RCB Unbox: ಆನ್​ಲೈನ್​ಲ್ಲಿ ಆರ್​ಸಿಬಿ ಅನ್‌ಬಾಕ್ಸ್ ಈವೆಂಟ್ ನೋಡಲು ಕೂಡ ಹಣ ಕೊಡಬೇಕು: ಎಷ್ಟು ರೂ.?, ಎಷ್ಟು ಗಂಟೆಗೆ?

RCB Unbox Live Streaming 2024: ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಹುನಿರೀಕ್ಷಿತ ಆರ್‌ಸಿಬಿ ಅನ್‌ಬಾಕ್ಸ್ ಮೆಗಾ ಈವೆಂಟ್‌ ಆಯೋಜಿಸಲಾಗಿದೆ. ವಿಶೇಷ ಎಂದರೆ ಇದನ್ನು ಆನ್​ಲೈನ್​ನಲ್ಲಿ ವೀಕ್ಷಿಸಲು ಕೂಡ ಹಣ ನೀಡಬೇಕು. ಹಾಗಾದರೆ, ಈವೆಂಟ್ ಎಷ್ಟು ಗಂಟೆಗೆ ಶುರು?, ಎಷ್ಟು ಹಣ ನೀಡಬೇಕು?, ಇಲ್ಲಿದೆ ಮಾಹಿತಿ.

RCB Unbox: ಆನ್​ಲೈನ್​ಲ್ಲಿ ಆರ್​ಸಿಬಿ ಅನ್‌ಬಾಕ್ಸ್ ಈವೆಂಟ್ ನೋಡಲು ಕೂಡ ಹಣ ಕೊಡಬೇಕು: ಎಷ್ಟು ರೂ.?, ಎಷ್ಟು ಗಂಟೆಗೆ?
RCB Unbox 2024
Follow us
Vinay Bhat
|

Updated on:Mar 19, 2024 | 10:31 AM

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) 2024 ರ ಸೀಸನ್ ಪ್ರಾರಂಭವಾಗಲು ಕೇವಲ ಮೂರು ದಿನಗಳು ಉಳಿದಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಮಾರ್ಚ್ 19, ಮಂಗಳವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮ ನಡೆಯಲಿದೆ. ಆರ್​ಸಿಬಿ ಮಾರ್ಚ್ 22 ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಮ್ಯಾಚ್ ಚೆಪಾಕ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಏನಿದು ಆರ್​ಸಿಬಿ ಅನ್​ಬಾಕ್ಸ್ ಈವೆಂಟ್?:

ಐಪಿಎಲ್ 2024 ಆರಂಭಕ್ಕೂ ಮುನ್ನ ಅಭಿಮಾನಿಗಳಿಗಾಗಿ ಆರ್​ಸಿಬಿ ಫ್ರಾಂಚೈಸಿ ಕಳೆದೆರಡು ವರ್ಷಗಳಿಂದ “ಆರ್​ಸಿಬಿ ಅನ್​ಬಾಕ್ಸ್​’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ಇದರಲ್ಲಿ ಫ್ರಾಂಚೈಸಿಯು ಕೆಲ ನೂತನ ಘೋಷಣೆ ಮಾಡಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಆರ್​ಸಿಬಿ ವುಮೆನ್ಸ್ ಭಾಗಿ:

ಪುರುಷರ ತಂಡದ ಅಭಿಯಾನವು ಇನ್ನೂ ಪ್ರಾರಂಭವಾಗದಿದ್ದರೂ, ಈ ಬಾರಿ ಎಲ್ಲರ ಕಣ್ಣುಗಳು ಮಹಿಳಾ ತಂಡದ ಮೇಲೆ ಇದೆ. ಭಾನುವಾರ (ಮಾರ್ಚ್ 17) 2024 ರ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಗೆಲ್ಲುವ ಮೂಲಕ ಆರ್​ಸಿಬಿ ಇತಿಹಾಸವನ್ನು ಸೃಷ್ಟಿಸಿತು. ಟಿ20 ಲೀಗ್​ನಲ್ಲಿ ಆರ್​ಸಿಬಿಗೆ ದಕ್ಕಿದ ಮೊದಲ ಟ್ರೋಫಿ ಇದಾಗಿದೆ. ಫ್ರಾಂಚೈಸ್ ತನ್ನ 16 ವರ್ಷಗಳ ಇತಿಹಾಸದಲ್ಲಿ ಮೊದಲ ಟ್ರೋಫಿ ಗೆದ್ದಿದೆ. ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ಮಹಿಳಾ ತಂಡದ ಅನೇಕ ಸದಸ್ಯರು ಆರ್‌ಸಿಬಿ ಅನ್‌ಬಾಕ್ಸ್ ಮೆಗಾ ಈವೆಂಟ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಐಪಿಎಲ್ ಆಡಲು ಕೆಎಲ್ ರಾಹುಲ್​ಗೆ ಗ್ರೀನ್ ಸಿಗ್ನಲ್ ನೀಡಿದ ಎನ್​ಸಿಎ; ಆದರೆ..?

ಇಂದಿನ ಈವೆಂಟ್​ನಲ್ಲಿ ಫ್ರಾಂಚೈಸ್ ಹೆಸರನ್ನು ಬದಲಾಯಿಸುವ ಸಾಧ್ಯತೆಯಿದೆ. Royal Challengers Bangalore ಬದಲು Royal Challengers Bengaluru ಎಂದು ಮರುನಾಮಕರಣಗೊಳ್ಳುವ ನಿರೀಕ್ಷೆಯಿದೆ.

ಇನ್ನು ವೈಯಕ್ತಿಕ ಕಾರಣಗಳಿಂದಾಗಿ ಭಾರತ-ಇಂಗ್ಲೆಂಡ್ ಸರಣಿಯ ಎಲ್ಲಾ ಐದು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಎರಡು ತಿಂಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಈವೆಂಟ್‌ನಲ್ಲಿ 2024 ರ ಐಪಿಎಲ್ ಸೀಸನ್‌ಗಾಗಿ ಆರ್‌ಸಿಬಿಯ ಜೆರ್ಸಿಯನ್ನು ಸಹ ಬಹಿರಂಗಪಡಿಸಲಾಗುತ್ತದೆ. ಕ್ರೀಡಾಂಗಣಕ್ಕೆ ಹಾಜರಾಗಲು ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆರ್​ಸಿಬಿ ಅನ್‌ಬಾಕ್ಸ್ 2024 ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲ ವಿಚಾರ ಇಲ್ಲಿದೆ.

ಆರ್​ಸಿಬಿ ಅನ್‌ಬಾಕ್ಸ್ 2024 ಈವೆಂಟ್ ಯಾವಾಗ ನಡೆಯುತ್ತದೆ? ಆರ್​ಸಿಬಿ ಅನ್‌ಬಾಕ್ಸ್ ಈವೆಂಟ್ 2024 ಮಂಗಳವಾರ (ಮಾರ್ಚ್ 19) 4:00 PM IST ಯಿಂದ ನಡೆಯಲಿದೆ.

ಮುಂಬೈ ತಂಡದಿಂದ ಹೊರಬಿದ್ದ ಸ್ಟಾರ್ ವೇಗಿ! ಬದಲಿಯಾಗಿ ಬಂದಿದ್ಯಾರು?

ಆರ್​ಸಿಬಿ ಅನ್‌ಬಾಕ್ಸ್ 2024 ಈವೆಂಟ್ ಎಲ್ಲಿ ನಡೆಯುತ್ತದೆ? ಬೆಂಗಳೂರಿನ ಐಕಾನಿಕ್ ಎಂ ಚಿನ್ನಸ್ವಾಮಿ ಸ್ಟೇಡಿಯಂ RCB Unbox 2024 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆರ್​ಸಿಬಿ ಅನ್‌ಬಾಕ್ಸ್ 2024 ಈವೆಂಟ್ ಅನ್ನು ಎಲ್ಲಿ ವೀಕ್ಷಿಸಬೇಕು? ಆರ್​ಸಿಬಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಈವೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡುತ್ತದೆ. ಇದನ್ನು ವೀಕ್ಷಿಸಲು, ಒಬ್ಬರು 99 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆರ್​ಸಿಬಿ ಅನ್‌ಬಾಕ್ಸ್ 2024 ಈವೆಂಟ್​ಗೆ ಶುಲ್ಕವನ್ನು ಎಲ್ಲಿ ಪೇ ಮಾಡಬೇಕು?

ಆರ್​ಸಿಬಿ ಅನ್‌ಬಾಕ್ಸ್ 2024 ಈವೆಂಟ್​ಗೆ ಶುಲ್ಕವನ್ನು ಆರ್​ಸಿಬಿಯ ಅಧಿಕೃತ ವೆಬ್​ಸೈಟ್ ಅಥವಾ ಆ್ಯಪ್​ನಲ್ಲಿ ಪೇ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್ ನಂಬರ್ ರಿಜಸ್ಟರ್ ಮಾಡಿ ಯುಪಿಐ ಅಥವಾ ಇತರೆ ಆನ್​ಲೈನ್ ಕಾರ್ಡ್ ಮೂಲಕ ಪಾವತಿ ಮಾಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:21 am, Tue, 19 March 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ