‘ಅರಳು ಕಣ್ಗಳ’ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ : ಫೋಟೋಗಳಲ್ಲಿ ನೋಡಿ
ಶಿರಸಿ ಅಧಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದೆ. ಬಿಡಕಿ ಬೈಲಿನಲ್ಲಿರುವ ಗದ್ದುಗೆಗೆ ಒಂದು ದೇವಿ ಆಗಮಿಸಿ ವಿರಾಜಮಾನಳಾಗಿದ್ದಾಳೆ. ಜಾತ್ರೆಯ ಇಂದಿನ ಕೆಲ ಫೋಟೋಗಳು ಇಲ್ಲಿವೆ.
Updated on:Mar 16, 2022 | 6:25 PM

ಶಿರಸಿ ಶಕ್ತಿಪೀಠ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಿದೆ. ಇಂದು ಮಧ್ಯಾಹ್ನ ದೇವಿ ಗದ್ದುಗೆಗೆ ಬಂದು ಕುಳಿತಿದ್ದಾಳೆ. ಇಂದಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ

ಮಾರಿಕಾಂಬಾ ದೇವಾಲಯದಿಂದ 7 ಅಡಿ ದೇವಿಯ ವಿಗ್ರಹವನ್ನು ರಥದಲ್ಲಿ ತರಲಾಯಿತು.

ಸರ್ವಾಲಂಕಾರ ಭೂಷಿತಳಾದ ದೇವಿಯನ್ನು ರಥದಲ್ಲಿ ಮೆರವಣಿಗೆ ಮಾಡಲಾಯಿತು.

ಒಟ್ಟು 9 ದಿನಗಳ ಕಾಲ ಬಿಡಕಿ ಬೈಲಿನಲ್ಲಿರುವ ಗದ್ದುಗೆಯಲ್ಲಿ ಕುಳಿತು ದರ್ಶನ ನೀಡುತ್ತಾಳೆ.

ದೇವಿಯನ್ನು ಗದ್ದುಗೆಗೆ ಕರೆತರುವ ವೇಳೆ ಸಾವಿರಾರು ಭಕ್ತರು ನೆರೆದಿದ್ದರು.

ರಾತ್ರಿ ಕಲ್ಯಾಣೋತ್ಸವವನ್ನು ಮಾಡಿ ತೇರಿನಲ್ಲಿ ಕೂರಿಸಿಕೊಂಡು ತೇರನ್ನು ಎಳೆಯುವ ಮೂಲಕ ದೇವಿಯನ್ನು ಕರೆತರಲಾಯಿತು.

ಮಾರಿಕಾಂಬಾ ದೇವಿಯ ರಥೋತ್ಸವದ ವೇಳೆ ನೆರೆದ ಜನಸಮೂಹ.

ಮೆರವಣಿಗೆಯ ಬಳಿಕ ಗದ್ದುಗೆಗೆ ಮಾರಿಕಾಂಬ ದೇವಿ ಬರುತ್ತಿರುವ ದೃಶ್ಯ.

ಗದ್ದುಗೆಯನ್ನು ಏರುವ ವೇಳೆ ಮಾರಿಕಾಂಬಾ ದೇವಿ ಕಾಣಿಸಿಕೊಂಡಿದ್ದು ಹೀಗೆ

ಸರ್ವಾಲಂಕಾರ ಭೂಷಿತೆಯಾಗಿ, ರತ್ನ ಖಚಿತ ಆಭರಣಗಳನ್ನು ಧರಿಸಿ ಗದ್ದುಗೆಯರಿದ ಶಿರಸಿ ಮಾರಿಕಾಂಬಾ ದೇವಿ.

ಬಿಡಕಿ ಬೈಲಿನ ಗದ್ದುಗೆಯಲ್ಲಿ ಸ್ಥಾನವನ್ನು ಅಲಂಕರಿಸಿದ ಮಾರಿಕಾಂಬಾ ದೇವಿ. ಇನ್ನು ಮಾರ್ಚ್ 23ರವರೆಗೆ ದೇವಿ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದು ಭಕ್ತರಿಗೆ ದರ್ಶನ ನೀಡುತ್ತಾಳೆ. ಫೋಟೋಗಳು- ರವೀಶ್ ಹೆಗಡೆ
Published On - 6:25 pm, Wed, 16 March 22



















