IND vs ENG: ರಿಷಭ್ ಪಂತ್​ ಕೈಗೆ ಗಾಯ; ನೋವಿನಿಂದ ಮೈದಾನ ತೊರೆದ ವಿಕೆಟ್ ಕೀಪರ್

Rishabh Pant Injured: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರು ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದಾರೆ. ಅವರ ಬೆರಳಿಗೆ ಚೆಂಡು ಬಡಿದ ಪರಿಣಾಮ ಅವರು ಮೈದಾನವನ್ನು ತೊರೆಯಬೇಕಾಯಿತು. ಪಂತ್ ಬದಲಿಗೆ ಧ್ರುವ್ ಜುರೇಲ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದಾರೆ. ಪಂತ್ ಅವರ ಗಾಯ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿದೆ, ಏಕೆಂದರೆ ಅವರು ಇತ್ತೀಚೆಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

IND vs ENG: ರಿಷಭ್ ಪಂತ್​ ಕೈಗೆ ಗಾಯ; ನೋವಿನಿಂದ ಮೈದಾನ ತೊರೆದ ವಿಕೆಟ್ ಕೀಪರ್
Rishabh Pant

Updated on: Jul 10, 2025 | 7:38 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಟೆಸ್ಟ್ ಪಂದ್ಯದ ಮೊದಲ ದಿನದಾಟದ ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಟೀಂ ಇಂಡಿಯಾ ಆ ಬಳಿಕ ಕೊಂಚ ಹಿನ್ನಡೆ ಅನುಭವಿಸಿದೆ. ಈ ನಡುವೆ ತಂಡಕ್ಕೆ ಮತ್ತೊಂದು ಆಘಾತಕ್ಕಾರಿ ಸುದ್ದಿ ಎದುರಾಗಿದ್ದು, ಪಂದ್ಯದ ಮಧ್ಯದಲ್ಲಿಯೇ ಟೀಂ ಇಂಡಿಯಾ ತನ್ನ ವಿಕೆಟ್ ಕೀಪರ್ ಅನ್ನು ಬದಲಾಯಿಸಬೇಕಾಗಿದೆ. ವಾಸ್ತವವಾಗಿ, ರಿಷಭ್ ಪಂತ್ (Rishabh Pant) ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದು, ಇದರಿಂದಾಗಿ ಅವರು ಮೈದಾನವನ್ನು ತೊರೆದಿದ್ದಾರೆ. ಹೀಗಾಗಿ ಪಂತ್ ಬದಲಿಗೆ ಧ್ರುವ್ ಜುರೆಲ್ (Dhruv Jurel) ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದಾರೆ. ಪಂದ್ಯದ ಮೊದಲ ದಿನವೇ ಪಂತ್ ಗಾಯಗೊಂಡಿರುವುದು ತಂಡವನ್ನು ಆತಂಕಕ್ಕೆ ತಳ್ಳಿದೆ.

ಪಂತ್ ಬದಲಿಗೆ ಜುರೇಲ್ ಆಗಮನ

ವಾಸ್ತವವಾಗಿ ಕೀಪಿಂಗ್ ಮಾಡುವಾಗ, ಚೆಂಡು ರಿಷಭ್ ಪಂತ್ ಅವರ ಬೆರಳಿಗೆ ವೇಗವಾಗಿ ಬಡಿಯಿತು. ಇದು ಪಂತ್ ಅವರನ್ನು ತೀವ್ರ ನೋವಿನಿಂದ ಬಳಲುವಂತೆ ಮಾಡಿತು. ಪಂತ್ ಅವರ ಸ್ಥಿತಿಯನ್ನು ನೋಡಿದ ಫಿಸಿಯೋ ತಕ್ಷಣ ಮೈದಾನಕ್ಕೆ ಬಂದು ಅವರ ಬೆರಳಿಗೆ ಸ್ಪ್ರೇ ಮಾಡಿದರು. ಇದಾದ ನಂತರವೂ, ಪಂತ್ ಅವರ ನೋವು ಕಡಿಮೆಯಾಗಲಿಲ್ಲ. ಹೀಗಾಗಿ ಅವರು ಮೈದಾನವನ್ನು ತೊರೆಯಬೇಕಾಯಿತು. ಪಂತ್ ಬದಲಿಗೆ ಧ್ರುವ್ ಜುರೆಲ್ ಈಗ ಮೈದಾನಕ್ಕೆ ವಿಕೆಟ್ ಕೀಪರ್ ಆಗಿ ಬಂದಿದ್ದಾರೆ.

ರಿಷಭ್ ಪಂತ್​ಗೆ ಗಾಯ

ಮೇಲೆ ಹೇಳಿದಂತೆ ಪಂತ್ ಗಾಯಗೊಂಡಿರುವುದು ಟೀಂ ಇಂಡಿಯಾದ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಏಕೆಂದರೆ ಇಲ್ಲಿಯವರೆಗೆ, ನಡೆದಿರುವ ಎರಡು ಪಂದ್ಯಗಳಲ್ಲಿ ಪಂತ್ ಅವರ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿದೆ. ಹೆಡಿಂಗ್ಲೆ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಪಂತ್ ಶತಕ ಬಾರಿಸಿದ್ದರು. ಆ ಬಳಿಕ ಎಡ್ಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲೂ ಪಂತ್ ಅಬ್ಬರಿಸಿದ್ದರು.

IND vs ENG: ಸಿಕ್ಸರ್‌ಗಳ ಸರಮಾಲೆ; ಇಂಗ್ಲೆಂಡ್​ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ರಿಷಭ್ ಪಂತ್

ಇಂಗ್ಲೆಂಡ್​ಗೆ ಆರಂಭಿಕ ಆಘಾತ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಇನ್ನಿಂಗ್ಸ್‌ನ 14 ನೇ ಓವರ್‌ನಲ್ಲಿ ಯುವ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ಅವರನ್ನು ಪೆವಿಲಿಯನ್​ಗಟ್ಟಿದರು. ಡಕೆಟ್ 23 ರನ್ ಗಳಿಸಿ ಔಟಾದರೆ, ಕ್ರೌಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಆರಂಭಿಕ ಆಘಾತದ ನಂತರ ಇಂಗ್ಲೆಂಡ್ ಇನ್ನಿಂಗ್ಸ್ ನಿಭಾಯಿಸುತ್ತಿರುವ  ಜೋ ರೂಟ್ ಮತ್ತು ಓಲಿ ಪೋಪ್ ತಂಡವನ್ನು 100 ರನ್‌ಗಳ ಗಡಿ ದಾಟಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Thu, 10 July 25