AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Road Safety World Series: ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಇಂಡಿಯಾ ಲೆಜೆಂಡ್ಸ್..!

Road Safety World Series: ಸಚಿನ್ ನಾಯಕತ್ವದ ಇಂಡಿಯಾ ಲೆಜೆಂಡ್ಸ್ ತಂಡ ಶೇನ್ ವಾಟ್ಸನ್ ನೇತೃತ್ವದ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

Road Safety World Series: ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಇಂಡಿಯಾ ಲೆಜೆಂಡ್ಸ್..!
India Legends
TV9 Web
| Edited By: |

Updated on:Sep 29, 2022 | 6:18 PM

Share

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ (Road Safety World Series) ಸೀಸನ್ 2 ರ ಇಂದಿನ ಸೆಮಿ ಫೈನಲ್ ಪಂದ್ಯದಲ್ಲಿ ಸಚಿನ್ ನಾಯಕತ್ವದ ಇಂಡಿಯಾ ಲೆಜೆಂಡ್ಸ್ ತಂಡ (India Legends) ಶೇನ್ ವಾಟ್ಸನ್ ನೇತೃತ್ವದ ಆಸ್ಟ್ರೇಲಿಯಾ ಲೆಜೆಂಡ್ಸ್ (australia legend) ತಂಡವನ್ನು 5 ವಿಕೆಟ್​ಗಳಿಂದ ಮಣಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಹಿಂದೆ ನಡೆದಿದ್ದ ಮೊದಲ ಸೀಸನ್​ ಅಲ್ಲೂ ಇಂಡಿಯಾ ಲೆಜೆಂಡ್ಸ್​ ತಂಡ ಚಾಂಪಿಯನ್​ ಪಟ್ಟಕ್ಕೇರಿತ್ತು. ಈಗ ಈ ಸೀಸನ್​ನಲ್ಲೂ ಫೈನಲ್ ಪ್ರವೇಶಿಸಿರುವ ಸಚಿನ್ ಪಡೆಗೆ ಮತ್ತೊಮ್ಮೆ ಚಾಂಪಿಯನ್ ಆಗುವ ಅವಕಾಶ ಸಿಕ್ಕಿದೆ.8 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಅಂತ್ಯವಾಗಿದ್ದು ಸೆಮಿಫೈನಲ್ ಹಂತಕ್ಕೆ ನಾಲ್ಕು ತಂಡಗಳು ಪ್ರವೇಶ ಪಡೆದುಕೊಂಡಿದ್ದವು. ಅದರಲ್ಲಿ ಇಂದು ಮೊದಲನೇ ಸೆಮಿಫೈನಲ್ ಪಂದ್ಯ ಇಂಡಿಯಾ ಲೆಜೆಂಡ್ಸ್ ಹಾಗೂ ಆಸ್ಟ್ರೇಲಿಯಾ ಲೆಜೆಂಡ್ಸ್ ನಡುವೆ ನಡೆದಿದ್ದು, 2ನೇ ಸೆಮಿಫೈನಲ್ ಪಂದ್ಯ ಶ್ರೀಲಂಕಾ ಲೆಜೆಂಡ್ಸ್ ಹಾಗೂ ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಗಳ ನಡುವೆ ನಡೆಯಲಿದೆ. ಈ ಎರಡು ತಂಡಗಳ ಕದನದಲ್ಲಿ ಗೆದ್ದ ತಂಡವು ಫೈನಲ್​ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಎದುರಿಸಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡಕ್ಕೆ ಆರಂಭಿಕರಿಬ್ಬರು ಉತ್ತಮ ಆರಂಭವನ್ನೇ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ವಾಟ್ಸನ್ ಹಾಗೂ ಡೂಲನ್ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ 30 ರನ್ ಗಳಿಸಿ ಆಡುತ್ತಿದ್ದ ವಾಟ್ಸನ್ ರಾಹುಲ್ ಶರ್ಮಾ ಎಸೆತದಲ್ಲಿ ರೈನಾಗೆ ಕ್ಯಾಚಿತ್ತು ಔಟಾದರು. ಆ ಬಳಿಕ 11ನೇ ಓವರ್​ನಲ್ಲಿ ಮತ್ತೊಬ್ಬ ಆರಂಭಿಕ ಡೂಲನ್ ಕೂಡ ವೈಯಕ್ತಿಕ 31 ರನ್​ಗಳಿಸಿದ್ದಾಗ ಯೂಸುಫ್ ಪಠಾಣ್​​ಗೆ ವಿಕೆಟ್ ಒಪ್ಪಿಸಿದರು.

ಮಾಟ್ಸನ್ ವಿಕೆಟ್ ಬಳಿಕ ಬ್ಯಾಟಿಂಗ್​ಗೆ ಇಳಿದ ಡಂಕ್ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 26 ಎಸತಗಳನ್ನು ಎದುರಿಸಿದ ಡಂಕ್ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಬರೋಬ್ಬರಿ 46 ರನ್ ಚಚ್ಚಿದರು. ಆದರೆ ಡೂಲನ್ ವಿಕೆಟ್ ಬಳಿಕ ಮೈದಾನಕ್ಕಿಳಿದಿದ್ದ ಫರ್ಗುಸನ್ ಕೇವಲ ಹತ್ತು ರನ್​ ಗಳಿಸಿ ಪಠಾಣ್​ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ವೈಟ್ ಅವರ 30 ರನ್ ನೆರವಿನಿಂದ ಅಂತಿಮವಾಗಿ ಆಸ್ಟ್ರೇಲಿಯಾ ಲೆಜೆಂಡ್ಸ್ ತಂಡ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು.

171 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಇಂಡಿಯಾ ಲೆಜೆಂಡ್ಸ್ ತಂಡಕ್ಕೆ 6ನೇ ಓವರ್​​ನಲ್ಲೇ ಆಘಾತ ಎದುರಾಯಿತು. 10 ರನ್ ಗಳಿಸಿ ಆಡುತ್ತಿದ್ದ ಸಚಿನ್ ತೆಂಡೂಲ್ಕರ್, ರಿಯರ್ಡನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಬಂದ ರೈನಾ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲದೆ 8ನೇ ಓವರ್​ನಲ್ಲಿ ತನ್ನ ವಿಕೆಟ್ ಒಪ್ಪಿಸಿದರು. ರೈನಾ ವಿಕೆಟ್ ಬಳಿಕ ಬ್ಯಾಟಿಂಗ್​ಗೆ ಇಳಿದ ಯುವರಾಜ್ ಸಿಂಗ್ ಕೂಡ 18 ರನ್​ ಗಳಿಸುವಷ್ಟರಲ್ಲಿ ಸುಸ್ತಾಗಿ 14ನೇ ಓವರ್​ನಲ್ಲಿ ವಾಟ್ಸನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಒಂದು ಕಡೆ ಸತತ ವಿಕೆಟ್ ಉರುಳುತ್ತಿದ್ದರು ದೃತಿಗೆಡದ ಆರಂಭಿಕ ಆಟಗಾರ ನಮನ್ ಓಜಾ ಮಾತ್ರ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಆರಂಭಿಕ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ಭಿನ್ನಿ ಈ ಪಂದ್ಯದಲ್ಲಿ ವಿಶೇಷವಾಗಿ ಏನನ್ನು ಮಾಡಲು ಸಾಧ್ಯಚವಾಗಲಿಲ್ಲ. ಕೇವಲ 2 ರನ್​ಗಳಿಗೆ ಭಿನ್ನಿ ಸುಸ್ತಾದರೆ, ಆ ಬಳಿಕ ಬಂದ ಯೂಸುಫ್ ಪಠಾಣ್ ಕೇವಲ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಈ ಎರಡು ಬ್ಯಾಕ್ ಟು ಬ್ಯಾಕ್ ವಿಕೆಟ್ ಬಳಿಕ ಸೋಲಿನ ಸುಳಿಗೆ ಸಿಲುಕಿದ ಭಾರತಕ್ಕೆ ಆಸರೆಯಾಗಿದ್ದು ಇರ್ಫಾನ್ ಪಠಾಣ್. ಕೇವಲ 12 ಎಸೆತಗಳನ್ನು ಎದುರಿಸಿದ ಇರ್ಫಾನ್ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 37 ರನ್ ಚಚ್ಚಿದರು. ಇರ್ಫಾನ್ ಆಟದ ಲಾಭ ಪಡೆದ ನಮನ್ ಓಜಾ ಕೂಡ ಅಬ್ಬರದ ಬ್ಯಾಟಿಂಗ್ ಮುಂದುವರೆಸಿ ಅಜೇಯ 90 ರನ್ ಗಳಿಸಿದರು. 62 ಎಸೆತಗಳನ್ನು ಎದುರಿಸಿದ ಓಜಾ 5 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಹ ಬಾರಿಸಿದರು. ಅಂತಿಮವಾಗಿ 20 ನೇ ಓವರ್​ನಲ್ಲಿ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಇರ್ಫಾನ್ ಪಠಾಣ್ ಇಂಡಿಯಾ ಲೆಜೆಂಡ್ಸ್ ತಂಡವನ್ನು ಫೈನಲ್​ಗೆ ಕೊಂಡೊಯ್ದರು.

Published On - 5:41 pm, Thu, 29 September 22