Rishabh Pant: ‘ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿದೆ’; ನಟಿ ಊರ್ವಶಿ ಹೇಳಿಕೆಗೆ ತಿರುಗೇಟು ಕೊಟ್ಟ ರಿಷಭ್ ಪಂತ್

| Updated By: ಪೃಥ್ವಿಶಂಕರ

Updated on: Aug 11, 2022 | 3:16 PM

Rishabh Pant: ಕೆಲವರು ಜನಪ್ರಿಯತೆ ಗಳಿಸಲು ಮತ್ತು ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುವುದು ನಗುವಿನ ವಿಷಯವಾಗಿದೆ. ಕೆಲವರಿಗೆ ಜನಪ್ರಿಯತೆಯ ಹಸಿವು ಎಷ್ಟು ಕೆಟ್ಟದಾಗಿದೆ ಎಂದು ಪಂತ್ ಬರೆದುಕೊಂಡಿದ್ದಾರೆ.

Rishabh Pant: ‘ಸುಳ್ಳು ಹೇಳುವುದಕ್ಕೂ ಒಂದು ಮಿತಿಯಿದೆ; ನಟಿ ಊರ್ವಶಿ ಹೇಳಿಕೆಗೆ ತಿರುಗೇಟು ಕೊಟ್ಟ ರಿಷಭ್ ಪಂತ್
Follow us on

ಕೆಲವು ದಿನಗಳಿಂದ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಮತ್ತು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಊಹಾಪೋಹಗಳು ಎದ್ದಿದ್ದವು. ಆದರೆ ಈ ಇಬ್ಬರೂ ಕೂಡ ಈ ವದಂತಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ನಟಿ ಊರ್ವಷಿ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳಿಂದ ಈ ಇಬ್ಬರ ನಡುವೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಅಷ್ಟಕ್ಕೂ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ನಟಿ ಊರ್ವಷಿ, ವಿಕೆಟ್ ಕೀಪರ್ ರಿಷಬ್ ಪಂತ್ ಹೆಸರು ತೆಗೆದುಕೊಳ್ಳದೆ ಅವರ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದರು. ಅದೆನೆಂದರೆ, ಪಂತ್ (ಇಲ್ಲಿ ರಿಷಭ್ ಪಂತ್ ಹೆಸರನ್ನು ನೆರವಾಗಿ ತೆಗೆದುಕೊಳ್ಳದೆ ಕೇವಲ ಆರ್​ಪಿ ಎಂಬ ಪದವನ್ನು ಬಳಸಿದ್ದರು) ನನ್ನನ್ನು ಭೇಟಿಯಾಗಲು ಹೋಟೆಲ್‌ನ ಬಾಲ್ಕನಿಯಲ್ಲಿ ತುಂಬಾ ಸಮಯದಿಂದ ಕಾಯ್ದಿದ್ದರು ಎಂದು ಹೇಳಿದ್ದರು. ಇದೀಗ ಪಂತ್ ಕೂಡ ನಟಿಯ ಹೆಸರನ್ನು ಬಳಸದೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ

ಊರ್ವಶಿ ಹೇಳಿಕೆಗೆ ಪಂತ್ ಹೇಳಿದ್ದೇನು?

ಇದನ್ನೂ ಓದಿ
IND vs ENG: ಪಂತ್​ಗೆ ಜೀವದಾನ ಕೊಟ್ಟು ಕೆಟ್ಟೆವು..! ತಪ್ಪೊಪ್ಪಿಕೊಂಡ ಆಂಗ್ಲ ನಾಯಕ ಬಟ್ಲರ್ ಹೇಳಿದ್ದಿದು
Rishabh Pant Century: ಮ್ಯಾಂಚೆಸ್ಟರ್‌ನಲ್ಲಿ ರಿಷಬ್ ಘರ್ಜನೆ; ಏಕದಿನದಲ್ಲಿ ಚೊಚ್ಚಲ ಶತಕ ಸಿಡಿಸಿದ ಪಂತ್..!
Indian Cricket: 6 ತಿಂಗಳಲ್ಲಿ 6 ನಾಯಕರು; ಕೊಹ್ಲಿ ಉತ್ತರಾಧಿಕಾರಿಯ ಹುಡುಕಾಟವನ್ನು ಬಿಸಿಸಿಐ ನಿಲ್ಲಿಸುವುದು ಯಾವಾಗ?

ಊರ್ವಶಿ ಆರೋಪಕ್ಕೆ ರಿಷಬ್ ಪಂತ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಥೆಯೊಂದನ್ನು ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದರಲ್ಲಿ ಪಂತ್, ಕೆಲವರು ಜನಪ್ರಿಯತೆ ಗಳಿಸಲು ಮತ್ತು ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಸಂದರ್ಶನಗಳಲ್ಲಿ ಸುಳ್ಳು ಹೇಳುವುದು ನಗುವಿನ ವಿಷಯವಾಗಿದೆ. ಕೆಲವರಿಗೆ ಜನಪ್ರಿಯತೆಯ ಹಸಿವು ಎಷ್ಟು ಕೆಟ್ಟದಾಗಿದೆ. ದೇವರು ಅವರನ್ನು ಸಂತೋಷವಾಗಿಡಲಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಹೋದರಿ ನನ್ನ ಹಿಂದೆ ಬರುವುದನ್ನು ಬಿಡು, ಸುಳ್ಳು ಹೇಳುವುದಕ್ಕೂ ಮಿತಿ ಇದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಆದಾಗ್ಯೂ, ಸುಮಾರು ಏಳು ನಿಮಿಷಗಳ ನಂತರ, ಪಂತ್ ಈ ಫೋಸ್ಟ್​ ಅನ್ನು ಡಿಲೀಟ್ ಮಾಡಿದ್ದರು. ಅಷ್ಟೊತ್ತಿಗಾಗಲೇ ಅದರ ಸ್ಕ್ರೀನ್ ಶಾಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು.

ಸಂದರ್ಶನದಲ್ಲಿ ಊರ್ವಶಿ ಹೇಳಿದ್ದೇನು?

ಇತ್ತೀಚೆಗೆ ಊರ್ವಶಿ ಅವರು ಸಂದರ್ಶನವೊಂದರಲ್ಲಿ, ದೆಹಲಿಯ ಹೋಟೆಲ್‌ನಲ್ಲಿ ಆರ್‌ಪಿ (ಇಲ್ಲಿ ರಿಷಭ್ ಪಂತ್ ಹೆಸರನ್ನು ನೆರವಾಗಿ ತೆಗೆದುಕೊಳ್ಳದೆ ಕೇವಲ ಆರ್​ಪಿ ಎಂಬ ಪದವನ್ನು ಬಳಸಿದ್ದರು) ತನಗಾಗಿ ಕಾಯುತ್ತಿದ್ದರು. ನಾನು ಸತತ 10 ಗಂಟೆ ಶೂಟಿಂಗ್ ಮುಗಿಸಿ ದೆಹಲಿಗೆ ಬರುವಷ್ಟರಲ್ಲಿ ತುಂಬಾ ದಣಿದಿದ್ದೆ. ಹಾಗಾಗಿ ಧಣಿವಾರಿಸಿಕೊಳ್ಳಲು ಹೋಟೆಲ್​ ರೂಂ ಗೆ ಹೋಗಿ ಮಲಗಿದ್ದೆ. ಆದರೆ ಆರ್​ಪಿ, ನಾನು ತಂಗಿದ್ದ ಹೋಟೆಲ್​ನ ಲಾಬಿಯಲ್ಲಿ ನನಗಾಗಿ ಕಾದು ಕುಳಿತ್ತಿದ್ದರು. ಜೊತೆಗೆ ಅವರು ನನಗೆ 17 ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ತುಂಬಾ ಸುಸ್ತಾಗಿದ್ದ ನಾನು, ಮುಂಬೈಗೆ ಬಂದು ನಿನ್ನೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದೆ ಎಂದು ಹೇಳಿಕೊಂಡಿದ್ದರು.

ನೇರವಾಗಿ ಹೆಸರು ತೆಗೆದುಕೊಳ್ಳದ ಊರ್ವಶಿ

ಆರ್‌ಪಿ ಯಾರು ಎಂದು ಊರ್ವಶಿ ಅವರನ್ನು ಕೇಳಿದಾಗ, ನಟಿ ಇದಕ್ಕೆ ಉತ್ತರಿಸಲು ನಿರಾಕರಿಸಿದರು. ಆದರೆ, ವೀಡಿಯೊ ವೈರಲ್ ಆದ ನಂತರ, ಅಭಿಮಾನಿಗಳು ಊರ್ವಶಿ ರಿಷಬ್ ಪಂತ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಊಹಿಸಲು ಪ್ರಾರಂಭಿಸಿದರು. ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಶುರುವಾಗಿತ್ತು. ಹೀಗಾಗಿ ಇದನ್ನೇಲ್ಲ ಗಮನಿಸಿದ ಪಂತ್, ನಟಿಗೆ ತಿರುಗೇಟು ನೀಡಿದ್ದಾರೆ.

Published On - 3:14 pm, Thu, 11 August 22