IPL 2022: ಡೆಲ್ಲಿ ತಂಡ ಸೇರಿಕೊಂಡ ನಾಯಕ ರಿಷಭ್ ಪಂತ್, ಅಕ್ಷರ್ ಪಟೇಲ್: 3 ದಿನ ಕ್ವಾರಂಟೈನ್

| Updated By: Vinay Bhat

Updated on: Mar 17, 2022 | 7:22 AM

Delhi Capitals: ಡೆಲ್ಲಿ ಕ್ಯಾಪಿಟಲ್ಸ್​​ನ ನಾಯಕ ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಸೇರಿದಂತೆ ಕೆಲ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಶಾರ್ದೂಲ್ ಠಾಕೂರ್, ಕೆಎಸ್ ಭರತ್, ಕುಲ್ದೀಪ್ ಯಾದವ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್ ಸೇರಿಕೊಂಡಿದ್ದಾರೆ.

IPL 2022: ಡೆಲ್ಲಿ ತಂಡ ಸೇರಿಕೊಂಡ ನಾಯಕ ರಿಷಭ್ ಪಂತ್, ಅಕ್ಷರ್ ಪಟೇಲ್: 3 ದಿನ ಕ್ವಾರಂಟೈನ್
Rishabh and Axar IPL 2022
Follow us on

ಇಂಡಿಯನ್ ಪ್ರೀಮಿಯರ್ ಲೀಗ್ (Indian Prmier League) 15ನೇ ಆವೃತ್ತಿ ಆರಂಭಕ್ಕೆ ಇನ್ನೇನು ಒಂಬತ್ತು ದಿನಗಳಷ್ಟೆ ಬಾಕಿ ಉಳಿದಿವೆ. ಈಗಾಗಲೇ ಐಪಿಎಲ್ 2022 (IPL 2022) ಫೀವರ್ ಶುರುವಾಗಿದ್ದು ಅಭಿಮಾನಿಗಳಂತು ರೋಚಕ ಕ್ರಿಕೆಟ್​ನ ಅನುಭವ ಪಡೆಯಲು ಕಾದುಕುಳಿತಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿ ಸಾಕಷ್ಟು ಭಿನ್ನತೆಯಿಂದ ಕೂಡಿದೆ. ಎರಡು ಹೊಸ ತಂಡಗಳು ಸೇರಿ ಒಟ್ಟು 10 ತಂಡಗಳು ಒಂದು ಟ್ರೋಫಿಗಾಗಿ ಕಾದಾಟ ನಡೆಸಲಿದೆ. ಮಾರ್ಚ್ 26 ರಂದು ಈ ಚುಟುಕು ಸಮಯಕ್ಕೆ ಚಾಲನೆ ಸಿಗಲಿದ್ದು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಸೆಣೆಸಾಟ ನಡೆಸಲಿದೆ. ಒಟ್ಟು 65 ದಿನಗಳ ಕಾಲ ನಡೆಯಲಿರುವ ಈ ಪಂದ್ಯದಲ್ಲಿ 70 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯ ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ ಆಟಗಾರರು ಒಬ್ಬೊಬ್ಬರಾಗಿ ತಂಡ ಸೇರಿಕೊಳ್ಳುತ್ತಿದ್ದಾರೆ.

ಸದ್ಯ ಡೆಲ್ಲಿ ಕ್ಯಾಪಿಟಲ್ಸ್​​ನ ನಾಯಕ ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಸೇರಿದಂತೆ ಕೆಲ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಇವರ ಜೊತೆಗೆ ಶಾರ್ದೂಲ್ ಠಾಕೂರ್, ಕೆಎಸ್ ಭರತ್, ಕುಲ್ದೀಪ್ ಯಾದವ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್ ಸೇರಿಕೊಂಡಿದ್ದಾರೆ. ಈ ಆಟಗಾರರು ಮೂರು ದಿನಗಳ ಕಠಿಣ ಕ್ವಾರಂಟೈನ್ ಪೂರೈಸಲಿದ್ದಾರೆ. ರಿಷಭ್ ಪಂತ್, ಅಕ್ಷರ್ ಪಟೇಲ್ ಮತ್ತು ಭರತ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಬಯೋಬಬಲ್‌ನಲ್ಲಿದ್ದ ಕಾರಣ ಬಬಲ್‌ನಿಂದ ಬಬಲ್‌ಗೆ ನೇರವಾಗಿ ಸೇರ್ಪಡೆಯಾಗಿದ್ದು ಕ್ವಾರಂಟೈನ್ ಪೂರೈಸದೆಯೇ ತಂಡ ಸೇರಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ:

ಐಪಿಎಲ್ ಪಂದ್ಯಗಳಿಗೆ ಆಟಗಾರರನ್ನು ಕರೆದೊಯ್ಯಲು ಬರುತ್ತಿದ್ದ ಪಂಚತಾರಾ ಹೋಟೆಲ್‌ನ ಹೊರಗೆ ನಿಲ್ಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಐಷಾರಾಮಿ ಬಸ್‌ ಗಾಜುಗಳನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಒಡೆದಿದ್ದಾರೆ. ದಾಳಿ ಗಮನಕ್ಕೆ ಬಂದ ತಕ್ಷಣ ಕೊಲಾಬಾ ಠಾಣೆಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಿದೆ. ರಾಜ್ ಠಾಕ್ರೆ ಅವರ ಎಂಎನ್ ಎಸ್ ಕಾರ್ಯಕರ್ತರ ಸಾರಿಗೆ ಘಟಕದ 12 ಕ್ಕೂ ಹೆಚ್ಚು ಜನರ ತಂಡ ದಾಳಿ ನಡೆಸಿ ಗಾಜನ್ನು ಒಡೆದು ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಕೃತ್ಯ ನಡೆಸಿದ ಕಾರಣದ ಕುರಿತು ಪ್ರತಿಕ್ರಿಯೆ ನೀಡಿರುವ ಎಂಎನ್ ಎಸ್ ಸಾರಿಗೆ ಘಟಕದ ಅಧ್ಯಕ್ಷ ಸಂಜಯ್ ನಾಯ್ಕ್, ನಾವು ಈ ಹಿಂದೆಯೇ ಪ್ರತಿಭಟನೆ ನಡೆಸಿದ್ದೆವು, ಅದರ ಹೊರತಾಗಿಯೂ ಹೊರ ರಾಜ್ಯಗಳಿಂದ ಹಲವು ಬಸ್ ಗಳು ಮತ್ತು ಸಣ್ಣ ವಾಹನಗಳನ್ನು ಇಲ್ಲಿಗೆ ತರಲಾಗಿದೆ. ಇದು ಇಲ್ಲಿಯ ಮರಾಠಿ ಕೆಲಸಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

IPL 2022: ರಾಷ್ಟ್ರೀಯ ತಂಡಕ್ಕೆ ನೋ ಎಂದು ಐಪಿಎಲ್​ಗೆ ಜೈ ಎಂದ ಸೌತ್ ಆಫ್ರಿಕಾ ಆಟಗಾರರು..!