Rishabh Pant: 42ನೇ ಓವರ್​ನಲ್ಲಿ ರಿಷಭ್ ಪಂತ್ ಆಡಿದ ಆಟಕ್ಕೆ ಬೆರಗಾದ ಕ್ರಿಕೆಟ್ ಜಗತ್ತು: ವಿಡಿಯೋ ನೋಡಿ

IND vs ENG 3rd ODI: ಟಾಪ್ ಆರ್ಡರ್​ ಬ್ಯಾಟರ್​ಗಳನ್ನು ಕೆಡವಿ ಸಂಭ್ರಮದಲ್ಲಿದ್ದ ಇಂಗ್ಲೆಂಡ್​ಗೆ ಪಂತ್ ಪಂಚ್ ಮೇಲೆ ಪಂಚ್ ಕೊಟ್ಟರು. ಇವರಿಗೆ ಪಾಂಡ್ಯ ಕೂಡ ಭರ್ಜರಿ ಸಾಥ್ ನೀಡಿದರು. ಇಬ್ಬರೂ ಸ್ಫೋಟಕ ಆಟವಾಡಿದರು.

Rishabh Pant: 42ನೇ ಓವರ್​ನಲ್ಲಿ ರಿಷಭ್ ಪಂತ್ ಆಡಿದ ಆಟಕ್ಕೆ ಬೆರಗಾದ ಕ್ರಿಕೆಟ್ ಜಗತ್ತು: ವಿಡಿಯೋ ನೋಡಿ
Rishabh Pant IND vs ENG 3rd ODI
Follow us
TV9 Web
| Updated By: Vinay Bhat

Updated on:Jul 18, 2022 | 8:11 AM

ಮ್ಯಾಂಚೆಸ್ಟರ್​​ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ ಮೂರನೇ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ (India vs England) 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ರಿಷಭ್ ಪಂತ್  ಅವರ ಆಕರ್ಷಕ ಶತಕ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಜಯದ ನಗೆ ಬೀರಿದ್ದು ಮಾತ್ರವಲ್ಲದೆ 2-1 ಅಂತರದಿಂದ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಟಿ20 ಬಳಿಕ ಇದೀಗ ಏಕದಿನ ಸರಣಿಯನ್ನೂ ಕಳೆದುಕೊಂಡ ಆಂಗ್ಲರಿಗೆ ತವರಿನಲ್ಲೇ ಭಾರೀ ಮುಖಭಂಗವಾಗಿದೆ. 113 ಎಸೆತಗಳನ್ನು ಎದುರಿಸಿದ ಪಂತ್ (Rishabh Pant) ಬರೋಬ್ಬರಿ 16 ಫೋರ್ ಹಾಗೂ 2 ಸಿಕ್ಸರ್​​ ಬಾರಿಸಿ ಅಜೇಯ 125 ರನ್ ಚಚ್ಚಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಇದು ಪಂತ್ ಅವರ ಚೊಚ್ಚಲ ಶತಕ. ಇವರ ಸ್ಫೋಟಕ ಆಟಕ್ಕೆ ಇಂಗ್ಲೆಂಡ್ ಬೌಲರ್​​ಗಳು ತಲೆಕೆಡೆಸಿಕೊಂಡಿದ್ದು ಸುಳ್ಳಲ್ಲ.

ಹೌದು, ಇಂಗ್ಲೆಂಡ್ ನೀಡಿದ್ದ 260 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡಿತು. ಶಿಖರ್ ಧವನ್ ಕೇವಲ 1 ರನ್​ಗೆ​ ಔಟಾದರೆ, ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡು. ಸೂರ್ಯಕುಮಾರ್ ಯಾದವ್ (16) ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಿಲಿಲ್ಲ. ಹೀಗೆ ಭಾರತ 72 ರನ್ ಆಗುವ ಹೊತ್ತಿಗೆ 4 ವಿಕಟ್ ಕಳೆದುಕೊಂಡಿತು. ಈ ಸಂದರ್ಭ ಇಂಗ್ಲೆಂಡ್ ಮೇಲುಗೈ ಸಾಧಿಸಿತು ಎಂದೇ ನಂಬಲಾಗಿತ್ತು. ಆದರೆ, ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ರಿಷಭ್ ಪಂತ್ ಹಾಗೂ ಇವರಿಗೆ ಸಾಥ್ ನೀಡಿದ್ದು ಹಾರ್ದಿಕ್ ಪಾಂಡ್ಯ.

ಇದನ್ನೂ ಓದಿ
Image
IND Vs ENG 3rd ODI Match Report: ಪಂತ್ ಶತಕದಬ್ಬರಕ್ಕೆ ಇಂಗ್ಲೆಂಡ್ ಧೂಳಿಪಟ! ಭಾರತಕ್ಕೆ ಸರಣಿ
Image
ನಾನು ವಜ್ರದ ಚಮಚದೊಂದಿಗೆ ಹುಟ್ಟಿದವ, ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಜಾನೆ ತುಂಬಿತುಳುಕುವಂತೆ ಮಾಡಿದ್ದೆ -ಸಂಪೂರ್ಣ ಜಾತಕ ತೆರೆದಿಟ್ಟ ಲಲಿತ್ ಮೋದಿ!
Image
ನಕಲಿ ದಾಖಲೆ ಬಳಸಿ ತಂಡ ಬದಲಿಸಲು ಹೋಗಿ ಸಿಕ್ಕಿಬಿದ್ದ ಭಾರತೀಯ ಆಟಗಾರ!
Image
KL Rahul: ಭರ್ಜರಿ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್

ಟಾಪ್ ಆರ್ಡರ್​ ಬ್ಯಾಟರ್​ಗಳನ್ನು ಕೆಡವಿ ಸಂಭ್ರಮದಲ್ಲಿದ್ದ ಇಂಗ್ಲೆಂಡ್​ಗೆ ಪಂತ್ ಪಂಚ್ ಮೇಲೆ ಪಂಚ್ ಕೊಟ್ಟರು. ಇವರಿಗೆ ಪಾಂಡ್ಯ ಕೂಡ ಭರ್ಜರಿ ಸಾಥ್ ನೀಡಿದರು. ಇಬ್ಬರೂ ಸ್ಫೋಟಕ ಆಟವಾಡಿದರು. 106 ಎಸೆತಗಳಲ್ಲಿ ಶತಕ ಪೂರೈಸಿದ ರಿಷಭ್ ಪಂತ್ ನಂತರವೂ ತಮ್ಮ ಶೈಲಿಯ ಆಟ ಮುಂದುವರೆಸಿ ಜಯ ತಂದುಕೊಟ್ಟರು. ಪಂತ್-ಹಾರ್ದಿಕ್ ಕಡೆಯಿಂದ ಮೂಡಿಬಂದಿದ್ದು ಬರೋಬ್ಬರಿ 133 ರನ್​ಗಳ ಜೊತೆಯಾಟ. ತಂಡದ ಗೆಲುವು ಖಚಿತವಾಗುತ್ತಿದ್ದಂತೆ ಹಾರ್ದಿಕ್ ನಿರ್ಗಮಿಸಿದರು. 55 ಎಸೆತಗಳಲ್ಲಿ 10 ಫೋರ್ ಬಾರಿಸಿ 71 ರನ್​ಗೆ ಔಟಾದರು.

ಪಾಂಡ್ಯ ಪೆವಿಲಿಯನ್ ಸೇರಿಕೊಂಡ ಬಳಿಕ ಪಂತ್ ಆಟ ಮತ್ತಷ್ಟು ಬಿರುಸಾಯಿತು. ಅದು ಎಷ್ಟರ ಮಟ್ಟಿಗೆ ಎಂದರೆ 42ನೇ ಓವರ್​ನ ಡೇವಿಡ್ ವಿಲ್ಲೆ ಓವರ್​ನಲ್ಲಿ 5 ಫೋರ್ ಸಿಡಿಸಿ ಮಿಂಚಿದರು. ಈ ಓವರ್​ನಲ್ಲಿ ಭಾರತ 21 ರನ್ ಕಲೆಹಾಕಿತು. ವಿಶ್ವ ಶ್ರೇಷ್ಠ ಬೌಲರ್​ಗಳ ಓವರ್​ನಲ್ಲಿ ಪಂತ್ ಆಡಿದ ಆಟ ಕಂಡು ಇಂಗ್ಲೆಂಡ್ ದಂಗಾಗಿದ್ದು ಸುಳ್ಳಲ್ಲ. ಭಾರತ 42.1 ಓವರ್​ನಲ್ಲೇ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಗೆಲುವು ಸಾಧಿಸಿತು. ರಿಷಭ್ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ ಹಾರ್ದಿಕ್ ಸರಣಿಶ್ರೇಷ್ಠ ತಮ್ಮದಾಗಿಸಿದರು.

259 ರನ್ ಗಳಿಸಿದ್ದ ಇಂಗ್ಲೆಂಡ್:

ಇದಕ್ಕೂ ಮುನ್ನ ಇಂಗ್ಲೆಂಡ್ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿಯಿತು. ನಾಯಕ ಜೋಸ್ ಬಟ್ಲರ್ ಅರ್ಧಶತಕ ಗಳಿಸಿ 60 ರನ್ ಬಾರಿಸಿದ್ದು ಬಿಟ್ಟರೆ ಜೇಸನ್ ರಾಯ್ 41 ರನ್ ಗಳಿಸಿದ್ದೇ ಹೆಚ್ಚು. ಉಳಿದ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. ಬೆನ್ ಸ್ಟೋಕ್ಸ್ 27, ಮೊಯಿನ್ ಅಲಿ 34, ಲಿಯಾಮ್ ಲಿವಿಂಗ್‌ಸ್ಟೋನ್ 27, ಡೇವಿಡ್ ವಿಲ್ಲಿಕ್ 18, ಕ್ರೇಗ್ ಓವರ್‌ಟಾಂಕ್ 32 ರನ್ ಕೊಡುಗೆ ಸಲ್ಲಿಸಿದ ಪರಿಣಾಮ ಇಂಗ್ಲೆಂಡ್ 259 ರನ್ ಗಳಿಸಿತು. ಭಾರತ ಪರ ಹಾರ್ದಿಕ್ 4 ವಿಕೆಟ್ ಕಿತ್ತರೆ ಚಹಲ್ 3 ವಿಕೆಟ್ ಪಡೆದರು.

Published On - 8:09 am, Mon, 18 July 22