Rohit Sharma: ಹಿಟ್​ಮ್ಯಾನ್ ಈಸ್ ಬ್ಯಾಕ್​: ಇಂಗ್ಲೆಂಡ್​ಗೆ ಭಯ ಶುರು..!

| Updated By: ಝಾಹಿರ್ ಯೂಸುಫ್

Updated on: Jul 06, 2022 | 12:32 PM

India vs England: ವಿಶ್ವಕಪ್​ ಮೂಲಕ ವರ್ಲ್ಡ್​ಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ಆರು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ಸರಿಗಟ್ಟಿದರು.

Rohit Sharma: ಹಿಟ್​ಮ್ಯಾನ್ ಈಸ್ ಬ್ಯಾಕ್​: ಇಂಗ್ಲೆಂಡ್​ಗೆ ಭಯ ಶುರು..!
rohit sharma
Follow us on

ಇಂಗ್ಲೆಂಡ್​ ವಿರುದ್ದ 5ನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ (Team India) ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಜುಲೈ 7 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಹಿಟ್​ಮ್ಯಾನ್ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯವಾಡಿರಲಿಲ್ಲ. ಇದೀಗ ಐಸೊಲೇಷನ್​ನಿಂದ ರೋಹಿತ್ ಶರ್ಮಾ ಹೊರಬಂದಿದ್ದು, ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ನಾಯಕ ಅಭ್ಯಾಸ ಆರಂಭಿಸುತ್ತಿದ್ದಂತೆ ಅತ್ತ ಇಂಗ್ಲೆಂಡ್​ ಬೌಲರ್​ಗಳಿಗೆ ಚಿಂತೆ ಶುರುವಾಗಿದೆ. ಏಕೆಂದರೆ ಇಂಗ್ಲೆಂಡ್​ ಪಿಚ್​​ನಲ್ಲಿ ಹಿಟ್​ಮ್ಯಾನ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅದರಲ್ಲೂ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಆಂಗ್ಲರ ನಾಡಿನಲ್ಲಿ ಅಬ್ಬರಿಸಿದ ಇತಿಹಾಸವಿದೆ.

3 ವರ್ಷಗಳ ಹಿಂದೆ ಅಂದರೆ 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ವಿಶ್ವ ದಾಖಲೆಯನ್ನು ನಿರ್ಮಿಸಿ ಅಬ್ಬರಿಸಿದ್ದರು. ಜುಲೈ 6 ರಂದು ಶ್ರೀಲಂಕಾ ವಿರುದ್ಧ ಶತಕ ಬಾರಿಸುವ ಮೂಲಕ ಒಂದೇ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ (4 ಶತಕ) ಹೆಸರಿನಲ್ಲಿತ್ತು. ಆದರೆ ವಿದೇಶಿ ಪಿಚ್​ನಲ್ಲಿ 5 ಶತಕ ಸಿಡಿಸುವ ಮೂಲಕ ಹಿಟ್​ಮ್ಯಾನ್ ಆರ್ಭಟಿಸಿದ್ದರು.

ಅಷ್ಟೇ ಅಲ್ಲದೆ ಈ ವಿಶ್ವಕಪ್​ ಮೂಲಕ ವರ್ಲ್ಡ್​ಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ಆರು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ಸರಿಗಟ್ಟಿದರು. ಸಚಿನ್ 4 ವಿಶ್ವಕಪ್‌ಗಳಲ್ಲಿ 6 ಶತಕಗಳನ್ನು ಗಳಿಸಿದ್ದರೆ, ರೋಹಿತ್ ಎರಡನೇ ವಿಶ್ವಕಪ್‌ನಲ್ಲಿಯೇ ಈ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಅಂದರೆ ರೋಹಿತ್ ಶರ್ಮಾ 2015ರ ವಿಶ್ವಕಪ್‌ನಲ್ಲಿ ಒಂದು ಶತಕ ಸಿಡಿಸಿದ್ದಲ್ಲದೆ, 2019ರ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದ್ದರು.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಈ ಐದು ಶತಕಗಳು ಮೂಡಿಬಂದಿದ್ದು ಇಂಗ್ಲೆಂಡ್​ನ ಪಿಚ್​ಗಳಲ್ಲಿ ಎಂಬುದು ವಿಶೇಷ. 2019ರ ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 144 ಎಸೆತಗಳಲ್ಲಿ 122 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಹಿಟ್​ಮ್ಯಾನ್ ಬ್ಯಾಟ್​ನಿಂದ 13 ಬೌಂಡರಿ ಮತ್ತು 2 ಸಿಕ್ಸರ್‌ಗಳು ಮೂಡಿಬಂದಿತ್ತು. ಇನ್ನು ಪಾಕಿಸ್ತಾನದ ವಿರುದ್ಧ ಎರಡನೇ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ಶತಕ ಪೂರೈಸಿ ಮಿಂಚಿದ್ದರು. ಅಲ್ಲದೆ ಅಂತಿಮವಾಗಿ 113 ಎಸೆತಗಳಲ್ಲಿ 140 ರನ್ ಬಾರಿಸಿ ಅಬ್ಬರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಹಿಟ್​ಮ್ಯಾನ್​ 14 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇನ್ನು ಮೂರನೇ ಶತಕ ಬಾರಿಸಿದ್ದು ಇಂಗ್ಲೆಂಡ್ ವಿರುದ್ದ ಎಂಬುದು ವಿಶೇಷ. 109 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ 102 ರನ್ ಬಾರಿಸಿದ್ದರು. ಇದರ ನಂತರ ಬಾಂಗ್ಲಾದೇಶ ವಿರುದ್ಧ 92 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 104 ರನ್ ಗಳಿಸಿದ್ದರು. ಹಾಗೆಯೇ ಶ್ರೀಲಂಕಾ ವಿರುದ್ಧ 94 ಎಸೆತಗಳಲ್ಲಿ 103 ರನ್ ಗಳಿಸುವ ಮೂಲಕ ಐದನೇ ಶತಕ ಸಿಡಿಸಿದ್ದರು.

ಇದೀಗ ಹಿಟ್​ಮ್ಯಾನ್ ಶತಕಗಳನ್ನು ಸಿಡಿಸಿದ್ದ ಪಿಚ್​ಗಳಲ್ಲೇ ಟೀಮ್ ಇಂಡಿಯಾ ಟಿ20 ಮತ್ತು ಏಕದಿನ ಸರಣಿ  ಆಡಲಿದೆ. ಈ ಬಾರಿ ಟೀಮ್ ಇಂಡಿಯಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ ಮತ್ತೆ ಅಬ್ಬರಿಸಲು ಅಭ್ಯಾಸವನ್ನು ಆರಂಭಿಸಿದ್ದಾರೆ. ಅತ್ತ ಇಂಗ್ಲೆಂಡ್​ನಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅಂಕಿ ಅಂಶಗಳನ್ನು ನೋಡಿ ದಂಗಾಗಿರುವ ಇಂಗ್ಲೆಂಡ್ ಬೌಲರ್​ಗಳು ಹಿಟ್​ಮ್ಯಾನ್​ಗಾಗಿ ವಿಶೇಷ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಒಟ್ಟಿನಲ್ಲಿ ಟೆಸ್ಟ್​ನಲ್ಲಿ ಹೀನಾಯ ಸೋತು ಕಳೆದುಕೊಂಡ ಮಾನವನ್ನು ಸೀಮಿತ ಓವರ್​ಗಳ ಮೂಲಕ ಮರಳಿ ಪಡೆಯಲು ರೋಹಿತ್ ಶರ್ಮಾ ಅ್ಯಂಡ್ ಟೀಮ್ ಸಜ್ಜಾಗಿ ನಿಂತಿದೆ.