- Kannada News Photo gallery Puneeth Rajkumar Starrer James Movie to hit screen today with more than 800 shows in Bengaluru
James Movie: ‘ಜೇಮ್ಸ್’ ಜಾತ್ರೆ: ಪುನೀತ್ ಸಿನಿಮಾಗೆ ಸಿಕ್ತು ದಾಖಲೆ ಶೋ
ಕರ್ನಾಟಕದ 400ಕ್ಕೂ ಹೆಚ್ಚಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ರಿಲೀಸ್ ಆಗುತ್ತಿದೆ. 150ಕ್ಕೂ ಹೆಚ್ಚು ಮಲ್ಟಿಫ್ಲೆಕ್ಸ್ಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣಲಿದೆ. ಬೆಳಗ್ಗೆ 4 ಗಂಟೆಯಿಂದಲೇ ‘ಜೇಮ್ಸ್’ ಶೋ ಆರಂಭಗೊಂಡಿದೆ.
Updated on: Mar 17, 2022 | 5:00 AM

ಪುನೀತ್ ರಾಜ್ಕುಮಾರ್ ನಮ್ಮ ಜತೆಗೆ ಇಲ್ಲ. ಇಂದು (ಮಾರ್ಚ್ 17) ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದೇ ಅವರು ಹೀರೋ ಆಗಿ ಕಾಣಿಸಿಕೊಂಡ ‘ಜೇಮ್ಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಇದರಿಂದ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ರಾಜ್ಯಾದ್ಯಂತ ‘ಜೇಮ್ಸ್’ ಜಾತ್ರೆ ಮಾಡುತ್ತಿದ್ದಾರೆ. ರಾಜ್ಯದ ಬಹುತೇಕ ಎಲ್ಲಾ ಸಿಂಗಲ್ ಸ್ಕ್ರೀನ್ ಚಿತ್ರ ಮಂದಿರಗಳಲ್ಲೂ ‘ಜೇಮ್ಸ್’ ಸಿನಿಮಾ ತೆರೆ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ನ ಕೆಲವೇ ಪರದೆಗಳಲ್ಲಿ ಪರಭಾಷೆಯ ಚಿತ್ರ ಪ್ರದರ್ಶನ ಕಾಣಲಿವೆ.

ಕರ್ನಾಟಕದ 400ಕ್ಕೂ ಹೆಚ್ಚಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ರಿಲೀಸ್ ಆಗುತ್ತಿದೆ. 150ಕ್ಕೂ ಹೆಚ್ಚು ಮಲ್ಟಿಫ್ಲೆಕ್ಸ್ಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣಲಿದೆ. ಬೆಳಗ್ಗೆ 4 ಗಂಟೆಯಿಂದಲೇ ‘ಜೇಮ್ಸ್’ ಶೋ ಆರಂಭಗೊಳ್ಳಲಿದೆ.

ಈಗಾಗಲೇ ರಾಜ್ಯದಲ್ಲಿ ಮೊದಲ ದಿನದ ಬಹುತೇಕ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಬೆಂಗಳೂರು ಒಂದರಲ್ಲೇ 800ಕ್ಕೂ ಹೆಚ್ಚಿನ ಶೋ ಗಳು ಪ್ರದರ್ಶನ ಆಗಲಿವೆ. ಕರ್ನಾಟಕದಾದ್ಯಂತ ಮೊದಲ ದಿನ ಒಟ್ಟು 2 ರಿಂದ 3 ಸಾವಿರ ಶೋಗಳು ಪ್ರದರ್ಶನ ಕಾಣಲಿವೆ. ಆಂಧ್ರ, ತೆಲಂಗಾಣದಲ್ಲಿ 300ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದೆ.

ತಮಿಳುನಾಡು, ಮಹಾರಾಷ್ಟ್ರ, ಕೇರಳ, ದೆಹಲಿ, ಸೇರಿದಂತೆ ದೇಶಾದ್ಯಂತ ಜೇಮ್ಸ್ ತೆರೆಗೆ ಬರಲಿದೆ. ದೇಶದಲ್ಲಿ ಅಲ್ಲದೆ ವಿದೇಶಗಳಲ್ಲೂ ‘ಜೇಮ್ಸ್’ ಸಿನಿಮಾ ರಿಲೀಸ್ ಆಗುತ್ತಿದೆ. ಅಮೆರಿಕಾ , ಆಸ್ಟ್ರೇಲಿಯಾ , ಕೆನಡಾ, ಇಂಗ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ 200ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ‘ಜೇಮ್ಸ್’ ದರ್ಬಾರ್ ಇರಲಿದೆ.




