IND Vs ENG 3rd ODI Match Report: ಪಂತ್ ಶತಕದಬ್ಬರಕ್ಕೆ ಇಂಗ್ಲೆಂಡ್ ಧೂಳಿಪಟ! ಭಾರತಕ್ಕೆ ಸರಣಿ

IND Vs ENG 3rd ODI Match Report: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ. ಈ ಹಿಂದೆ ಭಾರತ ತಂಡ ಟಿ20 ಸರಣಿಯನ್ನು ತಮ್ಮ ಹೆಸರಿನಲ್ಲಿ ಗೆದ್ದುಕೊಂಡಿತ್ತು.

IND Vs ENG 3rd ODI Match Report: ಪಂತ್ ಶತಕದಬ್ಬರಕ್ಕೆ ಇಂಗ್ಲೆಂಡ್ ಧೂಳಿಪಟ! ಭಾರತಕ್ಕೆ ಸರಣಿ
Follow us
| Updated By: ಪೃಥ್ವಿಶಂಕರ

Updated on:Jul 18, 2022 | 12:11 AM

ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತ (India Vs England) ಮೂರು ಪಂದ್ಯಗಳ ಸರಣಿಯನ್ನು ವಶಪಡಿಸಿಕೊಂಡಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಭಾರತ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾದ ಇಬ್ಬರು ಸ್ಟಾರ್‌ಗಳು ಮಾತ್ರ ಈ ಗೆಲುವಿನ ಹೀರೋಗಳಾದರು. ರಿಷಬ್ ಪಂತ್ (Rishabh Pant) ಅವರ ಮೊದಲ ಏಕದಿನ ಶತಕ ಮತ್ತು ಹಾರ್ದಿಕ್ ಪಾಂಡ್ಯ (Hardik Pandya) ಅವರ ಬ್ಲಾಕ್ ಬಸ್ಟರ್ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಭಾರತವು ಇಂಗ್ಲೆಂಡ್ ನೀಡಿದ್ದ 260 ರನ್​ಗಳ ಗುರಿಯನ್ನು 43 ಓವರ್​ಗಳಲ್ಲಿ ಬೆನ್ನಟ್ಟಿತು. ಈ ಮೂಲಕ ಭಾರತ 2014ರ ನಂತರ ಇಂಗ್ಲೆಂಡ್‌ನಲ್ಲಿ ಮೊದಲ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

ಕಾಕತಾಳೀಯ

ಮೂರು ವರ್ಷಗಳ ಹಿಂದೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಆಗ ಭಾರತ ತಂಡವು ಸುಮಾರು 240 ರನ್‌ಗಳ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ, ಆದರೆ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಎಸ್ ಧೋನಿ ಯುದ್ಧದ ಅರ್ಧಶತಕ ಗಳಿಸಿದರು. ಈ ಬಾರಿಯೂ ಅದೇ ಪರಿಸ್ಥಿತಿ ಇತ್ತು. ಮತ್ತೊಮ್ಮೆ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತವು ಸರಾಸರಿ 260 ಸ್ಕೋರ್ ಗಳಿಸಬೇಕಾಗಿತ್ತು ಮತ್ತು ಮತ್ತೊಮ್ಮೆ ಟೀಮ್ ಇಂಡಿಯಾದ ಅಗ್ರ ಕ್ರಮಾಂಕವು ದಯನೀಯವಾಗಿ ವಿಫಲವಾಯಿತು. ಆದರೆ ಈ ಬಾರಿ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಪಂತ್ ಭರ್ಜರಿ ಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಅಗ್ರ ಕ್ರಮಾಂಕ ವಿಫಲ

ಆರಂಭಿಕ ಜೋಡಿ ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸತತ ಎರಡನೇ ಪಂದ್ಯದಲ್ಲಿ ವಿಫಲಗೊಂಡರು ಮತ್ತು ಇಬ್ಬರೂ 21 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಇವರಿಬ್ಬರ ನಂತರ ರೀಸ್ ಟೋಪ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದರು, ಈ ಬಾರಿಯೂ ಅವರ ಬ್ಯಾಟ್ ರನ್ ಗಳಿಸಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಸಹ ಸತತ ಎರಡನೇ ಬಾರಿ ವಿಫಲರಾದರು. 72 ರನ್‌ಗಳಾಗುವಷ್ಟರಲ್ಲಿ ಭಾರತದ 4 ವಿಕೆಟ್‌ಗಳು ಪತನಗೊಂಡವು. ಮೂರು ವರ್ಷಗಳ ಹಿಂದೆ ಇದೇ ಪರಿಸ್ಥಿತಿಯಲ್ಲಿ ಪಂತ್ ಮತ್ತು ಹಾರ್ದಿಕ್ ನಡುವೆ 47 ರನ್ ಜೊತೆಯಾಟವಿತ್ತು. ಮೂರು ವರ್ಷಗಳ ನಂತರ, ಇಬ್ಬರೂ ಹೆಚ್ಚು ಪ್ರಬುದ್ಧತೆಯೊಂದಿಗೆ 133 ರನ್‌ಗಳ ಹೊಂದಾಣಿಕೆಯ ಪಾಲುದಾರಿಕೆಯನ್ನು ಮಾಡಿದರು.

ಅದೃಷ್ಟ ಬದಲಿಸಿದ ಹಾರ್ದಿಕ್-ರಿಷಭ್

ಈ ಪಂದ್ಯದಲ್ಲಿ ಅದಾಗಲೇ ಬೌಲಿಂಗ್​ನಲ್ಲಿ 4 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದ ಹಾರ್ದಿಕ್ ಅಮೋಘ ಅರ್ಧಶತಕ ದಾಖಲಿಸಿದರು. ಪಂತ್ ಜತೆಗೂಡಿ ತಂಡವನ್ನು 200ರ ಗಡಿ ದಾಟಿಸುವ ಮೂಲಕ ತಂಡಕ್ಕೆ ಗೆಲುವು ಬಹುತೇಕ ಖಚಿತವಾಗುವಂತೆ ಮಾಡಿದರು. ಬೆನ್ ಸ್ಟೋಕ್ಸ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಹಾರ್ದಿಕ್ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಆದರೆ, ಪಂತ್‌ ಆಟಕ್ಕೆ ಇದು ಭಂಗ ತರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಪಂತ್, ಕೊನೆಗೂ ಈ ಮಾದರಿಯಲ್ಲಿ ಶತಕದ ನಿರೀಕ್ಷೆಯನ್ನು ಅಂತ್ಯಗೊಳಿಸಿ 106 ಎಸೆತಗಳಲ್ಲಿ ಶತಕ ಪೂರೈಸಿದರು. ಗೆಲುವು ಗೋಚರಿಸಿದ ತಕ್ಷಣ, ಪಂತ್ ಆಕ್ರಮಣಕಾರಿ ವಿಧಾನವನ್ನು ಅನುಸರಿಸಿ ಡೇವಿಡ್ ವಿಲ್ಲಿ ಓವರ್​ನಲ್ಲಿ ಸತತ 5 ಬೌಂಡರಿಗಳನ್ನು ಬಾರಿಸಿದರು. ಅಂತಿಮವಾಗಿ 43ನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿಗಳಿಗೆ ಕಳುಹಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಆರಂಭದಲ್ಲಿ ಸಿರಾಜ್ ದಾಳಿ

ಇದಕ್ಕೂ ಮುನ್ನ ಟೀಂ ಇಂಡಿಯಾ ತನ್ನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಇಲ್ಲದೆ ಕಣಕ್ಕಿಳಿದಿತ್ತು, ಆದರೆ ಅವರ ಸ್ಥಾನಕ್ಕೆ ಬಂದ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮಾಡಿದರು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಸಿರಾಜ್, ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್‌ಗೆ ಖಾತೆ ತೆರೆಯಲು ಅವಕಾಶ ನೀಡದೆ ಪೆವಿಲಿಯನ್ಗೆ ಕಳುಹಿಸಿದರು. ನಂತರ ಜೇಸನ್ ರಾಯ್ ಮತ್ತು ಬೆನ್ ಸ್ಟೋಕ್ಸ್ ಪ್ರಬಲ 54 ರನ್ ಜೊತೆಯಾಟ ನಡೆಸಿ ರನ್‌ಗಳ ವೇಗವನ್ನು ಹೆಚ್ಚಿಸಿದರು, ಆದರೆ ಹಾರ್ದಿಕ್ ಪಾಂಡ್ಯ ಚೆಂಡಿನೊಂದಿಗೆ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿ ಮೂರು ಓವರ್‌ಗಳ ಒಳಗೆ ಶಾರ್ಟ್ ಬಾಲ್‌ಗಳಲ್ಲಿ ಎರಡು ವಿಕೆಟ್ ಪಡೆದರು.

ಹಾರ್ದಿಕ್ ಯಶಸ್ವಿ ಯೋಜನೆ

ಇಲ್ಲಿಂದ ನಾಯಕ ಜೋಸ್ ಬಟ್ಲರ್ ಮತ್ತು ಮೊಯಿನ್ ಅಲಿ ಕೂಡ ಉತ್ತಮ ಜೊತೆಯಾಟ ನಡೆಸಿ ತಂಡವನ್ನು 150ರ ಸಮೀಪಕ್ಕೆ ಕೊಂಡೊಯ್ದರು. ಇವರಿಬ್ಬರೂ ಒಟ್ಟಾಗಿ ಭಾರತದ ಮೇಲೆ ಒತ್ತಡ ಹೇರಲು ಆರಂಭಿಸಿದರು ಮತ್ತು ಯಶಸ್ವಿಯಾದರು, ಆದರೆ ಜಡೇಜಾ ಮೊಯಿನ್ ಅವರನ್ನು ಔಟ್ ಮಾಡಿದರು. ನಂತರ ಬಟ್ಲರ್ ಮತ್ತು ಲಿವಿಂಗ್‌ಸ್ಟನ್ ನಡುವೆ 49 ರನ್‌ಗಳ ಜೊತೆಯಾಟವಿತ್ತು, ಅದನ್ನು ಹಾರ್ದಿಕ್ ಪಾಂಡ್ಯ ಮುರಿದರು. ನಂತರ ಶಾರ್ಟ್ ಬಾಲ್​ಗಳಲ್ಲಿ ಒಂದೇ ಓವರ್​ನಲ್ಲಿ ಇಬ್ಬರಿಗೂ ಪಾಂಡ್ಯ ಪೆವಿಲಿಯನ್ ದಾರಿ ತೋರಿಸಿದರು. ಕೊನೆಯಲ್ಲಿ, ಕ್ರೇಗ್ ಓವರ್ಟನ್ ಮತ್ತು ಡೇವಿಡ್ ವಿಲ್ಲಿ 48 ರನ್‌ಗಳ ಪ್ರಮುಖ ಜೊತೆಯಾಟ ಆಡಿದರು. ಯುಜ್ವೇಂದ್ರ ಚಹಾಲ್ ಕೊನೆಯ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್​ ತಂಡ ಆಲೌಟ್ ಆಗುವಂತೆ ಮಾಡಿದರು.

Published On - 10:52 pm, Sun, 17 July 22

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ