ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ 39ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (RCB vs MI) ವಿರುದ್ದ 54 ರನ್ಗಳ ಭರ್ಜರಿ ಜಯ ಸಾಧಿಸಿದೆ. ಹ್ಯಾಟ್ರಿಕ್ ವಿಕೆಟ್ ಉರುಳಿಸುವ ಮೂಲಕ ಹರ್ಷಲ್ ಪಟೇಲ್ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (56) ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿತು.
ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಬ್ಯಾಟರುಗಳನ್ನು ಕಟ್ಟಿಹಾಕುವಲ್ಲಿ ಆರ್ಸಿಬಿ ಬೌಲರುಗಳು ಯಶಸ್ವಿಯಾದರು. ಅದರಲ್ಲೂ ಅಂತಿಮ ಹಂತದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ಆರ್ಸಿಬಿ ಬೌಲರುಗಳು ಪಂದ್ಯದ ಚಿತ್ರಣ ಬದಲಿಸಿದರು. 17ನೇ ಓವರ್ನಲ್ಲಿ ಹರ್ಷಲ್ ಪಟೇಲ್ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಹಾಗೂ ರಾಹುಲ್ ಚಹರ್ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆಗೈದರು. ಇದರೊಂದಿಗೆ ಪಂದ್ಯವು ಆರ್ಸಿಬಿ ಪರ ವಾಲಿತು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 18.1 ಓವರ್ನಲ್ಲಿ 111 ರನ್ಗೆ ಸರ್ವಪತನ ಕಾಣುವ ಮೂಲಕ 54 ರನ್ಗಳಿಂದ ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಸ್ಕೋರ್ ವಿವರ:
ಗ್ಲೆನ್ ಮ್ಯಾಕ್ಸ್‌ವೆಲ್- 56
ವಿರಾಟ್ ಕೊಹ್ಲಿ- 51
ಬುಮ್ರಾ- 36/3
ರೋಹಿತ್ ಶರ್ಮಾ- 43
ಹರ್ಷಲ್ ಪಟೇಲ್- 17/4
ಯುಜುವೇಂದ್ರ ಚಹಲ್- 11/3
ಉಭಯ ತಂಡಗಳು ಇದುವರೆಗೆ ಒಟ್ಟು 29 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 17 ಪಂದ್ಯಗಳಲ್ಲಿ ಜಯ ಸಾಧಿಸಿ ಮೇಲುಗೈ ಹೊಂದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಪಂದ್ಯಗಳನ್ನು ಗೆದ್ದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
A memorable night in Dubai! ???
Let’s take this momentum ahead and look forward to Wednesday. ??#PlayBold #WeAreChallengers #ನಮ್ಮRCB #IPL2021 #RCBvMI pic.twitter.com/1U1m3ItBqZ
— Royal Challengers Bangalore (@RCBTweets) September 26, 2021
WHAT. A. MOMENT for @HarshalPatel23 ??#VIVOIPL #RCBvMI pic.twitter.com/tQZLzoZmj6
— IndianPremierLeague (@IPL) September 26, 2021
Say hello to Mr. Hattrick Patel. ??#PlayBold #WeAreChallengers #ನಮ್ಮRCB #IPL2021 #RCBvMI pic.twitter.com/9qnEYJfbpI
— Royal Challengers Bangalore (@RCBTweets) September 26, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 54 ರನ್ಗಳ ಭರ್ಜರಿ ಜಯ
ಚಹಲ್ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಕ್ಲೀನ್ ಬೌಲ್ಡ್
ಹರ್ಷಲ್ ಪಟೇಲ್ ಎಸೆತದಲ್ಲಿ ಬುಮ್ರಾ ಬ್ಯಾಟ್ ಎಡ್ಜ್…ಕೀಪರ್ ಮೇಲಿಂದ ಚೆಂಡು ಬೌಂಡರಿಗೆ
ಹಾರ್ದಿಕ್ ಪಾಂಡ್ಯ
ಕೀರನ್ ಪೊಲಾರ್ಡ್
ರಾಹುಲ್ ಚಹರ್
ಬ್ಯಾಕ್ ಟು ಬ್ಯಾಕ್ ಮೂರು ವಿಕೆಟ್ ಪಡೆದ ಹ್ಯಾಟ್ರಿಕ್ ದಾಖಲೆ ಬರೆದ ಹರ್ಷಲ್ ಪಟೇಲ್
ಹ್ಯಾಟ್ರಿಕ್ ವಿಕೆಟ್ ಪಡೆದ ಹರ್ಷಲ್ ಪಟೇಲ್
ಹರ್ಷಲ್ ಪಟೇಲ್ ಸೂಪರ್ ಬೌಲಿಂಗ್…ಕೀರನ್ ಪೊಲಾರ್ಡ್ ಕ್ಲೀನ್ ಬೌಲ್ಡ್…ಬ್ಯಾಕ್ ಟು ಬ್ಯಾಕ್ ವಿಕೆಟ್
ಹರ್ಷಲ್ ಪಟೇಲ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಹಾರ್ದಿಕ್ ಪಾಂಡ್ಯ… ನೇರವಾಗಿ ವಿರಾಟ್ ಕೊಹ್ಲಿ ಕೈಗೆ ಕ್ಯಾಚ್.. ಪಾಂಡ್ಯ ಇನಿಂಗ್ಸ್ ಅಂತ್ಯ
MI 105/5 (16)
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ-ಪೊಲಾರ್ಡ್ ಬ್ಯಾಟಿಂಗ್
ಮುಂಬೈಗೆ ಗೆಲ್ಲಲು 30 ಎಸೆತಗಳಲ್ಲಿ 67 ರನ್ಗಳ ಅವಶ್ಯಕತೆ
ಸಿರಾಜ್ ಅವರ ವೈಡ್ ಎಸೆತಕ್ಕೆ ಬ್ಯಾಟ್ ನೀಡಿ ಕ್ಯಾಚಿತ್ತ ಸೂರ್ಯಕುಮಾರ್ ಯಾದವ್
ಆರ್ಸಿಬಿಗೆ 5ನೇ ಯಶಸ್ಸು
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಕೃನಾಲ್ ಪಾಂಡ್ಯ ಕ್ಲೀನ್ ಬೌಲ್ಡ್
ಚಹಲ್ ಎಸೆತಕ್ಕೆ ಭರ್ಜರಿ ಉತ್ತರ ನೀಡುವ ಯತ್ನ…ಬ್ಯಾಟ್ ಎಡ್ಜ್ ಚೆಂಡು ನೇರವಾಗಿ ಹರ್ಷಲ್ ಪಟೇಲ್ಗೆ ಕೈಗೆ…ಇಶಾನ್ ಕಿಶನ್ ಔಟ್.
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ರೋಹಿತ್ ಶರ್ಮಾ…ಬೌಂಡರಿ ಲೈನ್ನಲ್ಲಿ ದೇವದತ್ ಪಡಿಕ್ಕಲ್ ಉತ್ತಮ ಕ್ಯಾಚ್
ಇಶಾನ್ ಕಿಶನ್ ಸ್ಟ್ರೈಟ್ ಹಿಟ್…ಚೆಂಡು ನೇರವಾಗಿ ರೋಹಿತ್ ಶರ್ಮಾ ಮುಖದತ್ತ..ಬಾಲ್ನ್ನು ಕೈಯಲ್ಲಿ ತಡೆದ ಹಿಟ್ಮ್ಯಾನ್…ಫಿಸಿಯೋ ಚೆಕ್ಕಿಂಗ್ ಬಳಿಕ ಬ್ಯಾಟಿಂಗ್ ಮುಂದುವರೆಸಿದ ರೋಹಿತ್ ಶರ್ಮಾ
ಕ್ರೀಸ್ನಲ್ಲಿ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್
ಚಹಲ್ ಎಸೆತಕ್ಕೆ ಸೂಪರ್ ಶಾಟ್…ನೇರವಾಗಿ ಹೊಡೆದು ಫೋರ್ ಗಿಟ್ಟಿಸಿಕೊಂಡ ಇಶಾನ್ ಕಿಶನ್
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತಕ್ಕೆ ಹಿಟ್ಮ್ಯಾನ್ ಬಿಗ್ ಹಿಟ್….ಭರ್ಜರಿ ಸಿಕ್ಸ್
ಚಹಲ್ ಎಸೆತದಲ್ಲಿ ಬಿಗ್ ಹಿಟ್ಗೆ ಮುಂದಾದ ಡಿಕಾಕ್…ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಕ್ಯಾಚ್…24 ರನ್ಗಳೊಂದಿಗೆ ಡಿಕಾಕ್ ಪೆವಿಲಿಯನ್ನತ್ತ.
ರೋಹಿತ್ ಶರ್ಮಾ- 29
ಡಿಕಾಕ್- 24
ಡೇನಿಯಲ್ ಕ್ರಿಶ್ಚಿಯನ್ ಎಸೆದ 5ನೇ ಓವರ್ನಲ್ಲಿ 15 ರನ್ ಕಲೆಹಾಕಿದ ಮುಂಬೈ ಬ್ಯಾಟರುಗಳು
ಡೇನಿಯಲ್ ಕ್ರಿಶ್ಚಿಯನ್ ಮೊದಲ ಎಸೆತಕ್ಕೆ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಡಿಕಾಕ್…
2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಮತ್ತೊಂದು ಬೌಂಡರಿ
ಸಿರಾಜ್ ಎಸೆತಕ್ಕೆ ಫರ್ಫೆಕ್ಟ್ ಸ್ಟ್ರೈಟ್ ಶಾಟ್….ರೋಹಿತ್ ಶರ್ಮಾ ಬ್ಯಾಟ್ನಿಂದ ಬೌಂಡರಿ
ಸಿರಾಜ್ ಆಫ್ ಸೈಡ್ ಎಸೆತಕ್ಕೆ ಭರ್ಜರಿ ಬೌಂಡರಿ ಉತ್ತರ ನೀಡಿದ ಕ್ವಿಂಟನ್ ಡಿಕಾಕ್
ಜೇಮಿಸನ್ಗೆ ಹ್ಯಾಟ್ರಿಕ್ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ.
ಜೇಮಿಸನ್ ಎಸೆತಕ್ಕೆ ಬ್ಯಾಕ್ವರ್ಡ್ ಪಾಯಿಂಟ್ನತ್ತ ಸೂಪರ್ ಶಾಟ್…ರೋಹಿತ್ ಶರ್ಮಾ ಬ್ಯಾಟ್ನಿಂದ ಮತ್ತೊಂದು ಬೌಂಡರಿ
ಕೈಲ್ ಜೇಮಿಸನ್ ಬೌಲಿಂಗ್ನಲ್ಲಿ ಲೈನ್ ನೋಬಾಲ್..ಫ್ರೀ ಹಿಟ್…ಫುಲ್ ಟಾಸ್ ಎಸೆತಕ್ಕೆ ನೇರವಾಗಿ ಬೌಂಡರಿ ಬಾರಿಸಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಮೊದಲ ಎರಡು ಓವರ್ನಲ್ಲಿ 10 ರನ್
Not the finish we wanted but still a defendable target on the board.
Let’s back our bowlers, 12th Man Army! ??#PlayBold #WeAreChallengers #ನಮ್ಮRCB #IPL2021 #RCBvMI pic.twitter.com/YTqIKr7MfF
— Royal Challengers Bangalore (@RCBTweets) September 26, 2021
Innings Break!
Sensational last two overs from @mipaltan has kept #RCB below 180. #MumbaiIndians need 166 runs to win.
Scorecard – https://t.co/KkzfsLzXUZ #RCBvMI #VIVOIPL pic.twitter.com/XOtUB2OQFp
— IndianPremierLeague (@IPL) September 26, 2021
3ನೇ ಎಸೆತದಲ್ಲಿ ಕೈಲ್ ಜೇಮಿಸನ್ ಉತ್ತಮ ಹೊಡೆತ…1 ರನ್
4ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ.
5ನೇ ಎಸೆತದಲ್ಲಿ ಡೇನಿಯಲ್ ಕ್ರಿಶ್ಚಿಯನ್ 1 ರನ್
6ನೇ ಎಸೆತದಲ್ಲಿ 1 ರನ್
RCB 165/6 (20)
ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ.
2ನೇ ಎಸೆತದಲ್ಲಿ ಶಹಬಾಜ್ ಅಹ್ಮದ್ ಕ್ಲೀನ್ ಬೌಲ್ಡ್
ಜಸ್ಪ್ರೀತ್ ಬುಮ್ರಾ ಎಸೆದ 19ನೇ ಓವರ್ನಲ್ಲಿ ಕೇವಲ 6 ರನ್ 2 ವಿಕೆಟ್.
ಮ್ಯಾಕ್ಸ್‌ವೆಲ್ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಔಟ್
ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್
ಬುಮ್ರಾ ಎಸೆತದಲ್ಲಿ ಸುಲಭವಾಗಿ ಕ್ಯಾಚ್ ನೀಡಿದ ಗ್ಲೆನ್ ಮ್ಯಾಕ್ಸ್‌ವೆಲ್…36 ಎಸೆತಗಳಲ್ಲಿ 57 ರನ್ ಬಾರಿಸಿ ಔಟಾದ ಮ್ಯಾಕ್ಸಿ.
ಬುಮ್ರಾ ಮೊದಲ ಎಸೆತವನ್ನು ಆನ್ಸೈಡ್ನತ್ತ ಭರ್ಜರಿಯಾಗಿ ಬೌಂಡರಿಗಿಟ್ಟಿಸಿಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್
19ನೇ ಓವರ್ ಎಸೆಯುತ್ತಿರುವ ಜಸ್ಪ್ರೀತ್ ಬುಮ್ರಾ
33 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ ಅರ್ಧಶತಕದ ಪೂರೈಸಿದ ಮ್ಯಾಕ್ಸ್‌ವೆಲ್
ಕವರ್ಸ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ಸ್ವೀಪ್ ಅಥವಾ ಸ್ವಿಚ್ ಹಿಟ್…ಮಿಲ್ನ್ ಎಸೆತದಲ್ಲಿ ರಿವರ್ಸ್ ಬ್ಯಾಟ್ ಮೂಲಕ ಮತ್ತೊಂದು ಬೌಂಡರಿ ಬಾರಿಸಿದ ಮ್ಯಾಕ್ಸ್‌ವೆಲ್
ಮತ್ತೊಮ್ಮೆ ಮಿಲ್ನ್ ಎಸೆತದಲ್ಲಿ ಸ್ವಿಚ್ ಹಿಟ್ ಮೂಲಕ ಸಿಕ್ಸ್ ಸಿಡಿಸಿದ ಮ್ಯಾಕ್ಸ್‌ವೆಲ್
ಬುಮ್ರಾ ಎಸೆತಕ್ಕೆ ಸ್ಟ್ರೈಟ್ ಪುಲ್ ಶಾಟ್…ಎಬಿ ಡಿವಿಲಿಯರ್ಸ್ ಬ್ಯಾಟ್ನಿಂದ ಮತ್ತೊಂದು ಬೌಂಡರಿ
ಬುಮ್ರಾ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ…ಲಾಂಗ್ ಆನ್ನತ್ತ ಸೂಪರ್ ಸಿಕ್ಸ್ ಸಿಡಿಸಿದ ಎಬಿಡಿ
ಮಿಲ್ನೆ ಬೌನ್ಸರ್ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ ನೀಡುವ ಪ್ರಯತ್ನ…ಆಕಾಶದತ್ತ ಚಿಮ್ಮಿದ ಚೆಂಡು ನೇರವಾಗಿ ಸಬ್ ಫೀಲ್ಡರ್ ಅನ್ಕುಲ್ ಕೈಗೆ…ವಿರಾಟ್ ಕೊಹ್ಲಿ ಔಟ್
ಮುಂದುವರೆದ ಸ್ವಿಚ್ ಹಿಟ್…ಸಿಂಪಲ್ ಸ್ವಿಚ್ ಹಿಟ್ ಮೂಲಕ ಮಿಲ್ನೆ ಎಸೆತವನ್ನು ಬೌಂಡರಿಗಟ್ಟಿದ ಮ್ಯಾಕ್ಸ್‌ವೆಲ್
40 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್‌ವೆಲ್ ಭರ್ಜರಿ ಬ್ಯಾಟಿಂಗ್…ಕೊಹ್ಲಿ ಉತ್ತಮ ಸಾಥ್
RCB 117/2 (14)
ರಾಹುಲ್ ಚಹರ್ ಎಸೆತಕ್ಕೆ ಅದ್ಭುತ ಪ್ರತ್ಯುತ್ತರ…ಸ್ವಿಚ್ ಹಿಟ್ ಮೂಲಕ ಮತ್ತೊಂದು ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
Fearless cricket right here. ??#PlayBold #WeAreChallengers #ನಮ್ಮRCB #IPL2021 #RCBvMI pic.twitter.com/RXalN4bajL
— Royal Challengers Bangalore (@RCBTweets) September 26, 2021
ನೋಬಾಲ್ ಎಸೆದ ಮಿಲ್ನೆ…ಫ್ರಿ ಹಿಟ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್…ಫೋರ್
ಮಿಲ್ನೆ ಎಸೆತದಲ್ಲಿ ಮಿಡ್ ವಿಕೆಟ್ ಫೀಲ್ಡರ್ನತ್ತ ಬೌಂಡರಿ…ಮ್ಯಾಕ್ಸ್‌ವೆಲ್ ಬ್ಯಾಟ್ನಿಂದ ಮತ್ತೊಂದು ಫೋರ್
ಕೃನಾಲ್ ಪಾಂಡ್ಯ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್
ಮೊದಲ 60 ಎಸೆತಗಳಲ್ಲಿ ಆರ್ಸಿಬಿ ಕಲೆಹಾಕಿದ್ದು 82 ರನ್ಗಳು
ರಾಹುಲ್ ಚಹರ್ ಎಸೆತದಲ್ಲಿ ಮತ್ತೊಂದು ಬಿಗ್ ಹಿಟ್ಗೆ ಮುಂದಾದ ಭರತ್…ಸೂರ್ಯಕುಮಾರ್ಗೆ ಕ್ಯಾಚ್. 32 ರನ್ಗಳೊಂದಿಗೆ ಪೆವಿಲಿಯನ್ ಕಡೆ ಹೆಜ್ಜೆಹಾಕಿದ ಭರತ್.
ಆರ್ಸಿಬಿ 2ನೇ ವಿಕೆಟ್ ಪತನ
RCB 75/2 (8.5)
ವಾಟ್ ಎ ಶಾಟ್…ರಾಹುಲ್ ಚಹರ್ ಎಸೆತಕ್ಕೆ ಲೆಗ್ಸೈಡ್ನತ್ತ ಬಿಗ್ ಹಿಟ್…ಭರತ್ ಬ್ಯಾಟ್ನಿಂದ ಸಿಕ್ಸ್
ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ…ರಾಹುಲ್ ಚಹರ್ ಎಸೆತದಲ್ಲಿ ಸ್ಟ್ರೈಟ್ ಹಿಟ್…ಫೋರ್
ರಾಹುಲ್ ಚಹರ್ ಎಸೆದ 7ನೇ ಓವರ್ನಲ್ಲಿ 10 ರನ್
ಕೊಹ್ಲಿ-ಭರತ್ ಉತ್ತಮ ಜೊತೆಯಾಟ
30 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ ಪೂರೈಸಿದ ಕಿಂಗ್ ಕೊಹ್ಲಿ-ಭರತ್
ಭರತ್…ವಾಟ್ ಎ ಶಾಟ್…ರಾಹುಲ್ ಚಹರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಶಾಟ್…ಸಿಕ್ಸ್
RCB 48/1 (6)
ಕ್ರೀಸ್ನಲ್ಲಿ ಭರತ್ ಹಾಗೂ ಕೊಹ್ಲಿ ಬ್ಯಾಟಿಂಗ್.
ಮಿಲ್ನೆ ಎಸೆತಕ್ಕೆ ಸಿಕ್ಸರ್ ಉತ್ತರ..ಮಿಡ್ ಆನ್ನತ್ತ ಭರ್ಜರಿ ಹೊಡೆತ… ಕೊಹ್ಲಿ ಬ್ಯಾಟ್ನಿಂದ ಸಿಕ್ಸ್
ಆ್ಯಡಂ ಮಿಲ್ನೆ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಸೂಪರ್ ಶಾಟ್….ಫೋರ್
ಬುಮ್ರಾ ಟು ಭರತ್….ಸ್ಕ್ವೇರ್ ಕಟ್… ಲವ್ಲಿ ಬೌಂಡರಿ…ಫೋರ್
ಬುಮ್ರಾ ಎಸೆತದಲ್ಲಿ ಬ್ಯಾಟ್ ತುದಿ ತಗುಲಿ ಬೌಂಡರಿ
ಇದರ ಬೆನ್ನಲ್ಲೇ ಪುಲ್ ಶಾಟ್ ಮೂಲಕ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ
ಕ್ರೀಸ್ನಲ್ಲಿ ಭರತ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಟಾಪ್ ಎಡ್ಜ್…ಭರತ್ ಬ್ಯಾಟ್ನಿಂದ ಬೌಂಡರಿ
ದೇವದತ್ ಪಡಿಕ್ಕಲ್ ಔಟ್….ಬುಮ್ರಾ ಎಸೆತದಲ್ಲಿ ಚೆಂಡು ಪಡಿಕ್ಕಲ್ ಬ್ಯಾಟ್ ಸವರಿ ಕೀಪರ್ನತ್ತ…ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಕ್ವಿಂಟನ್ ಡಿಕಾಕ್
ಟ್ರೆಂಟ್ ಬೌಲ್ಟ್ ಮೊದಲ ಓವರ್ನ 2ನೇ ಎಸೆತದಲ್ಲಿ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಹೊಡೆತ…ಚೆಂಡು ರಾಹುಲ್ ಚಹರ್ ಕೈಗೆ ತಗುಲಿ ಬೌಂಡರಿ ಹೊರಕ್ಕೆ…ಸಿಕ್ಸ್
ಮೊದಲ ಓವರ್ನಲ್ಲಿ ಕೇವಲ 7 ರನ್ ನೀಡಿದ ಟ್ರೆಂಟ್ ಬೌಲ್ಟ್
Team News
3⃣ changes for @RCBTweets as Shahbaz Ahmed, Daniel Christian & Kyle Jamieson picked in the team.
1⃣ change for @mipaltan as Hardik Pandya returns. #VIVOIPL #RCBvMI
Follow the match ? https://t.co/r9cxDv2Fqi
Here are the Playing XIs ? pic.twitter.com/7bUit7zsXz
— IndianPremierLeague (@IPL) September 26, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹ್ಮದ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನೆ, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
It’s a Sunday and it’s the #VIVOIPL double-header day! ? ?
A cracking contest is on the cards in Dubai as the @imVkohli-led @RCBTweets square off against @ImRo45‘s @mipaltan. ?? #RCBvMI
❤️ or ? – which team are you supporting tonight❓?? pic.twitter.com/nFSDHllh93
— IndianPremierLeague (@IPL) September 26, 2021
Published On - 6:54 pm, Sun, 26 September 21