Rohit Sharma: ಪಂದ್ಯ ಮುಗಿದ ಬಳಿಕ ಹೆಮ್ಮೆಯಿಂದ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ

IND vs ENG 3rd ODI: ಮ್ಯಾಂಚೆಸ್ಟರ್​​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 5 ವಿಕಟ್​ಗಳಿಂದ ಗೆಲ್ಲುವ ಮೂಲಕ ಭಾರತ ಸರಣಿ ತನ್ನದಾಗಿಸಿತು. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ (Rohit Sharma) ಮಾತನಾಡಿದ್ದು ಏನು ಹೇಳಿದರು ಕೇಳಿ

Rohit Sharma: ಪಂದ್ಯ ಮುಗಿದ ಬಳಿಕ ಹೆಮ್ಮೆಯಿಂದ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ
Rohit Sharma post-match presentation
Follow us
TV9 Web
| Updated By: Vinay Bhat

Updated on: Jul 18, 2022 | 9:06 AM

ಸಾಕಷ್ಟು ನಿರೀಕ್ಷೆಗಳೊಂದಿಗೆ ಆಂಗ್ಲರ ನಾಡಿಗೆ ಕಾಲಿಟ್ಟಿದ್ದ ಭಾರತ ಕ್ರಿಕೆಟ್ ತಂಡ (Indian Cricket Team) ನಿರೀಕ್ಷೆ ಹುಸಿಗೊಳಿಸದೆ ಒಂದಲ್ಲ ಎರಡು ಟ್ರೋಫಿಯೊಂದಿಗೆ ತವರಿಗೆ ಹಿಂತಿರುಗುತ್ತಿದೆ. ಇಂಗ್ಲೆಂಡ್ (England) ವಿರುದ್ಧದ ಏಕದಿನ ಸರಣಿಯನ್ನು ಹಾಗೂ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ ವಿಶೇಷ ಸಾಧನೆ ಮಾಡಿ ಮೆರೆದಿದೆ. ಮ್ಯಾಂಚೆಸ್ಟರ್​​ನಲ್ಲಿ ನಡೆದ ಅಂತಿಮ ನಿರ್ಣಾಯಕ ಏಕದಿನ ಪಂದ್ಯದಲ್ಲಿ 5 ವಿಕಟ್​ಗಳಿಂದ ಗೆಲ್ಲುವ ಮೂಲಕ ರೋಹಿತ್ ಪಡೆ ಏಕದಿನ ಸರಣಿ ತನ್ನದಾಗಿಸಿತು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 259 ರನ್​ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ರಿಷಭ್ ಪಂತ್ ಅವರ ಆಕರ್ಷಕ ಶತಕ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧಶತಕದ ನೆರವಿನಿಂದ 42.1 ಓವರ್​​ನಲ್ಲೇ ಗುರಿ ಮುಟ್ಟಿ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಮಾತನಾಡಿದ್ದು ಏನು ಹೇಳಿದರು ಕೇಳಿ.

“ಇಲ್ಲಿ ಬಂದು ಒಂದು ಗುಂಪಾಗಿ ತಂಡವನ್ನು ಕಟ್ಟಿ ವೈಟ್ ಬಾಲ್ ಕ್ರಿಕೆಟ್​ನಲ್ಲಿ ಸಾಧನೆ ಮಾಡಿದ್ದು ತುಂಬಾ ಸಂತಸವಾಗಿದೆ. ನನಗೆ ಈಗಲೂ ನೆನಪಿದೆ ಕಳೆದ ಬಾರಿ ಕೂಡ ಇಲ್ಲಿ ಪಂದ್ಯವನ್ನು ಆಡಿ ಗೆದ್ದಿದ್ದೆವು. ಈ ಜಾಗಕ್ಕೆ ಬಂದು ಆಡಿ ಗೆಲುವು ಸಾಧಿಸುವುದು ಸುಲಭದ ಕೆಲಸವಂತೂ ಅಲ್ಲ. ಈ ಪಿಚ್ ತುಂಬಾನೆ ಚೆನ್ನಾಗಿತ್ತು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೆ ನಂತರ ರನ್ ಕಲೆಹಾಕುವುದು ಸುಲಭವಲ್ಲ ಎಂಬುದು ನಮಗೆ ತಿಳಿದಿತ್ತು. ಆದರೆ, ಪಂತ್-ಹಾರ್ದಿಕ್ ಅಮೋಘ ಪ್ರದರ್ಶನ ನೀಡಿದರು. ಈ ಹಿಂದೆ ಇವರು ಮಿಡಲ್ ಓವರ್​ನಲ್ಲಿ ಹೆಚ್ಚು ಸಮಯ ಬ್ಯಾಟಿಂಗ್ ಮಾಡಿರಲಿಲ್ಲ. ಇವತ್ತು ಇವರಿಬ್ಬರು ಆಡಿದ ರೀತಿಯನ್ನು ನಾವೆಲ್ಲ ಕಂಡಿದ್ದೇವೆ.”

“ಪಂತ್ ಹಾಗೂ ಹಾರ್ದಿಕ್ ಯಾವುದೇ ಸಮಯದಲ್ಲಿ ಭಯ ಪಡಲಿಲ್ಲ. ಅವರು ಹೊಡೆದ ಹೊಡೆತಗಳು ಅದ್ಭುತವಾಗಿತ್ತು. ಇನ್ನು ಚಹಲ್ ನಮ್ಮ ತಂಡದ ಪ್ರಮುಖ ಅಸ್ತ್ರ. ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಅವರಿಗೆ ಸಾಕಷ್ಟು ಬಾರಿ ಬೌಲಿಂಗ್ ಮಾಡಿ ಅಭ್ಯಾಸವಿದೆ. ವಿಶ್ವಕಪ್ ಬಳಿಕ ಅವರು ನೀಡಿದ ಪ್ರದರ್ಶನ ನೋಡಿದರೆ ಖುಷಿ ಆಗುತ್ತದೆ. ಹಾರ್ದಿಕ್ ಬ್ಯಾಟಿಂಗ್ ಕೂಡ ಅತ್ಯುತ್ತಮವಾಗಿತ್ತು. ಒಂದು​ ಕಡೆಯ ಬೌಂಡರಿ ತುಂಬಾ ದೂರವಿದೆ. ಬೌನ್ಸರ್ ಬಾಲ್ ಅನ್ನು ಚೆನ್ನಾಗಿ ಅರಿತು ರನ್ ಗಳಿಸುತ್ತಿದ್ದಾರೆ.”

ಇದನ್ನೂ ಓದಿ
Image
Rishabh Pant: 42ನೇ ಓವರ್​ನಲ್ಲಿ ರಿಷಭ್ ಪಂತ್ ಆಡಿದ ಆಟಕ್ಕೆ ಬೆರಗಾದ ಕ್ರಿಕೆಟ್ ಜಗತ್ತು: ವಿಡಿಯೋ ನೋಡಿ
Image
Rishabh Pant Century: ಮ್ಯಾಂಚೆಸ್ಟರ್‌ನಲ್ಲಿ ರಿಷಬ್ ಘರ್ಜನೆ; ಏಕದಿನದಲ್ಲಿ ಚೊಚ್ಚಲ ಶತಕ ಸಿಡಿಸಿದ ಪಂತ್..!
Image
ನಾನು ವಜ್ರದ ಚಮಚದೊಂದಿಗೆ ಹುಟ್ಟಿದವ, ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಜಾನೆ ತುಂಬಿತುಳುಕುವಂತೆ ಮಾಡಿದ್ದೆ -ಸಂಪೂರ್ಣ ಜಾತಕ ತೆರೆದಿಟ್ಟ ಲಲಿತ್ ಮೋದಿ!
Image
ನಕಲಿ ದಾಖಲೆ ಬಳಸಿ ತಂಡ ಬದಲಿಸಲು ಹೋಗಿ ಸಿಕ್ಕಿಬಿದ್ದ ಭಾರತೀಯ ಆಟಗಾರ!

“ನಮ್ಮ ತಂಡದ ಕ್ವಾಲಿಟಿ ಏನು ಎಂಬುದು ನನಗೆ ತಿಳಿದಿದೆ. ನಮ್ಮ ಬೆಂಚ್ ಸ್ಟ್ರೆಂತ್ ತುಂಬಾ ಬಲಿಷ್ಠವಾಗಿದೆ. ಅವರು ಪಂದ್ಯವನ್ನಾಡಲು ಕಾದು ಕುಳಿತಿದಿದ್ದಾರೆ. ಇಂಜುರಿಯಯ ಸಂದರ್ಭ ಈರೀತಿಯ ಆಟಗಾರರು ನಮಗೆ ಅಗತ್ಯವಿರುತ್ತದೆ. ಅವರನ್ನು ತಯಾರು ಮಾಡಬೇಕು. ನಮ್ಮ ಬೆಂಚ್ ಸ್ಟ್ರೆಂತ್ ಅನ್ನು ಇನ್ನಷ್ಟು ಬಲಿಷ್ಠವಾಗಿಸಬೇಕು. ವೆಸ್ಟ್​ ಇಂಡೀಸ್ ಸರಣಿಗೆ ಕೂಡ ಅವರು ಆಯ್ಕೆ ಆಗಿದ್ದಾರೆ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ರಿಷಭ್ ಪಂತ್ ಮಾತನಾಡಿ, “ನಾನು ಕೊನೆಯ ವರೆಗೂ ಈ ಶತಕವನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ನಾನು ಬ್ಯಾಟಿಂಗ್ ಮಾಡುವಾಗ ಒಂದು ಸಮಯಕ್ಕೆ ಆ ಎಸೆತದ ಬಗ್ಗೆ ಮಾತ್ರ ಯೋಚಿಸುತ್ತೇನೆ. ನಮ್ಮ ತಂಡ ಒತ್ತಡದಲ್ಲಿದ್ದಾಗ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಏನಾದರು ಮಾಡಲು ಬಯಸುತ್ತೇನೆ. ನನಗೆ ಇಂಗ್ಲೆಂಡ್​ನಲ್ಲಿ ಆಡುವುದು ಎಂದರೆ ತುಂಬಾ ಇಷ್ಟ. ಈರೀತಿಯ ಪಂದ್ಯವನ್ನ ಆಡಿದಾಗ ನಮಗೆ ಇನ್ನಷ್ಟು ಅನುಭವ ಬರುತ್ತದೆ,” ಎಂದು ಹೇಳಿದರು.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ