IPL 2022: ರಾಷ್ಟ್ರೀಯ ತಂಡಕ್ಕೆ ನೋ ಎಂದು ಐಪಿಎಲ್​ಗೆ ಜೈ ಎಂದ ಸೌತ್ ಆಫ್ರಿಕಾ ಆಟಗಾರರು..!

IPL 2022: ಐಪಿಎಲ್ 2022 ನಲ್ಲಿರುವ ಸೌತ್ ಆಫ್ರಿಕಾ ಆಟಗಾರರು : ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್), ಕ್ವಿಂಟನ್ ಡಿ ಕಾಕ್ ( ಲಕ್ನೋ ಸೂಪರ್ ಜೈಂಟ್ಸ್), ಅನ್ರಿಕ್ ನೋಕಿಯಾ (ಡೆಲ್ಲಿ ಕ್ಯಾಪಿಟಲ್ಸ್), ಮಾರ್ಕೊ ಜಾನ್ಸೆನ್ (ಸನ್​ರೈಸರ್ಸ್​ ಹೈದರಾಬಾದ್).

IPL 2022: ರಾಷ್ಟ್ರೀಯ ತಂಡಕ್ಕೆ ನೋ ಎಂದು ಐಪಿಎಲ್​ಗೆ ಜೈ ಎಂದ ಸೌತ್ ಆಫ್ರಿಕಾ ಆಟಗಾರರು..!
IPL 2022
Follow us
TV9 Web
| Updated By: ಝಾಹಿರ್ ಯೂಸುಫ್

Updated on: Mar 16, 2022 | 7:19 PM

ಮಾರ್ಚ್ 18 ರಿಂದ ಶುರುವಾಗಲಿರುವ ಬಾಂಗ್ಲಾದೇಶ ವಿರುದ್ದದ ಏಕದಿನ ಸರಣಿಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಐಪಿಎಲ್​ನ ಕೆಲ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ. 3 ಪಂದ್ಯಗಳ ಈ ಸರಣಿಯು ಮಾರ್ಚ್ 23 ರಂದು ಮುಗಿಯಲಿದೆ. ಇದಾದ ಬಳಿಕ ಸೌತ್ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ದ ಟೆಸ್ಟ್ ಸರಣಿಯನ್ನೂ ಕೂಡ ಆಡಬೇಕಿದೆ. ಆದರೆ ಇದೀಗ ಐಪಿಎಲ್​ನಲ್ಲಿರುವ ಆಟಗಾರರು ಟೆಸ್ಟ್ ಸರಣಿ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಏಕದಿನ ಸರಣಿಯ ಬಳಿಕ ಐಪಿಎಲ್​ನಲ್ಲಿ ಭಾಗವಹಿಸುತ್ತೇವೆ ಎಂದು ಸೌತ್ ಆಫ್ರಿಕಾ ಆಟಗಾರರು, ಬಾಂಗ್ಲಾ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಕ್ರಿಕೆಟ್ ಸೌತ್ ಆಫ್ರಿಕಾ (CSA) ಈ ಬಗ್ಗೆ ಆಟಗಾರರ ಮನವೊಲಿಸಲು ಮುಂದಾದರೂ, ಆಟಗಾರರು ಎರಡು ಟೆಸ್ಟ್‌ಗಳಿಗಿಂತ ಐಪಿಎಲ್‌ಗೆ ಆದ್ಯತೆ ನೀಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್​ನಲ್ಲಿರುವ ಸೌತ್ ಆಫ್ರಿಕಾ ಆಟಗಾರರು ಬಾಂಗ್ಲಾದೇಶದ ವಿರುದ್ದದ ಏಕದಿನ ಸರಣಿ ಬಳಿಕ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

“ನಾವು ನಮ್ಮ ಆಟಗಾರರನ್ನು ಐಪಿಎಲ್‌ಗೆ ಬಿಡುಗಡೆ ಮಾಡುತ್ತೇವೆ ಎಂದು ಈ ಹಿಂದೆಯೇ ಬಿಸಿಸಿಐಗೆ ತಿಳಿಸಿತ್ತು. ಆದರೆ ಈ ಬಾರಿ ಐಪಿಎಲ್ ವಿಂಡೋ ದೊಡ್ಡದಾಗಿದೆ. ನಮ್ಮ ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ. ನಾವು ಆಟಗಾರರನ್ನು ಐಪಿಎಲ್​ಗೆ ಅನುಮತಿಸುತ್ತೇವೆ” ಕ್ರಿಕೆಟ್ ಸೌತ್ ಆಫ್ರಿಕಾ (CSA)ತಿಳಿಸಿದೆ. ಇದಾಗ್ಯೂ ಸೌತ್ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಆಟಗಾರರ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಆಟಗಾರರು ಟೆಸ್ಟ್​ ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಇದೀಗ ತಂಡದಲ್ಲಿರುವ ಸ್ಟಾರ್ ಆಟಗಾರರು ಐಪಿಎಲ್​ಗೆ ತೆರಳಿದರೆ 2ನೇ ದರ್ಜೆಯ ಬೌಲಿಂಗ್ ವಿಭಾಗದೊಂದಿಗೆ ಸೌತ್ ಆಫ್ರಿಕಾ ತಂಡ ಕಣಕ್ಕಿಳಿಯಬೇಕಾಗುತ್ತದೆ. ಏಕೆಂದರೆ ತಂಡ ಪ್ರಮುಖ ಬೌಲರ್​ಗಳಾದ ಮಾರ್ಕೊ ಜಾನ್ಸೆನ್, ಅನ್ರಿಕ್ ನೋಕಿಯಾ, ಕಗಿಸೊ ರಬಾಡ, ಲುಂಗಿ ಎನ್​ಗಿಡಿ, ಡ್ವೈನ್ ಪ್ರಿಟೋರಿಯಸ್ ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಬಾಂಗ್ಲಾದೇಶದ ವಿರುದ್ದ ಸೌತ್ ಆಫ್ರಿಕಾ ಹೊಸ ಬೌಲರ್​ಗಳೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ.

ಐಪಿಎಲ್ 2022 ನಲ್ಲಿರುವ ಸೌತ್ ಆಫ್ರಿಕಾ ಆಟಗಾರರು : ಕಗಿಸೊ ರಬಾಡ (ಪಂಜಾಬ್ ಕಿಂಗ್ಸ್), ಕ್ವಿಂಟನ್ ಡಿ ಕಾಕ್ ( ಲಕ್ನೋ ಸೂಪರ್ ಜೈಂಟ್ಸ್), ಅನ್ರಿಕ್ ನೋಕಿಯಾ (ಡೆಲ್ಲಿ ಕ್ಯಾಪಿಟಲ್ಸ್), ಮಾರ್ಕೊ ಜಾನ್ಸೆನ್ (ಸನ್​ರೈಸರ್ಸ್​ ಹೈದರಾಬಾದ್), ಡೇವಿಡ್ ಮಿಲ್ಲರ್ (ಗುಜರಾತ್ ಟೈಟನ್ಸ್), ಡೆವಾಲ್ಡ್ ಬ್ರೆವಿಸ್ (ಮುಂಬೈ ಇಂಡಿಯನ್ಸ್) , ಐಡೆನ್ ಮಾರ್ಕ್ರಾಮ್ (ಸನ್​ರೈಸರ್ಸ್​ ಹೈದರಾಬಾದ್), ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್ (ರಾಜಸ್ಥಾನ್ ರಾಯಲ್ಸ್), ಲುಂಗಿ ಎನ್ಗಿಡಿ (ಡೆಲ್ಲಿ ಕ್ಯಾಪಿಟಲ್ಸ್), ಡ್ವೈನ್ ಪ್ರಿಟೋರಿಯಸ್ (ಚೆನ್ನೈ ಸೂಪರ್ ಕಿಂಗ್ಸ್​)

ಬಾಂಗ್ಲಾದೇಶ ವಿರುದ್ದದ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜಾ, ಮಾರ್ಕೊ ಜಾನ್ಸೆನ್, ಜಾನ್ನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ

ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(IPL 2022: South Africa Players Set to Skip Bangladesh Tests For T20 League)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್