ಆಂಗ್ಲರ ನಾಡಲ್ಲಿ ಇಂಗ್ಲೆಂಡ್ (IND vs ENG) ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡ ಲೀಸೆಸ್ಟರ್ಷೈರ್ (IND vs LEI) ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದು ರೋಹಿತ್ ಪಡೆ ಉತ್ತಮ ಮೊತ್ತದತ್ತ ಸಾಗುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ದ್ವಿತೀಯ ದಿನದಾಟದ ಅಂತ್ಯಕ್ಕೆ 80 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. 82 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಈ ಅಭ್ಯಾಸ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant), ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಲೀಸಿಸ್ಟರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ವಿರುದ್ಧ ಪೂಜಾರ, ಬುಮ್ರಾ ಹಾಗೂ ಪ್ರಸಿದ್ಧ್ ಮ್ಯಾಜಿಕ್ ಮಾಡುವಲ್ಲಿ ವಿಫಲರಾದರು. ಆದರೆ, ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸಿ ಮಿಂಚಿದರು.
ಹೌದು, ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ರಿಷಭ್ ಪಂತ್ ಕೇವಲ 87 ಎಸೆತಗಳಲ್ಲಿ 14 ಫೋರ್, 1 ಸಿಕ್ಸರ್ ಸಿಡಿಸಿ 76 ರನ್ ಚಚ್ಚಿದರು. 46ನೇ ಓವರ್ನ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಪಂತ್ ಸಿಕ್ಸ್ ಸಿಡಿಸಲು ಹೋಗಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂತ್ ಔಟಾದಾಗ ಭಾರತೀಯ ಆಟಗಾರರು ಸಂಭ್ರಮದಲ್ಲಿ ನಿರತರಾಗಿದ್ದರು. ಈ ವೇಳೆ ರಿಷಭ್ ಪಂತ್ ಕೂಡ ಟೀಮ್ ಇಂಡಿಯಾ ಆಟಗಾರರ ಜೊತೆ ಸೇರಿ ಖುಷಿ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
N Jagadeesan: ಮಧ್ಯಮ ಬೆರಳು ತೋರಿಸಿದ ಸಿಎಸ್ಕೆ ಸ್ಟಾರ್ ಪ್ಲೇಯರ್ ಪಂದ್ಯದ ಬಳಿಕ ಹೇಳಿದ್ದೇನು ನೋಡಿ
☝️ | Pant (76), ? Iyer, ? Jadeja.@RishabhPant17’s incredibly entertaining innings ends. ?
He gets a hug from Jadeja & high fives from his @BCCI teammates.
? LEI 213/7
???? ??????: https://t.co/DdQrXej7HC?
? #IndiaTourMatch | #LEIvIND | #TeamIndia pic.twitter.com/80rSTLyMCe
— Leicestershire Foxes ? (@leicsccc) June 24, 2022
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 60.2 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿ ಡಿಕ್ಲೇರ್ ಘೀಷಿಸಿತು. ಭರತ್ 111 ಎಸೆತಗಳಲ್ಲಿ 8 ಫೋರ್, 1 ಸಿಕ್ಸರ್ನೊಂದಿಗೆ ಅಜೇಯ 70 ರನ್ ಗಳಿಸಿದರು. ಬಳಿಕ ಲೀಸೆಸ್ಟರ್ಷೈರ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಎದುರು ರನ್ ಹೆಕ್ಕಲು ಪರದಾಟ ನಡೆಸಿತು. ರಿಷಭ್ ಪಂತ್ 76 ರನ್ ಸಿಡಿಸಿದ್ದನ್ನು ಬಿಟ್ಟರೆ, ಲೂಯಿಸ್ ಕಿಂಬರ್ (31) ಮತ್ತು ರಿಷಿ ಪಟೇಲ್ (34) ಕೊಂಚ ಪ್ರತಿರೋಧವೊಡ್ಡಿದರು. ಚೇತೇಶ್ವರ್ ಪೂಜಾರ ಸೊನ್ನೆ ಸುತ್ತಿದ್ದು ಟೀಮ್ ಇಂಡಿಯಾಗೆ ತಲೆ ನೋವು ಶುರುವಾಗಿದೆ. ಭಾರತ ತಂಡದ ಪರ ಮೊಹಮ್ಮದ್ ಶಮಿ 12 ಓವರ್‌ಗಳಲ್ಲಿ 42 ರನ್ ಕೊಟ್ಟು 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ 26ಕ್ಕೆ 2 ವಿಕೆಟ್ ಪಡೆದರೆ, ಶಾರ್ದುಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ಕೆಎಸ್ ಭರತ್ ಹಾಗೂ ಶುಭ್ಮನ್ ಗಿಲ್ 62 ರನ್ಗಳ ಜೊತೆಯಾಟ ಆಡಿದರು. ಗಿಲ್ 34 ಎಸೆತಗಳಲ್ಲಿ 38 ರನ್ ಗಳಿಸಿ ಔಟಾದರು. ದಿನದಾಟದ ಅಂತ್ಯಕ್ಕೆ ಭಾರತ 18 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿತು. ಭರತ್ 59 ಎಸೆತಗಳಲ್ಲಿ 31 ರನ್ ಮತ್ತು ಹನುಮಾ ವಿಹಾರಿ 9 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
IND vs LEI: ಭರತ್ ಮೇಲೆ ಭಾರತ ನಂಬಿಕೆ: ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಮುನ್ನಡೆ
Published On - 9:24 am, Sat, 25 June 22