Rishabh Pant: ಟಿ20 ತಂಡದಲ್ಲಿ ಆರಂಭಿಕನಾಗಿ ಚಾನ್ಸ್​ ನೀಡಿ ಎಂದ ರಿಷಭ್ ಪಂತ್

| Updated By: ಝಾಹಿರ್ ಯೂಸುಫ್

Updated on: Nov 30, 2022 | 7:33 PM

Rishabh Pant: ರಿಷಭ್ ಪಂತ್​ಗೆ ಸತತ ಅವಕಾಶ ನೀಡುತ್ತಿರುವ ಪರಿಣಾಮ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್​ ಸಂಜು ಸ್ಯಾಮ್ಸನ್ ಹಲವು ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಗಿ ಬಂದಿದೆ.

1 / 7
ಟೀಮ್ ಇಂಡಿಯಾ ಪರ ಸತತ ವಿಫಲರಾಗುತ್ತಿರುವ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ ಆಯ್ಕೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಏಷ್ಯಾಕಪ್, ಟಿ20 ವಿಶ್ವಕಪ್ ಹಾಗೂ ನ್ಯೂಜಿಲೆಂಡ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಪಂತ್ ಅವರನ್ನು ತಂಡದಿಂದ ಕೈ ಬಿಡಬೇಕೆಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಆದರೆ ಇದರ ನಡುವೆ ಪಂತ್ ನೀಡಿರುವ ಹೇಳಿಕೆಗಳು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

2 / 7
ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಂತ್, ಟೀಮ್ ಇಂಡಿಯಾ ನೀಡುವ ಯಾವುದೇ ಕ್ರಮಾಂಕದಲ್ಲೂ ನಾನು ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ. ಆದರೆ....

3 / 7
ಒಂದು ಅವಕಾಶ ನೀಡಿದ್ರೆ ನಾನು ಟಿ20 ಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲು ಬಯಸುತ್ತೇನೆ ಎಂದಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಆಡಲು ಇಷ್ಟಪಡುತ್ತೇನೆ. ಇನ್ನು ಟೆಸ್ಟ್​ನಲ್ಲಿ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದು, ಆ ಸ್ಥಾನದಲ್ಲೇ ಬ್ಯಾಟಿಂಗ್ ಮುಂದುವರೆಸುತ್ತೇನೆ ಎಂದಿದ್ದಾರೆ.

4 / 7
ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ನಾನು ಟಾಪ್ ಆರ್ಡರ್​ನಲ್ಲಿ ಬ್ಯಾಟ್ ಬೀಸಲು ಬಯುಸುತ್ತಿರುವುದಾಗಿ ರಿಷಭ್ ಪಂತ್ ತಿಳಿಸಿದ್ದಾರೆ. ಅದರಲ್ಲೂ ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

5 / 7
ಅಚ್ಚರಿ ಎಂದರೆ ಈ ವರ್ಷ 25 ಟಿ20 ಇನಿಂಗ್ಸ್ ಆಡಿರುವ ರಿಷಭ್ ಪಂತ್ ಕಲೆಹಾಕಿರುವುದು 364 ರನ್​ಗಳು ಮಾತ್ರ. ಅಂದರೆ ಪ್ರತಿ ಪಂದ್ಯದಲ್ಲಿ ಕೇವಲ 21.41 ಹೊಂದಿದ್ದಾರೆ. ಈ ವೇಳೆ ಕೇವಲ 1 ಅರ್ಧಶತಕ ಮಾತ್ರ ಬಾರಿಸಿದ್ದರು. ಈ ಅಂಕಿ ಅಂಶಗಳ ಪ್ರಕಾರ ರಿಷಭ್ ಪಂತ್ ಅತ್ಯಂತ ಕಳಪೆ ಫಾರ್ಮ್​ನಲ್ಲಿರುವುದು ಸ್ಪಷ್ಟ.

6 / 7
ಇದಾಗ್ಯೂ ಅಗ್ರ ಕ್ರಮಾಂಕದಲ್ಲಿ ಅವಕಾಶವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿರುವ ರಿಷಭ್ ಪಂತ್ ವಿರುದ್ಧ ಇದೀಗ ಟೀಕೆಗಳು ಕೇಳಿ ಬರುತ್ತಿದೆ. ಅದರಲ್ಲೂ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಕ್ರಮಾಂಕದ ಬದಲಾವಣೆಯ ಬೇಡಿಕೆಯಿಟ್ಟಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ.

7 / 7
ಏಕೆಂದರೆ ವೈಫಲ್ಯದ ನಡುವೆ ರಿಷಭ್ ಪಂತ್​ಗೆ ಸತತ ಅವಕಾಶ ನೀಡುತ್ತಿರುವ ಪರಿಣಾಮ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್​ ಸಂಜು ಸ್ಯಾಮ್ಸನ್ ಹಲವು ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಗಿ ಬಂದಿದೆ. ಇದಾಗ್ಯೂ ರಿಷಭ್ ಪಂತ್ ಆರಂಭಿಕನ ಸ್ಥಾನವನ್ನು ಎದುರು ನೋಡುತ್ತಿರುವುದೇ ಅಚ್ಚರಿ.

Published On - 7:30 pm, Wed, 30 November 22