ನಾನು ವಜ್ರದ ಚಮಚದೊಂದಿಗೆ ಹುಟ್ಟಿದವ, ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಜಾನೆ ತುಂಬಿತುಳುಕುವಂತೆ ಮಾಡಿದ್ದೆ -ಸಂಪೂರ್ಣ ಜಾತಕ ತೆರೆದಿಟ್ಟ ಲಲಿತ್ ಮೋದಿ!

Lalit Modi: ನಾನು ಚಿನ್ನದ ಚಮಚ ಅಲ್ಲ; ವಜ್ರದ ಚಮಚದೊಂದಿಗೆ ಹುಟ್ಟಿದವ ತಿಳಿಯಿರಿ. ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಜಾನೆ ತುಂಬಿತುಳುಕುವಂತೆ ಮಾಡಿದ್ದೆ. ಅದೇ ನಾನು ಜಾಯಿನ್ ಆದಾಗ ಬಿಸಿಸಿಐ ಬಳಿ ಕೇವಲ 40 ಕೋಟಿ ರೂಪಾಯಿಯಷ್ಟೇ ಇದ್ದಿದ್ದು ಎಂದು ಸಂಪೂರ್ಣ ಜಾತಕ ತೆರೆದಿಟ್ಟಿದ್ದಾರೆ ಐಪಿಎಲ್ ಜನಕ ಲಲಿತ್ ಮೋದಿ!

ನಾನು ವಜ್ರದ ಚಮಚದೊಂದಿಗೆ ಹುಟ್ಟಿದವ, ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಜಾನೆ ತುಂಬಿತುಳುಕುವಂತೆ ಮಾಡಿದ್ದೆ -ಸಂಪೂರ್ಣ ಜಾತಕ ತೆರೆದಿಟ್ಟ ಲಲಿತ್ ಮೋದಿ!
ನಾನು ವಜ್ರದ ಚಮಚದೊಂದಿಗೆ ಹುಟ್ಟಿದವ, ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಜಾನೆ ತುಂಬಿತುಳುಕುವಂತೆ ಮಾಡಿದ್ದೆ -ಲಲಿತ್ ಮೋದಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 17, 2022 | 7:02 PM

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜನಕ, IPL ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಅವರು 2008 ರಲ್ಲಿ ತಾನು ಐಪಿಎಲ್ ಪ್ರಾರಂಭಿಸುಬವಂತಹ ಸಾಹಸದ ಸಹಾಯ ಮಾಡುವುದರೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ –BCCI) ತನ್ನ ಸಂಪತ್ತನ್ನು ಬಹುವಾಗಿ ಬೆಳೆಸಲು ಸಹಾಯ ಮಾಡಿದ್ದೇನೆ ಎಂದು ಎದೆಯುಬ್ಬಿಸಿಕೊಂಡು ಹೇಳಿಕೊಂಡಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನ ಪ್ರಾರಂಭದ ಹಿಂದಿನ ಪ್ರಧಾನ ವ್ಯಕ್ತಿಗಳಲ್ಲಿ ಲಲಿತ್ ಮೋದಿ ಒಬ್ಬರಾಗಿದ್ದರು. 2008 ರಿಂದ 2010 ರವರೆಗೆ IPL ಅಧ್ಯಕ್ಷರಾಗಿ ಅವರು ಗುರುತರ ಸೇವೆ ಸಲ್ಲಿಸಿದ್ದಾರೆ.

ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರೊಂದಿಗಿನ ಸಂಬಂಧವನ್ನು ಜಗತ್ತಿನ ಎದುರು ತೆರೆದಿಟ್ಟ ನಂತರ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದ್ದು, ಚರ್ಚೆಗೆ ಗ್ರಾಸವಾಗಿದ್ದಾರೆ. ಅವುಗಳಲ್ಲಿ ಕೆಲವು ಪೋಸ್ಟ್​ ಗಳ ಬಗ್ಗೆ ಲಲಿತ್ ಮೋದಿ ಪ್ರತಿಕ್ರಿಯಿಸಿದ್ದಾರೆ. ಬಿಡ್‌ಗಳನ್ನು ರಿಗ್ ಮಾಡಿರುವುದು, ಆಡಳಿತ ಮಂಡಳಿಯ ಅನುಮೋದನೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡಿರುವುದು, ಅಕ್ರಮ ಹಣ ವರ್ಗಾವಣೆ ಮತ್ತು ಬೆಟ್ಟಿಂಗ್ ಸೇರಿದಂತೆ ಒಟ್ಟು 8 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ 2013 ರಲ್ಲಿ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾದ ಮಾಜಿ ಐಪಿಎಲ್ ಅಧ್ಯಕ್ಷರನ್ನು ಹಲವರು ಟ್ರೋಲ್ ಮಾಡಿದ್ದಾರೆ.

ಲಲಿತ್ ಮೋದಿ ತಾಜಾ ಆಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಾನು ‘ವಜ್ರದ ಚಮಚ’ದೊಂದಿಗೆ ಜನಿಸಿದವ. ನಾನು ‘ಯಾರಿಂದಲೂ ಲಂಚ ತೆಗೆದುಕೊಂಡಿಲ್ಲ’ ಮತ್ತು ಭಾರತ ಸರ್ಕಾರದಿಂದ ಯಾವುದೇ ಪ್ರಯೋಜನಗಳನ್ನು ಪಡೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಲಲಿತ್ ಮೋದಿ ಅವರು ಬಿಸಿಸಿಐ ಜೊತೆಗಿನ ತಮ್ಮ ವ್ಯವಹಾರ, ಒಡನಾಟದ ಬಗ್ಗೆ ಯಾವುದೇ ಅಳುಕಿಲ್ಲದೆ ಹೇಳಿಕೊಂಡಿದ್ದಾರೆ. ನಾನು ನನ್ನ ಜನ್ಮದಿನವಾದ ನವೆಂಬರ್ 29 2005 ರಂದು ಬಿಸಿಸಿಐ ಸಂಸ್ಥೆಗೆ ಸೇರಿದಾಗ ಭಾರತೀಯ ಕ್ರಿಕೆಟ್ ಮಂಡಳಿಯ ಬ್ಯಾಂಕ್‌ ಖಾತೆಯಲ್ಲಿ 40 ಕೋಟಿ ರೂ (ಸುಮಾರು 5 ಮಿಲಿಯನ್ ಅಮೆರಿಕ ಡಾಲರ್) ಇತ್ತು ಮತ್ತು ನನ್ನನ್ನು ನಿಷೇಧಿಸಿದಾಗ ಅದರ ಖಜಾನೆಯಲ್ಲಿ 47,680 ಕೋಟಿ ರೂ (ಸುಮಾರು USD 5.9 ಶತಕೋಟಿ) ಹಣವಿತ್ತು ಎಂದೂ ಲೆಕ್ಕಚಾರದ ಮಾತನ್ನಾಡಿದ್ದಾರೆ.

ಉದ್ಯಮಿ ಮತ್ತು ಮಾಜಿ IPL ಅಧ್ಯಕ್ಷ ಲಲಿತ್ ಮೋದಿ 2005 ರಿಂದ 2009 ರವರೆಗೆ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ ​​(RCA) ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದರು. 2014 ರಲ್ಲಿ ಮತ್ತೆ ಒಂದು ವರ್ಷ ಮರುನೇಮಕವಾಗಿದ್ದರು. ಲಲಿತ್ ಮೋದಿ ತಮ್ಮ ಕುಟುಂಬ ಮಾಲೀಕತ್ವ ವ್ಯಾಪಾರ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಎಂದು wionews ವರದಿ ಮಾಡಿದೆ.

ಲಲಿತ್ ಮೋದಿ ಇನ್‌ಸ್ಟಾಗ್ರಾಮ್‌ ಸುದೀರ್ಘ ಪೋಸ್ಟ್​ ಇಲ್ಲಿದೆ:

Published On - 6:53 pm, Sun, 17 July 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್