Rishabh Pant Century: ಮ್ಯಾಂಚೆಸ್ಟರ್‌ನಲ್ಲಿ ರಿಷಬ್ ಘರ್ಜನೆ; ಏಕದಿನದಲ್ಲಿ ಚೊಚ್ಚಲ ಶತಕ ಸಿಡಿಸಿದ ಪಂತ್..!

India vs England: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.

Rishabh Pant Century: ಮ್ಯಾಂಚೆಸ್ಟರ್‌ನಲ್ಲಿ ರಿಷಬ್ ಘರ್ಜನೆ; ಏಕದಿನದಲ್ಲಿ ಚೊಚ್ಚಲ ಶತಕ ಸಿಡಿಸಿದ ಪಂತ್..!
Rishabh Pant
Follow us
| Updated By: ಪೃಥ್ವಿಶಂಕರ

Updated on:Jul 18, 2022 | 12:19 AM

ಟೀಂ ಇಂಡಿಯಾ (Team India)ದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ (Rishabh Pant) ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಈಗಾಗಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ರಿಷಬ್ ಪಂತ್, ಕೊನೆಗೂ ಈ ತಂಡದ ವಿರುದ್ಧ ಏಕದಿನ ಪಂದ್ಯದಲ್ಲೂ ಚೊಚ್ಚಲ ಶತಕ ಸಿಡಿಸಿದ್ದಾರೆ. ಜುಲೈ 17 ರ ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (India and England) ನಡುವಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಪಂತ್ ಅವರ ಅದ್ಭುತ ಶತಕದ ನೆರವಿನಿಂದ ಭಾರತ 5 ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಪಂತ್ ಕೇವಲ 113 ಎಸೆತಗಳಲ್ಲಿ 125 ರನ್ ಗಳಿಸಿ ಅಜೇಯರಾಗಿ ಮರಳಿದರು. ಈ ಮೂಲಕ ಎರಡು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ ಈ ಇಂಗ್ಲೆಂಡ್ ಪ್ರವಾಸವನ್ನು ಅಂತ್ಯಗೊಳಿಸಿದರು. ಇದಕ್ಕೂ ಮುನ್ನ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ್ದರು.

4 ವರ್ಷಗಳ ನಂತರ ಮೊದಲ ಏಕದಿನ ಶತಕ

2018 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ರಿಷಬ್ ಪಂತ್, ಅದೇ ಸರಣಿಯಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದರು. ಅದೇ ವರ್ಷದಲ್ಲಿ, ಪಂತ್ ODI ಸ್ವರೂಪದಲ್ಲಿ (ವೆಸ್ಟ್ ಇಂಡೀಸ್ ವಿರುದ್ಧ) ಚೊಚ್ಚಲ ಪಂದ್ಯ ಆಡಿದ್ದರು. ಕಡಿಮೆ ಮಾದರಿಯಲ್ಲಿ ತಮ್ಮ ಸ್ಫೋಟಕ ಆಟದಿಂದ ಭಾರತ ತಂಡದಲ್ಲಿ ಸ್ಥಾನ ಪಡೆದ ಪಂತ್, ಈ ಮಾದರಿಯಲ್ಲಿ ಟೀಂ ಇಂಡಿಯಾ ಪರ ಪ್ರಬಲ ಪ್ರದರ್ಶನ ನೀಡಲು ಹೆಚ್ಚಿನ ಸಮಯವನ್ನು ತೆಗೆದುಕೊಂಡರು. ಆದರೆ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಂತಿಮವಾಗಿ ಏಕದಿನ ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿದರು.

ಬ್ರಿಸ್ಬೇನ್ ಟೆಸ್ಟ್ ನೆನಪಾಯಿತು

ಈ ವರ್ಷದ ಜನವರಿಯಲ್ಲಿ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ಪಂತ್ 86 ರನ್ಗಳ ಇನ್ನಿಂಗ್ಸ್ ಆಡಿದ ನಂತರ ಔಟಾದರು. ಈ ಮೂಲಕ ಶತಕ ಗಳಿಸುವ ಉತ್ತಮ ಅವಕಾಶವನ್ನು ಅವರು ಕಳೆದುಕೊಂಡಿದ್ದರು. ಆದರೆ 6 ತಿಂಗಳ ನಂತರ ಮ್ಯಾಂಚೆಸ್ಟರ್‌ನಲ್ಲಿ ಆ ತಪ್ಪನ್ನು ಇಲ್ಲಿ ಮಾಡಲಿಲ್ಲ. ಪಂತ್ ಸಂಕಷ್ಟದಲ್ಲಿರುವ ಟೀಂ ಇಂಡಿಯಾವನ್ನು ನಿಭಾಯಿಸಿದ್ದಲ್ಲದೆ, ಜನವರಿ 2021 ರ ಬ್ರಿಸ್ಬೇನ್ ಟೆಸ್ಟ್ ಶೈಲಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಂತರ ಅವರು 89 ರನ್ ಗಳಿಸಿ ಅಜೇಯರಾಗಿ ಮರಳಿದರು.

ಈ ವೇಳೆ ಶತಕ ಬಾರಿಸಿ ಮರಳಿದರು. ಅವರ ಪಂದ್ಯ-ವಿಜೇತ ಅಭಿಯಾನದ ಮಧ್ಯದಲ್ಲಿ, ಪಂತ್ ತಮ್ಮ ODI ವೃತ್ತಿಜೀವನದ ಮೊದಲ ಶತಕವನ್ನು ಸಹ ಪೂರ್ಣಗೊಳಿಸಿದರು. ಅವರು 106 ಎಸೆತಗಳಲ್ಲಿ ಒಂದು ಬೌಂಡರಿಯೊಂದಿಗೆ ಮೊದಲ ಬಾರಿಗೆ ಏಕದಿನದಲ್ಲಿ 100 ರ ಗಡಿ ದಾಟಿದರು.

ಇಂಗ್ಲೆಂಡ್ ವಿರುದ್ಧ ಪಂತ್ ಸಿಡಿಲಬ್ಬರ

ಇಂಗ್ಲೆಂಡ್ ವಿರುದ್ಧ ವೃತ್ತಿಜೀವನದ ಆರಂಭದಿಂದಲೂ ಅಮೋಘ ಆಟ ಪ್ರದರ್ಶಿಸುತ್ತಿದ್ದ ಪಂತ್, ಮತ್ತೆ ಅದೇ ತಂಡವನ್ನು ತಮ್ಮ ಗುರಿಯಾಗಿಸಿಕೊಂಡರು. ಕೇವಲ 4 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಮತ್ತು ODI ಪಂದ್ಯಗಳನ್ನು ಸೇರಿದಂತೆ ತಮ್ಮ ನಾಲ್ಕನೇ ಶತಕವನ್ನು ಗಳಿಸಿದರು. ಈ ಶತಕಕ್ಕೂ ಮುನ್ನ, ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಪಂತ್ ಭಾರತದಲ್ಲಿಯೇ ಸತತ ಎರಡು ಏಕದಿನ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ ಈ ಸರಣಿಯಲ್ಲಿ ಪಂತ್ ಅದನ್ನು ಶತಕವನ್ನಾಗಿ ಪರಿವರ್ತಿಸಿದರು. ಈ ರೀತಿಯಾಗಿ, ಅವರು ಈಗ ಎಲ್ಲಾ ಸ್ವರೂಪಗಳಲ್ಲಿ ಇಂಗ್ಲೆಂಡ್ ವಿರುದ್ಧ 4 ಶತಕ ಮತ್ತು 6 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

Published On - 10:58 pm, Sun, 17 July 22

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ