿಶೇಷ. ಅಂದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ (MI vs DC) ಗೆದ್ದರೆ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಅದೇ ವೇಳೆ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದರೆ, ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್ ಆಡಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಆರ್‌ಸಿಬಿ ಪಾಲಿಗೂ ನಿರ್ಣಾಯಕ ಪಂದ್ಯವಾಗಿ ಮಾರ್ಪಟ್ಟಿದೆ. ಹೀಗಾಗಿ ಇತ್ತ ಆರ್‌ಸಿಬಿ ಕಡೆಯಿಂದ ಮುಂಬೈಗೆ ಫುಲ್ ಸಪೋರ್ಟ್ ವ್ಯಕ್ತವಾಗುತ್ತಿದೆ. ಅದರಲ್ಲೂ ರೆಡ್ ಆರ್ಮಿ ಎಂದೇ ಗುರುತಿಸಿಕೊಂಡಿದ್ದ ಆರ್‌ಸಿಬಿ ತನ್ನ ಲೋಗೋವನ್ನು ಬ್ಲೂ ಬಣ್ಣಕ್ಕೆ ಬದಲಿಸಿದೆ.
ಇಲ್ಲಿ ಮುಂಬೈ ಇಂಡಿಯನ್ಸ್ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಬೆಂಬಲ ಸೂಚಿಸುವ ಸಲುವಾಗಿ ಲೋಗೋವನ್ನು ಬ್ಲೂ ಬಣ್ಣದ ಹಿನ್ನೆಲೆಯಲ್ಲಿ ಚಿತ್ರಿಸಿದೆ. ಈ ಮೂಲಕ ಆರ್‌ಸಿಬಿ ತಂಡವು ಮುಂಬೈ ಇಂಡಿಯನ್ಸ್ ತಂಡದ ಬೆಂಬಲಕ್ಕೆ ನಿಂತಿದೆ. ಅಷ್ಟೇ ಅಲ್ಲದೆ ಆರ್‌ಸಿಬಿ ಅಭಿಮಾನಿಗಳು ಕೂಡ ಇಂದು ಮುಂಬೈ ಇಂಡಿಯನ್ಸ್ ತಂಡಕ್ಕೆ ಫುಲ್ ಸಪೋರ್ಟ್ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದ ಬಳಿಕ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಸೇರಿದಂತೆ ಬಹುತೇಕ ಆರ್‌ಸಿಬಿ ಆಟಗಾರರು ಮುಂಬೈ ಇಂಡಿಯನ್ಸ್ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿರಾಟ್ ಕೊಹ್ಲಿ, ಶನಿವಾರ ಮುಂಬೈ ಇಂಡಿಯನ್ಸ್ಗೆ ಹೆಚ್ಚುವರಿ 25 ಮಂದಿ ಬೆಂಬಲಿಗರು (ಆರ್‌ಸಿಬಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ) ಇರಲಿದ್ದಾರೆ ಎಂದಿದ್ದರು.
ಹೊಸ ಬೆಂಬಲಿಗರು ಕ್ರೀಡಾಂಗಣದಿಂದ ಹುರಿದುಂಬಿಸುವುದನ್ನು ಸಹ ಕಾಣಬಹುದು ಎನ್ನುವ ಮೂಲಕ ವಿರಾಟ್ ಕೊಹ್ಲಿ ಪರೋಕ್ಷವಾಗಿ ಮುಂಬೈ ಇಂಡಿಯನ್ಸ್ ನಮ್ಮ ಸಪೋರ್ಟ್ ಎಂದು ತಿಳಿಸಿದ್ದಾರೆ. ಇದೀಗ ವಿಶೇಷ ಪೋಸ್ಟ್ಕಾರ್ಡ್ ಲೆಟರ್ನೊಂದಿಗೆ ಇಡೀ ಆರ್‌ಸಿಬಿ ತಂಡವು ನಿಮ್ಮ ಬೆಂಬಲಕ್ಕೆ ಇರಲಿದೆ. ಅದು ಕೂಡ ಒಂದೇ ಕುಟುಂಬದಂತೆ..ನೀವು ಡೆಲ್ಲಿ ವಿರುದ್ದ ನಿರ್ಭೀತಿಯಿಂದ ಗೆಲ್ಲಿ ಎಂದು ಹಾರೈಸಿದ್ದಾರೆ.
#RedTurnsBlue for today! A letter to @mipaltan from RCB. ??
We’re backing you to #PlayBold all the way. Go get ‘em, champs! ??#WeAreChallengers #IPL2022 #Mission2022 #RCB #ನಮ್ಮRCB #MIvDC pic.twitter.com/MDFYFv20lb
— Royal Challengers Bangalore (@RCBTweets) May 21, 2022
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ನಡುವಣ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೆ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಇತ್ತ ಮುಂಬೈ ಇಂಡಿಯನ್ಸ್ ಗೆದ್ದರೆ ಮಾತ್ರ ಆರ್ಸಿಬಿಗೆ ಚಾನ್ಸ್. ಹೀಗಾಗಿಯೇ ಮುಂಬೈ ಇಂಡಿಯನ್ಸ್ಗೆ ಆರ್‌ಸಿಬಿ ಬೆಂಬಲ ವ್ಯಕ್ತಪಡಿಸುತ್ತಿದೆ. ಅದರಲ್ಲೂ #RedTurnsBlue ಹ್ಯಾಶ್ಟ್ಯಾಗ್ ಮೂಲಕ ಇದೀಗ ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಹುರಿದುಂಬಿಸುತ್ತಿರುವುದು ವಿಶೇಷ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.