- Kannada News Photo gallery IPL 2022 Top 5 contenders suryakumar yadav shreyas iyer david warner virat kohli kl rahul who can win Orange Cap this season 15th IPL
IPL 2022: ಈ ವರ್ಷದ ಆರೆಂಜ್ ಕ್ಯಾಪ್ಗೆ 4 ಭಾರತೀಯ ಮತ್ತು ಒಬ್ಬ ವಿದೇಶಿ ಆಟಗಾರನ ನಡುವೆ ಪೈಪೋಟಿ
ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಪರದಾಡುತ್ತಿದ್ದಾರೆ. ಅವರು ಡಿಸೆಂಬರ್ 2019 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಒಂದು ಶತಕವನ್ನು ಗಳಿಸಿಲ್ಲ. ಫಾಫ್ ಡು ಪ್ಲೆಸಿಸ್ ಈಗ RCB ನಾಯಕರಾಗಿದ್ದಾರೆ. ಹಾಗಾಗಿ ಕೊಹ್ಲಿ ಮೇಲೆ ಯಾವುದೇ ಒತ್ತಡವಿಲ್ಲದ ಕಾರಣ ರನ್ ಮಳೆ ಸುರಿಸುವ ಸಾಧ್ಯತೆಯದೆ.
Updated on:Mar 19, 2022 | 4:17 PM

ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಸೊಗಸಾದ ಶೈಲಿಗೆ ಹೆಸರುವಾಸಿಯಾದ ಆಟಗಾರರಲ್ಲಿ ಒಬ್ಬರು. ಐಪಿಎಲ್ 2022 ರ ನಂತರ, ಅಯ್ಯರ್ ಈಗ ತಮ್ಮ ಐಷಾರಾಮಿ ಜೀವನಶೈಲಿಗಾಗಿ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಪರದಾಡುತ್ತಿದ್ದಾರೆ. ಅವರು ಡಿಸೆಂಬರ್ 2019 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಒಂದು ಶತಕವನ್ನು ಗಳಿಸಿಲ್ಲ. ಫಾಫ್ ಡು ಪ್ಲೆಸಿಸ್ ಈಗ RCB ನಾಯಕರಾಗಿದ್ದಾರೆ. ಹಾಗಾಗಿ ಕೊಹ್ಲಿ ಮೇಲೆ ಯಾವುದೇ ಒತ್ತಡವಿಲ್ಲದ ಕಾರಣ ರನ್ ಮಳೆ ಸುರಿಸುವ ಸಾಧ್ಯತೆಯದೆ.

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ವೆಸ್ಟ್ ಇಂಡೀಸ್ ವಿರುದ್ಧ ODI ಮತ್ತು T20 ಗಳಲ್ಲಿ ಬ್ಯಾಟ್ ಮಾಡಿದರು. ಐಪಿಎಲ್ನಲ್ಲಿ ಅವರ ಸ್ಥಿರ ಪ್ರದರ್ಶನಕ್ಕಾಗಿ ಮುಂಬೈ ಇಂಡಿಯನ್ಸ್ ಅವರನ್ನು ಉಳಿಸಿಕೊಂಡಿದೆ. ಈ ವರ್ಷದ ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ರೇಸ್ನಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.

ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದಾರೆ. ಈ ಹಿಂದೆ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು. 2020 ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ರಾಹುಲ್ ಈ ಬಾರಿ ಕೂಡ ನಿರೀಕ್ಷಿ ಮೂಡಿಸಿದ್ದಾರೆ.

ಡೇವಿಡ್ ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟರ್ ಆಗಿ ಗುರಿತಿಸಿಕೊಂಡಿದದಾರೆ. ಅವರನ್ನು ಆಕ್ರಮಣಕಾರಿ ಎಡಗೈ ಬ್ಯಾಟ್ಸ್ಮನ್ ಎಂದು ಕರೆಯಲಾಗುತ್ತದೆ. ರಿಕಿ ಪಾಂಟಿಂಗ್ ಅವರ ಮಾರ್ಗದರ್ಶನದಲ್ಲಿ ಅವರು ಐಪಿಎಲ್ನಲ್ಲಿ ನಾಲ್ಕನೇ ಬಾರಿಗೆ ಆರೆಂಜ್ ಕ್ಯಾಪ್ ಗೆಲ್ಲಲು ಈ ಬಾರಿ ಪ್ರಯತ್ನಿಸಲಿದ್ದಾರೆ.
Published On - 8:36 am, Thu, 17 March 22



















