AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli Crying: ಆರ್​ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ: ವಿಡಿಯೋ

RCB vs PBKS, IPL 2025 Final: ಐಪಿಎಲ್ 2025 ಫೈನಲ್ನ ಕೊನೆಯ ಓವರ್‌ನಲ್ಲಿ ಆರ್ಸಿಬಿ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ವಿರಾಟ್ ಕೊಹ್ಲಿ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಅವರು ಮಗುವಿನಂತೆ ಅಳುತ್ತಿರುವುದು ಕಂಡುಬಂತು. ಅದರಲ್ಲೂ ಆರ್ಸಿಬಿ ಗೆದ್ದಾಗ ಮೈದಾನದಲ್ಲಿ ಮಂಡಿಯೂರಿ ಕಣ್ಣೀರಿಟ್ಟರು.

Virat Kohli Crying: ಆರ್​ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರಿಟ್ಟ ವಿರಾಟ್ ಕೊಹ್ಲಿ: ವಿಡಿಯೋ
Virat Kohli Crying
Vinay Bhat
|

Updated on: Jun 03, 2025 | 11:57 PM

Share

ಬೆಂಗಳೂರು (ಜೂ. 03): 18 ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ. 18ನೇ ನಂಬರ್ ಜೆರ್ಸಿ ಧರಿಸಿದ್ದ ವಿರಾಟ್ ಕೊಹ್ಲಿ (Virat Kohli) ಕನಸು ಕೊನೆಗೂ ನನಸಾಗಿದೆ. ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೋಟ್ಯಂತರ ಅಭಿಮಾನಿಗಳಿಗೆ ದೊಡ್ಡ ಉಡುಗೊರೆಯನ್ನು ನೀಡಿದೆ. ಪ್ರಶಸ್ತಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ 190 ರನ್ ಗಳಿಸಿತು, ಆದರೆ ಪಂಜಾಬ್ ತಂಡವು ಉತ್ತಮ ಆರಂಭದ ಹೊರತಾಗಿಯೂ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಆರ್​ಸಿಬಿ ಗೆಲುವು ಖಚಿತವಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿ ಮೈದಾನದಲ್ಲೇ ಕಣ್ಣೀರಿಟ್ಟರು.

ಕೊನೆಯ ಓವರ್‌ನಲ್ಲಿ ಆರ್​ಸಿಬಿ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ, ವಿರಾಟ್ ಕೊಹ್ಲಿ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಅವರು ಮಗುವಿನಂತೆ ಅಳುತ್ತಿರುವುದು ಕಂಡುಬಂತು. ಅದರಲ್ಲೂ ಆರ್​ಸಿಬಿ ಗೆದ್ದಾಗ ಮೈದಾನದಲ್ಲಿ ಮಂಡಿಯೂರಿ ಕಣ್ಣೀರಿಟ್ಟರು. ಪಂದ್ಯ ನೋಡಲು ಬಂದಿದ್ದ ಆರ್​ಸಿಬಿ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಮೈದಾನದಕ್ಕೆ ಓಡೋಡಿ ಬಂದು. ಇವರನ್ನು ತಬ್ಬಿಕೊಂಡು ವಿರಾಟ್ ಖುಷಿ ಹಂಚಿಕೊಂಡರು. ಬಳಿಕ ಪತ್ನಿ ಅನುಷ್ಕಾ ಶರ್ಮಾ ಜೊತೆಗೂ ವಿರಾಟ್ ಮೈದಾನದಲ್ಲಿ ಸಂಭ್ರಮದ ಕ್ಷಣವನ್ನು ಕಳೆದರು.

ಇದನ್ನೂ ಓದಿ
Image
ಚೊಚ್ಚಲ ಐಪಿಎಲ್​​ ಚಾಂಪಿಯನ್‌ ಕಿರೀಟ ತೊಟ್ಟ ಆರ್​ಸಿಬಿ
Image
ಗರ್ವದಿಂದ ಹೇಳಿ ‘ಈ ಸಲ ಕಪ್ ನಮ್ದೆ’: ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ RCB
Image
ಕೊನೆಯ ಓವರ್‌ನಲ್ಲಿ ಬೆಂಕಿಯ ಚೆಂಡೆಸೆದ ಅರ್ಶ್‌ದೀಪ್ ಸಿಂಗ್
Image
ಐಪಿಎಲ್ ಫೈನಲ್​ನಲ್ಲಿ CSK ದಾಖಲೆ ಪುಡಿಗಟ್ಟಿ ಇತಿಹಾಸ ನಿರ್ಮಿಸಿದ RCB

ವಿರಾಟ್ ಕೊಹ್ಲಿಯ ಮೌಲ್ಯಯುತ ಇನ್ನಿಂಗ್ಸ್:

ಆರ್‌ಸಿಬಿ 20 ಓವರ್‌ಗಳಲ್ಲಿ 190 ರನ್ ಗಳಿಸಿತು. ಫೈನಲ್‌ನ ಪಂದ್ಯಕ್ಕೆ ಹೋಲಿಸಿದರೆ ಈ ಸ್ಕೋರ್ ಖಂಡಿತವಾಗಿಯೂ ಸಾಮಾನ್ಯವೆಂದು ಕಾಣುತ್ತದೆ. ಆದರೆ ಈ ರನ್‌ಗಳ ಹಿಂದೆ ಕೆಲವು ಇನ್ನಿಂಗ್ಸ್‌ಗಳಿದ್ದವು. ಅದು ತಂಡದ ವೇಗಕ್ಕೆ ಬ್ರೇಕ್ ಹಾಕಿರಬಹುದು, ಆದರೆ ಈ ಇನ್ನಿಂಗ್ಸ್‌ಗಳು ಬಹಳ ಮುಖ್ಯವಾಗಿದ್ದವು. ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಅತ್ಯಂತ ಪ್ರಮುಖವಾಯಿತು. ಕೊಹ್ಲಿ 35 ಎಸೆತಗಳಲ್ಲಿ ಕೇವಲ 43 ರನ್ ಗಳಿಸಿದರು, ಇದರಲ್ಲಿ 3 ಬೌಂಡರಿಗಳು ಸೇರಿವೆ. ಅವರ ಸ್ಟ್ರೈಕ್ ರೇಟ್ 122 ಕ್ಕಿಂತ ಕಡಿಮೆಯಿತ್ತು, ಇದು ಈ ಸ್ವರೂಪದಲ್ಲಿ ಅಂತಿಮ ಪಂದ್ಯದಂತಹ, ಒತ್ತಡ ತುಂಬಿದ ಪಂದ್ಯಕ್ಕೆ ಸರಿಯಲ್ಲ, ಆದರೆ ಪರಿಸ್ಥಿತಿಯ ಪ್ರಕಾರ, ಆರ್‌ಸಿಬಿಗೆ ಕೊಹ್ಲಿಯ ಇನ್ನಿಂಗ್ಸ್ ಅಗತ್ಯವಾಗಿತ್ತು.

IPL 2025 Final: ಈ ಸಲ ಕಪ್ ನಮ್ದೇ….! ಫಲಿಸಿತು ಕೋಟ್ಯಾಂತರ ಆರ್​ಸಿಬಿ ಅಭಿಮಾನಿಗಳ ಪ್ರಾರ್ಥನೆ

ತಂಡವು ವೇಗವಾಗಿ ರನ್ ಗಳಿಸಬೇಕಾದಾಗ, ಕೊಹ್ಲಿ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ತೊಡಗಿಸಿಕೊಂಡಿರಬಹುದು. ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದು ತುದಿಯಿಂದ ವಿರಾಟ್ ವಿಕೆಟ್ ಅನ್ನು ಸುರಕ್ಷಿತವಾಗಿರಿಸಿಕೊಂಡರು. ಅವರ ಬ್ಯಾಟಿಂಗ್ ತಂಡದ ಸ್ಕೋರ್‌ಗೆ ಸರಿಯಾದ ದಿಕ್ಕನ್ನು ನೀಡಿತು. ಆದರೆ, ಪಂಜಾಬ್ ವಿರುದ್ಧ ದಿಕ್ಕಿನಲ್ಲಿ ಸಾಗಿ ಸೋಲು ಕಂಡಿತು. ವಿರಾಟ್ ಆಡಿದ ರೀತಿ ಪಂಜಾಬ್ ಪರ ಯಾವೊಬ್ಬ ಬ್ಯಾಟರ್ ಕ್ರೀಸ್​ ಕಚ್ಚಿ ನಿಲ್ಲಿಲ್ಲ. ಈ ಗುರಿಯನ್ನು ಬೆನ್ನಟ್ಟುವಾಗ ಪಂಜಾಬ್ ಕಿಂಗ್ಸ್ ನಿರಾಶಾದಾಯಕವಾಗಿ ಬ್ಯಾಟಿಂಗ್ ಮಾಡಿತು ಮತ್ತು ಆರ್‌ಸಿಬಿ ಸುಲಭವಾಗಿ ಗೆದ್ದಿತು.

ಫಿಲ್ ಸಾಲ್ಟ್ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು:

ಐಪಿಎಲ್ 2025 ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಿಲ್ ಸಾಲ್ಟ್ ಅವರ ಅತ್ಯುತ್ತಮ ಫೀಲ್ಡಿಂಗ್ ದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು. ಅವರು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಅವರನ್ನು ಬೌಂಡರಿ ಲೈನ್‌ನಲ್ಲಿ ಅದ್ಭುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಔಟ್ ಮಾಡಿದರು. ಪಂಜಾಬ್ ಕಿಂಗ್ಸ್ 191 ರನ್‌ಗಳನ್ನು ಬೆನ್ನಟ್ಟುತ್ತಿರುವಾಗ ಆರ್ಯ ಉತ್ತಮ ಲಯದಲ್ಲಿ ಕಾಣುತ್ತಿದ್ದರು. ಆದರೆ, ಸಾಲ್ಟ್ ಅವರ ಅದ್ಭುತ ಕ್ಯಾಚ್ ಪಂದ್ಯದ ದಿಕ್ಕನ್ನು ಬದಲಾಯಿಸಿತು. ಜೋಶ್ ಹ್ಯಾಜಲ್‌ವುಡ್ ಬೌಲಿಂಗ್​ನಲ್ಲಿ ಆರ್ಯ ಸಿಕ್ಸರ್​ಗೆಂದು ಚೆಂಡನ್ನು ಅಟ್ಟಿದರು. ಆದರೆ, ಅದನ್ನು ಸಾಲ್ಟ್ ಬಹಳ ಕೌಶಲ್ಯದಿಂದ ಹಿಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ