IND vs ENG, 2nd T20: ರೋಹಿತ್ ಜೊತೆ ಪಂತ್ ಓಪನರ್! ಕಿಶನ್​ಗೆ ಕೋಕ್? 2ನೇ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ

| Updated By: ಪೃಥ್ವಿಶಂಕರ

Updated on: Jul 09, 2022 | 2:34 PM

IND vs ENG, 2nd T20: ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡನೇ T20 ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಈ ಪಂದ್ಯಕ್ಕೆ ಲಭ್ಯವಿರುತ್ತಾರೆ. ಈ ನಡುವೆ ಪಂತ್ ಬಗ್ಗೆ ಪಾರ್ಥಿವ್ ಪಟೇಲ್ ದೊಡ್ಡ ಹೇಳಿಕೆ ನೀಡಿದ್ದಾರೆ.

IND vs ENG, 2nd T20: ರೋಹಿತ್ ಜೊತೆ ಪಂತ್ ಓಪನರ್! ಕಿಶನ್​ಗೆ ಕೋಕ್? 2ನೇ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ
ರಿಷಭ್ ಪಂತ್, ರೋಹಿತ್
Follow us on

ಮೊದಲ ಟಿ20ಯಲ್ಲಿ 50 ರನ್‌ಗಳ ಏಕಪಕ್ಷೀಯ ಗೆಲುವು ಸಾಧಿಸಿದ ನಂತರ ಇದೀಗ ಎಡ್ಜ್‌ಬಾಸ್ಟನ್‌ನ ಸವಾಲು ಟೀಂ ಇಂಡಿಯಾ ಮುಂದಿದೆ. ಇದೇ ಮೈದಾನದಲ್ಲಿ ಐದನೇ ಟೆಸ್ಟ್​ನಲ್ಲಿ ಸೋಲನುಭವಿಸಬೇಕಾಗಿ ಬಂದಿದ್ದು, ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಕೈ ತಪ್ಪಿ ಹೋಯಿತು. ಆದರೆ, ಇದೀಗ ಅತಿ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವೆ ಹಣಾಹಣಿ ನಡೆಯಲಿದೆ. ಏತನ್ಮಧ್ಯೆ, ಈ ಪಂದ್ಯದಲ್ಲಿ ರಿಷಬ್ ಪಂತ್, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ (Rishabh Pant , Virat Kohli, Jasprit Bumrah) ಆಡಬಹುದು ಎಂಬ ಪ್ರಮುಖ ಸುದ್ದಿ ಭಾರತೀಯ ಪಾಳಯದಿಂದ ಬಂದಿದೆ. ಆದರೆ ಇಲ್ಲಿ ಪ್ರಶ್ನೆ ಏನೆಂದರೆ ಈ ಆಟಗಾರರು ಯಾರ ಸ್ಥಾನದಲ್ಲಿ ಆಡುತ್ತಾರೆ? ಎಂಬುದಾಗಿದೆ. ಎಡಗೈ ಬೌಲರ್ ಕೇವಲ ಒಂದು ಟಿ20 ಪಂದ್ಯಕ್ಕೆ ಮಾತ್ರ ತಂಡದಲ್ಲಿದ್ದ ಕಾರಣ ಅರ್ಷದೀಪ್ ಸಿಂಗ್ ಬದಲಿಗೆ ಬುಮ್ರಾ ಆಡುವುದು ಖಚಿತವಾಗಿದೆ. ಆದರೆ ವಿರಾಟ್-ಪಂತ್ ಯಾರ ಸ್ಥಾನದಲ್ಲಿ ಆಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ನಡುವೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ (Parthiv Patel), ಪಂತ್ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ್ದು, ಎರಡನೇ ಟಿ20ಯಲ್ಲಿ ಪಂತ್‌ ಓಪನರ್​ ಆಗಿ ಕಣಕ್ಕಿಳಿಯಬಹುದು ಎಂಬ ಅಚ್ಚರಿಯ ಸಂಗತಿಯನ್ನು ಪಾರ್ಥಿವ್ ಹೇಳಿದ್ದಾರೆ.

ಪಂತ್ ಇನ್, ಇಶಾನ್ ಕಿಶನ್ ಔಟ್?
ಈ ಬಗ್ಗೆ ಮಾತನಾಡಿರುವ ಪಾರ್ಥೀವ್ ಪಟೇಲ್, ರಿಷಭ್ ಪಂತ್‌ಗೆ ಈ ಐಪಿಎಲ್ ಉತ್ತಮವಾಗಿರಲಿಲ್ಲ, ಆದರೆ ಈ ಆಟಗಾರ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶತಕ ಮತ್ತು ಅರ್ಧಶತಕ ಬಾರಿಸುವ ಮೂಲಕ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದಾರೆ. ಇಶಾನ್ ಕಿಶನ್ ಬದಲಿಗೆ ಅವರು ಓಪನ್ ಮಾಡಬಹುದು. ಪಂತ್ ಅಗ್ರ ಕ್ರಮಾಂಕದಲ್ಲಿ ಕೆಲವು ಅವಕಾಶಗಳನ್ನು ಪಡೆಯಬಹುದು ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪಂತ್ ಓಪನರ್​ ಆಗಿ ಕಣಕ್ಕಿಳಿಯುವ ಬಗ್ಗೆ ಮಾತನಾಡಲಾಗುತ್ತಿದೆ. ವಾಸಿಂ ಜಾಫರ್‌ನಿಂದ ಹಿಡಿದು ಸುನೀಲ್ ಗವಾಸ್ಕರ್‌ವರೆಗೆ ಹಲವು ಕ್ರಿಕೆಟಿಗರು ಇದೇ ರೀತಿಯ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಇದೀಗ ಪಂತ್ ಆರಂಭಿಕರಾಗಿ ಆಡಿದರೆ, ಈ ವರ್ಷ ಆರಂಭಿಕ ಸ್ಥಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಶಾನ್ ಕಿಶನ್ ಹೊರಗೆ ಕೂರುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಅಷ್ಟಕ್ಕೂ ಅವರ ಶ್ರಮಕ್ಕೆ ಈ ಪ್ರತಿಫಲ ಸಿಗುವುದೇ? ಎಂಬುದನ್ನು ಕಾದು ನೋಡಬೇಕಿದೆ.

ಇಶಾನ್ ಕಿಶನ್ ಇದುವರೆಗೆ 18 ಟಿ20 ಪಂದ್ಯಗಳಲ್ಲಿ 31.29 ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 132ಕ್ಕಿಂತ ಹೆಚ್ಚಿದೆ. ಇದರೊಂದಿಗೆ ನಾಲ್ಕು ಅರ್ಧಶತಕಗಳನ್ನೂ ಗಳಿಸಿದ್ದಾರೆ. ಮತ್ತೊಂದೆಡೆ, ಪಂತ್ ಅವರ T20 ದಾಖಲೆ ತುಂಬಾ ಕಳಪೆಯಾಗಿದೆ. ಆದರೆ ಇದರ ಹೊರತಾಗಿಯೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಪಂತ್ ಮೇಲೆ ನಂಬಿಕೆ ಇರಿಸಿದೆ.

ಇದನ್ನೂ ಓದಿ
ಏಷ್ಯಾಕಪ್‌ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ
Ravindra Jadeja: ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ ಜಡೇಜಾ

ವಿರಾಟ್ ಕೊಹ್ಲಿ ಯಾರ ಸ್ಥಾನದಲ್ಲಿ ಆಡಲಿದ್ದಾರೆ?

ಎರಡನೇ ಟಿ20ಯಲ್ಲಿ ವಿರಾಟ್ ಕೊಹ್ಲಿ ಯಾರ ಸ್ಥಾನದಲ್ಲಿ ಆಡುತ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ತಂಡಕ್ಕೆ ವಿರಾಟ್ ಎಂಟ್ರಿ ಎಂದರೆ ದೀಪಕ್ ಹೂಡಾ ಹೊರಗೆ ಕೂರಬೇಕಾಗಬಹುದು. ಐರ್ಲೆಂಡ್ ವಿರುದ್ಧದ ಟಿ20ಯಲ್ಲಿ ಶತಕ ಸಿಡಿಸಿದ್ದ ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ನಿಸ್ಸಂಶಯವಾಗಿ ಅಭಿಮಾನಿಗಳ ಎಲ್ಲಾ ಕಣ್ಣುಗಳು ಟಾಸ್ ನಂತರ ಪ್ರಕಟಿಸಲಿರುವ ಪ್ಲೇಯಿಂಗ್ XI ಮೇಲೆ ಇರುತ್ತವೆ.

Published On - 2:34 pm, Sat, 9 July 22