
ಬೆಂಗಳೂರು (ಜೂ. 04): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಗೆಲುವಿನ ನಂತರ, ಆರ್‌ಸಿಬಿ ಆಟಗಾರರ ಹಾಗೂ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಆದರೆ ಪಂಜಾಬ್ ಕಿಂಗ್ಸ್ ತಂಡದ ಆಟಗಾರರು ಹಾಗೂ ಸಹ-ಮಾಲೀಕಿ ಮತ್ತು ಬಾಲಿವುಡ್ ನಟಿ ಪ್ರೀತಿ ಝಿಂಟಾ ಸೋಲಿನ ದುಃಖದಲ್ಲಿ ಮುಳುಗಿ ಹೋದರು. ಆರ್‌ಸಿಬಿಯಂತೆ ಪಂಜಾಬ್ ಕಿಂಗ್ಸ್ ಕೂಡ ಈವರೆಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿರಲಿಲ್ಲ. ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಅವರಿಗೂ ಇತ್ತು. ಆದರೀಗ ಪಂಜಾಬ್‌ನ ಟ್ರೋಫಿ ಕಾಯುವಿಕೆ ಮುಂದುವರೆದಿದೆ.
ಪ್ರೀತಿ ಝಿಂಟಾ ಅವರ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಫೈನಲ್ ಪಂದ್ಯ ಮುಗಿದ ನಂತರ, ಅವರು ಭಾರವಾದ ಹೃದಯದಿಂದ ಮೈದಾನಕ್ಕೆ ಬರುತ್ತಿರುವುದು ಕಂಡುಬಂದಿತು. ಬಿಳಿ ಕುರ್ತಾ, ಕೆಂಪು ದುಪಟ್ಟಾ ಮತ್ತು ಸಲ್ವಾರ್ ಧರಿಸಿ, ಪ್ರೀತಿ ಸುಂದರವಾಗಿ ಕಾಣುತ್ತಿದ್ದರು, ಆದರೆ ಸೋಲಿನಿಂದ ಅವರು ತುಂಬಾ ದುಃಖಿತರಾಗಿದ್ದರು. ಪಂದ್ಯದ ನಂತರ ಅವರು ಮೈದಾನಕ್ಕೆ ಬಂದಾಗ ಅವರ ಮುಖದಲ್ಲಿ ನಿರಾಶೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪ್ರೀತಿ ಶ್ರೇಯಸ್ ಅಯ್ಯರ್ ಸೇರಿದಂತೆ ಅನೇಕ ಆಟಗಾರರನ್ನು ಸಮಾಧಾನಪಡಿಸುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ ಅವರ ಕಣ್ಣುಗಳು ಒದ್ದೆಯಾಗಿದ್ದವು.
Our queen Preity Zinta , feeling sad for her 😢 pic.twitter.com/3ga8dZyZ87
— Lady Khabri (@KhabriBossLady) June 3, 2025
ಪ್ರೀತಿ ಝಿಂಟಾ 2008 ರಿಂದ ಐಪಿಎಲ್‌ನ ಭಾಗವಾಗಿದ್ದಾರೆ. ಅವರು ಪಂಜಾಬ್ ಕಿಂಗ್ಸ್‌ನ ಸಹ-ಮಾಲೀಕರು. ತಂಡದ ಮೇಲಿನ ಅವರ ಪ್ರೀತಿ, ಕ್ರೀಡಾಂಗಣದಲ್ಲಿ ಅವರ ಉಪಸ್ಥಿತಿ ಮತ್ತು ಆಟಗಾರರೊಂದಿಗಿನ ಅವರ ಭಾವನಾತ್ಮಕ ಬಾಂಧವ್ಯವು ಅವರನ್ನು ಅತ್ಯಂತ ನೆಚ್ಚಿನ ಮಾಲೀಕರಲ್ಲಿ ಒಬ್ಬರನ್ನಾಗಿ ಮಾಡಿದೆ. ಆದಾಗ್ಯೂ, ಇದರ ಹೊರತಾಗಿ, ಪಂಜಾಬ್ ತಂಡ ಇನ್ನೂ ಪ್ರಶಸ್ತಿಯನ್ನು ಗೆದ್ದಿಲ್ಲ. ಇದಕ್ಕೂ ಮೊದಲು, ತಂಡವು 2014 ರಲ್ಲಿ ಒಮ್ಮೆ ಮಾತ್ರ ಫೈನಲ್ ಪಂದ್ಯವನ್ನು ಆಡಿತ್ತು.
ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 191 ರನ್‌ಗಳ ಗುರಿ ಇತ್ತು. ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿ ವಿಕೆಟ್ ಕಷ್ಟವಾಗಿ ಇರಲಿಲ್ಲ. ಚೆಂಡು ಬ್ಯಾಟ್ಗೆ ಚೆನ್ನಾಗಿಯೇ ಬರುತ್ತಿತ್ತು. ಸುಲಭವಾಗಿ ರನ್ ಗಳಿಸುತ್ತಿದ್ದರು. ಆದರೆ ಪಂಜಾಬ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್‌ಗಳು ಫೈನಲ್‌ನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಜೋಶ್ ಇಂಗ್ಲಿಸ್ ಮತ್ತು ಶಶಾಂಕ್ ಸಿಂಗ್ ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ನಾಲ್ಕು ಎಸೆತಗಳು ಬಾಕಿ ಇರುವಾಗ ತಂಡದ ಸೋಲು ಖಚಿತವಾಯಿತು. ಆ ನಂತರ ಶಶಾಂಕ್ ಸಿಂಗ್ ಕೆಲವು ಉತ್ತಮ ಹೊಡೆತಗಳನ್ನು ಆಡಿದರೂ, ಆದರೆ, ತಂಡವು 6 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.
ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಗೆಲ್ಲಿಸಿದ ನಾಯಕ ಶ್ರೇಯಸ್ ಅಯ್ಯರ್ ಫೈನಲ್‌ನಲ್ಲಿ ವಿಫಲರಾದರು. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ಶ್ರೇಯಸ್ ಅಯ್ಯರ್ ಅದ್ಭುತ ಫಾರ್ಮ್‌ನಲ್ಲಿದ್ದರು. ಅವರು ಕ್ವಾಲಿಫೈಯರ್ -2 ರಲ್ಲಿ ಇದೇ ಮೈದಾನದಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಾಯದಿಂದ 87 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಫೈನಲ್‌ನಲ್ಲಿ ಅಯ್ಯರ್ ಬೇಗನೆ ಔಟ್ ಆಗದೇ ಇದ್ದಿದ್ದರೆ, ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು. ಅಯ್ಯರ್ ಅವರ ವಿಕೆಟ್ ಪಂದ್ಯದ ತಿರುವು. ಶ್ರೇಯಸ್ ತಮ್ಮ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಚೆಂಡನ್ನು ಕಟ್ ಮಾಡಲು ಪ್ರಯತ್ನಿಸುವಾಗ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ