RCB vs PBKS Final: ಇದು ಕೇವಲ ಕ್ಯಾಚ್ ಅಲ್ಲ.. ಕಪ್: ಇದು 18 ವರ್ಷಗಳ ಕಾಯುವಿಕೆಗೆ ಕೊನೆ ಹಾಡಿದ ಕ್ಷಣ
Phill Salt Catch: ಐಪಿಎಲ್ 2025 ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫೀಲ್ಡಿಂಗ್ ಅದ್ಭುತವಾಗಿತ್ತು. ತಂಡದ ಗೆಲುವಿಗೆ ಫೀಲ್ಡಿಂಗ್ ಕೂಡ ಒಂದು ಕಾರಣ ಎನ್ನಬಹುದು. ಮುಖ್ಯವಾಗಿ ಫಿಲ್ ಸಾಲ್ಟ್ ಅವರ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು.

ಬೆಂಗಳೂರು (ಜೂ. 04): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವು 18 ವರ್ಷಗಳ ಐಪಿಎಲ್ ಟ್ರೋಫಿ ಬರಗಾಲವನ್ನು ಕೊನೆಗೂ ಕೊನೆಗೊಳಿಸಿತು. ಇಂಡಿಯನ್ ಪ್ರೀಮಿಯರ್ ಲೀಗ್‌ನ 18 ನೇ ಋತುವಿನಲ್ಲಿ, ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂತಿಮ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ 6 ರನ್‌ಗಳಿಂದ ಗೆದ್ದು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ, ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಗಳಿಸಿತು, ನಂತರ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 184 ರನ್‌ಗಳನ್ನು ಮಾತ್ರ ತಲುಪಲು ಸಾಧ್ಯವಾಯಿತು. ಈ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್ ಆಟಗಾರ ಫಿಲ್ ಸಾಲ್ಟ್ ಕ್ಯಾಚ್ ಹಿಡಿದಿದ್ದು ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು.
ಪಂದ್ಯದ ದಿಕ್ಕನ್ನೇ ತಿರುಗಿಸಿದ ಫಿಲ್ ಸಾಲ್ಟ್ ಕ್ಯಾಚ್:
ಐಪಿಎಲ್ 2025 ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫೀಲ್ಡಿಂಗ್ ಅದ್ಭುತವಾಗಿತ್ತು. ತಂಡದ ಗೆಲುವಿಗೆ ಫೀಲ್ಡಿಂಗ್ ಕೂಡ ಒಂದು ಕಾರಣ ಎನ್ನಬಹುದು. ಮುಖ್ಯವಾಗಿ ಫಿಲ್ ಸಾಲ್ಟ್ ಅವರ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಅವರು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಬೌಂಡರಿ ಲೈನ್‌ನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಔಟ್ ಮಾಡಿದರು. ಪಂಜಾಬ್ ಕಿಂಗ್ಸ್ 191 ರನ್‌ಗಳನ್ನು ಬೆನ್ನಟ್ಟುತ್ತಿತ್ತು ಮತ್ತು ಆರ್ಯ ಉತ್ತಮ ಲಯದಲ್ಲಿ ಕಾಣುತ್ತಿದ್ದರು. ಆದರೆ, ಸಾಲ್ಟ್ ಅವರ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನು ಬದಲಾಯಿಸಿತು.
Pause it. Rewind it. Watch it again 🫡
Phil Salt with a clutch grab under pressure ❤
Was that the game-defining catch? 🤔
Updates ▶ https://t.co/U5zvVhcvdo#TATAIPL | #RCBvPBKS | #Final | #TheLastMile | @RCBTweets pic.twitter.com/o0gpkjLOCV
— IndianPremierLeague (@IPL) June 3, 2025
ಜೋಶ್ ಹ್ಯಾಜಲ್‌ವುಡ್ ಶಾರ್ಟ್ ಬಾಲ್ ಎಸೆದರು. ಆರ್ಯ ಅದನ್ನು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಕಡೆಗೆ ಹೊಡೆಯಲು ಪ್ರಯತ್ನಿಸಿದರು. ಫಿಲ್ ಸಾಲ್ಟ್ ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದರು. ಸಾಲ್ಟ್ ಓಡುತ್ತಾ ಬಂದು ಚೆಂಡನ್ನು ಹಿಡಿದರು. ಬೌಂಡರಿಯ ಹೊರಗೆ ಚೆಂಡು ಹೋಗಬಹುದು ಎಂದು ಅವರಿಗೆ ತಿಳಿದಿತ್ತು. ಅವರು ತಕ್ಷಣ ಚೆಂಡನ್ನು ಗಾಳಿಯಲ್ಲಿ ಎಸೆದು ನಂತರ ಬೌಂಡರಿಯ ಹೊರಗೆ ಹೋಗಿ ಹಿಂತಿರುಗಿ ಚೆಂಡನ್ನು ಹಿಡಿದರು. ಇದನ್ನು ನೋಡಿ, ಕ್ರೀಡಾಂಗಣದಲ್ಲಿ ನೆರೆದಿದ್ದ 90,871 ಪ್ರೇಕ್ಷಕರು ಆಶ್ಚರ್ಯಚಕಿತರಾದರು.
Virat Kohli Crying: ಆರ್‌ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ: ವಿಡಿಯೋ
ಸಾಲ್ಟ್ ಬಹಳ ಕೌಶಲ್ಯದಿಂದ ಕ್ಯಾಚ್ ಹಿಡಿದರು. ಈ ಕ್ಯಾಚ್ ಆರ್‌ಸಿಬಿಗೆ ಪ್ರಮುಖ ಯಶಸ್ಸನ್ನು ನೀಡಿತು. ಅಲ್ಲದೆ ಬೆಂಗಳೂರು ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಲು ಕಾರಣವಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಅಂತಿಮ ಪಂದ್ಯದಲ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಅವರ 43 ರನ್‌ಗಳ ಸಮಂಜಸವಾದ ಇನ್ನಿಂಗ್ಸ್ ಈ ಪಂದ್ಯದಲ್ಲಿ ತಂಡವು 190 ರನ್‌ಗಳನ್ನು ತಲುಪಲು ಸಹಾಯ ಮಾಡಿತು. ಕೊಹ್ಲಿ ಹೊರತುಪಡಿಸಿ, ರಜತ್ ಪಾಟಿದಾರ್ 26, ಲಿಯಾಮ್ ಲಿವಿಂಗ್‌ಸ್ಟೋನ್ 25 ಮತ್ತು ಜಿತೇಶ್ ಶರ್ಮಾ 24 ರನ್ ಗಳಿಸಿದರು.
ಕೃನಾಲ್ ಪಾಂಡ್ಯ ತಮ್ಮ 4 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಬಳಿಸಿದರು, ಕೇವಲ 17 ರನ್‌ಗಳನ್ನು ನೀಡಿದರು. ಇದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಕೃನಾಲ್ ಜೊತೆಗೆ, ಭುವನೇಶ್ವರ್ ಕುಮಾರ್ ಆರ್‌ಸಿಬಿ ಪರ 2 ವಿಕೆಟ್‌ಗಳನ್ನು ಕಬಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




