IPL 2024: 8 ತಂಡಗಳ ಹೊಸ ಜೆರ್ಸಿ ಅನಾವರಣ

IPL 2024: ಮಾರ್ಚ್ 22 ರಿಂದ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) 17ನೇ ಆವೃತ್ತಿಗಾಗಿ ಈಗಾಗಲೇ 8 ತಂಡಗಳು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಇನ್ನುಳಿದಿರುವುದು ಕೇವಲ ತಂಡಗಳ ನೂತನ ಜೆರ್ಸಿಯ ಅನಾವರಣ. ಐಪಿಎಲ್ 2024 ಕ್ಕೂ ಮುನ್ನ ನಡೆಯುವ ಅನ್​ಬಾಕ್ಸ್​ ಕಾರ್ಯಕ್ರಮದ ಮೂಲಕ ಆರ್​ಸಿಬಿ ತನ್ನ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on:Mar 19, 2024 | 7:54 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಕ್ಕಾಗಿ 8 ತಂಡಗಳು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಎಂಟು ತಂಡಗಳಲ್ಲಿ 6 ತಂಡಗಳು ಈ ಹಿಂದಿನ ಜೆರ್ಸಿ ಬಣ್ಣವನ್ನೇ ಮುಂದುವರೆಸಿದರೆ, ಸನ್​ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಮಾತ್ರ ಹೊಸ ವಿನ್ಯಾಸದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಅದರಂತೆ 8 ತಂಡಗಳ ನೂತನ ಜೆರ್ಸಿ ವಿನ್ಯಾಸ ಈ ಕೆಳಗಿನಂತಿದೆ...

1 / 10
1- ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಕೂಡ ನೇರಳೆ ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ ಜೆರ್ಸಿಯ ಮುಂಭಾಗದ ವಿನ್ಯಾಸಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಇದನ್ನು ಹೊರತುಪಡಿಸಿದರೆ ಎಂದಿನಂತೆ ಪರ್ಪಲ್-ಗೋಲ್ಡ್ ಬಣ್ಣಗಳನ್ನೇ ಈ ಬಾರಿ ಸಹ ಬಳಸಲಾಗಿದೆ.

2 / 10
2- ಪಂಜಾಬ್ ಕಿಂಗ್ಸ್: ಐಪಿಎಲ್ 2023 ರಲ್ಲಿ ಫುಲ್ ರೆಡ್ ಬಣ್ಣದಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ಪಡೆ ಈ ಬಾರಿ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಕೆಂಪು ಬಣ್ಣದ ಜೊತೆ ಪಂಜಾಬ್ ಈ ಬಾರಿ ಅಲ್ಲಲ್ಲಿ ಹಳದಿ ಬಣ್ಣವನ್ನು ಕೂಡ ವಿನ್ಯಾಸದಲ್ಲಿ ಬಳಸಿದೆ. ಹಾಗೆಯೇ ಈ ಹಿಂದೆ ಜೆರ್ಸಿಯ ಮುಂಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ದೊಡ್ಡದಾದ ಸಿಂಹದ ಲೋಗೋವನ್ನು ಈ ಬಾರಿ ವಿನ್ಯಾಸಗೊಳಿಸಲಾಗಿಲ್ಲ. ಅಷ್ಟೇ ಅಲ್ಲದೆ ಈ ಬಾರಿ ಫುಲ್ ರೆಡ್ ಬದಲಿಗೆ ಕೆಂಪು ಟಿ ಶರ್ಟ್ ಜೊತೆ ನೀಲಿ ಪ್ಯಾಂಟ್​​ನೊಂದಿಗೆ ಪಂಜಾಬ್ ಕಿಂಗ್ಸ್ ಕಣಕ್ಕಿಳಿಯಲಿದೆ.

3 / 10
3- ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ಸಣ್ಣ ಪುಟ್ಟ ಚೇಂಜ್ ಮಾಡಿದ್ದು ಬಿಟ್ಟರೆ, ಜೆರ್ಸಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.

4 / 10
4- ಮುಂಬೈ ಇಂಡಿಯನ್ಸ್​: ಕಳೆದ ಸೀಸನ್​​ನಂತೆ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ರಾಯಲ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಸಲ ಜೆರ್ಸಿ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಅದರಂತೆ ಜೆರ್ಸಿ ಮೇಲೆ M ಆಕಾರವನ್ನು ವಿನ್ಯಾಸಗೊಳಿಸಿರುವುದು ವಿಶೇಷ.

5 / 10
5- ರಾಜಸ್ಥಾನ್ ರಾಯಲ್ಸ್​: ಪಿಂಕ್ ಸಿಟಿಯನ್ನು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್ ಈ ಸಲ ಕೂಡ ಪಿಂಕ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ತೊಳ್ಭಾಗದಲ್ಲಿ ನೀಲಿ ಬಣ್ಣ ನೀಡಲಾಗಿರುವ ಈ ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಇದರ ಹೊರತಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿಲ್ಲ ಎಂದೇ ಹೇಳಬಹುದು.

6 / 10
6- ಚೆನ್ನೈ ಸೂಪರ್ ಕಿಂಗ್ಸ್​: ಯೆಲ್ಲೊ ಆರ್ಮಿ ಖ್ಯಾತಿಯ ಸಿಎಸ್​ಕೆ ತಂಡವು ಕಳೆದ ಬಾರಿಯಂತೆ ಈ ಸಲ ಕೂಡ ಹಳದಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ 2023 ರ ಸಿಎಸ್​ಕೆ ಜೆರ್ಸಿಗೆ ಹೋಲಿಸಿದರೆ, ಈ ಬಾರಿ ಕೂಡ ಜೆರ್ಸಿ ವಿನ್ಯಾಸದಲ್ಲಿ ಅಂತಹ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.

7 / 10
7- ಗುಜರಾತ್ ಟೈಟಾನ್ಸ್​: ಶುಭ್​ಮನ್ ಗಿಲ್ ಮುನ್ನಡೆಸಲಿರುವ ಗುಜರಾತ್ ಟೈಟಾನ್ಸ್ ತಂಡ ಕೂಡ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. GT ತಂಡ ಈ ಬಾರಿ ಕೂಡ ಈ ಹಿಂದಿನ ಜೆರ್ಸಿ ವಿನ್ಯಾಸವನ್ನು ಮುಂದುವರೆಸಿದ್ದು, ನೂತನ ಜೆರ್ಸಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿಲ್ಲ.

8 / 10
8- ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್ ತಂಡವು ಈ ಬಾರಿ ನೂತನ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಕೇಪ್ ಈಸ್ಟರ್ನ್​ ತಂಡ ಧರಿಸಿದ್ದ ಜೆರ್ಸಿ ವಿನ್ಯಾಸವನ್ನೇ ಎಸ್ಆರ್​ಹೆಚ್​ ಐಪಿಎಲ್​ಗೂ ಪರಿಚಯಿಸುತ್ತಿರುವುದು ವಿಶೇಷ.

9 / 10
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್​​ ತಂಡಗಳು ಮಾತ್ರ ನೂತನ ಜೆರ್ಸಿಯನ್ನು ಅನಾವರಣಗೊಳಿಸಬೇಕಿದೆ. ಅದರಂತೆ ಇಂದು (ಮಾ.19) ನಡೆಯುವ ಅನ್​ಬಾಕ್ಸ್ ಕಾರ್ಯಕ್ರಮದಲ್ಲಿ ಆರ್​ಸಿಬಿ ತನ್ನ ಹೊಸ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಿದೆ.

10 / 10

Published On - 7:53 am, Tue, 19 March 24

Follow us
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು

ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?

ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ

ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ