India vs Sri Lanka 1st Test: 500 ರತ್ತ ಭಾರತ ಚಿತ್ತ: ಕುತೂಹಲ ಕೆರಳಿಸಿದ ಇಂದಿನ ಎರಡನೇ ದಿನದಾಟ

India vs Sri Lanka 1st Test: 500 ರತ್ತ ಭಾರತ ಚಿತ್ತ: ಕುತೂಹಲ ಕೆರಳಿಸಿದ ಇಂದಿನ ಎರಡನೇ ದಿನದಾಟ
Rishabh Pant and Jadeja

IND vs SL, 1st Test: ಇಂದಿನ ಎರಡನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು 500 ರನ್​ಗಳ ಗಡಿಯತ್ತ ಭಾರತ ಚಿತ್ತ ನೆಟ್ಟಿದೆ. ಜಡೇಜಾ ಹಾಗೂ ಅಶ್ವಿನ್ ಜೋಡಿ ಸಾಕಷ್ಟು ನಂಬಿಕೆ ಇಡಲಾಗಿದೆ.

TV9kannada Web Team

| Edited By: Vinay Bhat

Mar 05, 2022 | 7:18 AM

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs Sri Lanka) ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಮೊದಲ ದಿನ ಸಂಪೂರ್ಣ ಯಶಸ್ಸು ಸಾಧಿಸಿದ ಟೀಮ್ ಇಂಡಿಯಾ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಅರ್ಧಶತಕದ ಅಂಚಿನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಇದ್ದರೆ, ರವಿಚಂದ್ರನ್ ಅಶ್ವಿನ್ 10 ರನ್ ಗಳಿಸಿ ಮೊದಲ ದಿನದಾಟ ಅಂತ್ಯಗೊಳಿಸಿದರು. ಕೊಹ್ಲಿಯ 100ನೇ ಟೆಸ್ಟ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ (Risbah Pant) ಶತಕ ವಂಚಿತರಾಗಿ 96 ರನ್​ಗೆ ನಿರ್ಗಮಿಸಿದರು. ಹನುಮಾ ವಿಹಾರಿ 58 ರನ್​, ಕೊಹ್ಲಿ (Virat Kohli) 45 ರನ್ ಮೊದಲ ದಿನದ ಹೈಲೇಟ್. ಇದೀಗ ಇಂದಿನ ಎರಡನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು 500 ರನ್​ಗಳ ಗಡಿಯತ್ತ ಭಾರತ ಚಿತ್ತ ನೆಟ್ಟಿದೆ. ಜಡೇಜಾ ಹಾಗೂ ಅಶ್ವಿನ್ ಜೋಡಿ ಸಾಕಷ್ಟು ನಂಬಿಕೆ ಇಡಲಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ವಿಕೆಟ್​ಗೆ ಅರ್ಧಶತಕದ ಜೊತೆಯಾಟ ಆಡಿತಷ್ಟೆ. ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲಿ ದೊಡ್ಡ ಮಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. 28 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಮಯಾಂಕ್ ಅಗರ್ವಾಲ್ 49 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 33 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 100ನೇ ಟೆಸ್ಟ್ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಮೂರಂಕಿ ತಲುಪದೆ 76 ಎಸೆತಗಳಲ್ಲಿ 45 ರನ್ ಕಲೆಹಾಕುವ ಮೂಲಕ ತನ್ನ ಇನ್ನಿಂಗ್ಸ್‌ ಮುಗಿಸಿದರು. ಮೂರನೇ ವಿಕೆಟ್‌ಗೆ ಹನುಮಾ ವಿಹಾರಿ ಜೊತೆಗೂಡಿ 90 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಕೊಹ್ಲಿ ಔಟ್ ಆಗುವ ಮೂಲಕ ಬೇರ್ಪಟ್ಟಿತು. ಇದೇ ಸಂದರ್ಭದಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್ ಗಡಿ ಮುಟ್ಟಿದ್ದಲ್ಲದೆ 900 ಬೌಂಡರಿ ಸಿಡಿಸಿದ ಸಾಧನೆ ಮಾಡಿದ್ದಾರೆ.

ಮೂರನೇ ಕ್ರಮಾಂಕದ ಚೇತೇಶ್ವರ ಪೂಜಾರ ಸ್ಥಾನದಲ್ಲಿ ಆಡಿದ ವಿಹಾರಿ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. 128 ಎಸೆತಗಳನ್ನ ಎದುರಿಸಿದ ವಿಹಾರಿ 5 ಬೌಂಡರಿ ಸಹಿತ 58 ರನ್ ಕಲೆಹಾಕಿದರು. ನಂತರ ಶುರುವಾಗಿದ್ದು ರಿಷಭ್ ಪಂತ್ ಸ್ಫೋಟಕ ಆಟ. ಆರಂಭದಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದ ಪಂತ್, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಲಂಕಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಪಂತ್ 73 ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿ ಮತ್ತಷ್ಟು ಆಕ್ರಮಣಕಾರಿ ಆಟವಾಡಲಾರಂಭಿಸಿದರು. ಅದರಲ್ಲೂ ಲಸಿತ್ ಎಂಬುಲ್ಡೆನಿಯಾ ಬೌಲಿಂಗ್‌ನಲ್ಲಿ ಮೈಚಳಿ ಬಿಟ್ಟು ಬ್ಯಾಟಿಂಗ್ ನಡೆಸಿದ ಪಂತ್ ಒಂದೇ ಓವರ್‌ನಲ್ಲಿ 2 ಸಿಕ್ಸ್ ಹಾಗೂ 2 ಬೌಂಡರಿ ಸಹಿತ 22 ರನ್ ಚಚ್ಚಿದರು. ಅಂತಿಮವಾಗಿ ರಿಷಭ್ ಪಂತ್ 97 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 96 ರನ್ ಬಾರಿಸಿ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್‌ ರವೀಂದ್ರ ಜಡೇಜಾ, ಪಂತ್​​ಗೆ ಉತ್ತಮ ಸಾಥ್ ನೀಡಿದರು. 6ನೇ ವಿಕೆಟ್‌ಗೆ ಈ ಜೋಡಿ 104 ರನ್‌ಗಳ ಜೊತೆಯಾಟ ನಿಭಾಯಿಸಿತು.

ಏಳನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾಗಿದ್ದು ದಿನದಾಟದಂತ್ಯಕ್ಕೆ ಜಡೇಜಾ ಅಜೇಯ 45 ರನ್ ಮತ್ತು ಆರ್. ಅಶ್ವಿನ್ ಅಜೇಯ 10 ರನ್‌ಗಳಿಸಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾ ಪರ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯ ಎರಡು ವಿಕೆಟ್ ಪಡೆದರೆ, ಲಹಿರು ಕುಮಾರ, ಧನಂಜಯ ಡಿ ಸಿಲ್ವಾ, ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ ತಲಾ 1 ವಿಕೆಟ್ ಕಿತ್ತರು.

Shane Warne Records: ಕ್ರಿಕೆಟ್ ಇತಿಹಾಸದಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ ಶೇನ್ ವಾರ್ನ್

Follow us on

Related Stories

Most Read Stories

Click on your DTH Provider to Add TV9 Kannada