Virat Kohli: ಕೆಣಕಿದ ಕೊಹ್ಲಿಯನ್ನು ಟ್ರೋಲ್ ಮಾಡಿದ ಬಾರ್ಮಿ ಆರ್ಮಿ
India vs England: ಪಂದ್ಯ ಮುಗಿಯುತ್ತಿದ್ದಂತೆ ಇತ್ತ ಸೋಷಿಯಲ್ ಮೀಡಿಯಾದ ಅಭಿಮಾನಿಗಳ ಆರ್ಮಿಗಳ ನಡುವೆ ಟ್ವೀಟ್ ವಾರ್ ಏರ್ಪಟ್ಟಿದ್ದು, ಇದು ಮುಂಬರುವ ಸೀಮಿತ ಓವರ್ಗಳ ಸರಣಿಯವರೆಗೂ ಮುಂದುವರೆಯಲಿದೆ.
ಎಡ್ಜ್ಬಾಸ್ಟನ್ನಲ್ಲಿ ನಡೆದ ಭಾರತದ ವಿರುದ್ದದ 5ನೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು. ಟೀಮ್ ಇಂಡಿಯಾ ನೀಡಿದ 378 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಅಜೇಯ ಶತಕಗಳನ್ನು ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಇತ್ತ ಇಂಗ್ಲೆಂಡ್ ತಂಡವು ಗೆಲ್ಲುತ್ತಿದ್ದಂತೆ ಅತ್ತ ಆಂಗ್ಲ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅದರಲ್ಲೂ ಆಯಾ ಅಭಿಮಾನಿ ಗುಂಪುಗಳಾದ ಭಾರತ್ ಆರ್ಮಿ ಮತ್ತು ಬಾರ್ಮಿ ಆರ್ಮಿ ನಡುವಿನ ಟ್ವಿಟರ್ ವಾರ್ ಮುಂದುವರೆಯಿತು.
ಇಂಗ್ಲೆಂಡ್ ತಂಡದ ಗೆಲುವಿನ ಬಳಿಕ ಬಾರ್ಮಿ ಆರ್ಮಿ ತನ್ನ ಟ್ವಿಟರ್ ಖಾತೆಯ ಹೆಸರನ್ನು ಜಾನಿ ಬೈರ್‌ಸ್ಟೋವ್ ಬಾರ್ಮಿ ಆರ್ಮಿ ಎಂದು ಬದಲಿಸಿಕೊಂಡಿದ್ದು ವಿಶೇಷ. ಅಷ್ಟೇ ಅಲ್ಲದೆ ಈ ಬಾರಿ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ಏಕೆಂದರೆ ಈ ಪಂದ್ಯದಲ್ಲಿ ಕೊಹ್ಲಿ ಹಾಗೂ ಬೈರ್‌ಸ್ಟೋವ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಾಕ್ಸಮರದ ನಡುವೆ ಕೊಹ್ಲಿ ಬೈರ್ಸ್ಟೋವ್ಗೆ ಬಾಯಿ ಮುಚ್ಕೊಂಡು ಆಡುವಂತೆ ಸನ್ನೆ ಮಾಡಿದ್ದರು. ಆದರೆ ಎರಡೂ ಇನಿಂಗ್ಸ್ಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಬೈರ್‌ಸ್ಟೋವ್ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದರು.
ಇದೀಗ ವಿರಾಟ್ ಕೊಹ್ಲಿ ಹತಾಶೆಗೊಂಡಿರುವ ಚಿತ್ರವನ್ನು ಹಂಚಿಕೊಂಡಿರುವ ಬಾರ್ಮಿ ಆರ್ಮಿ ಫೋಟೋಗೆ ನಗುವಿನ ಶೀರ್ಷಿಕೆ ನೀಡಿ ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ಟ್ವೀಟ್‌ನಲ್ಲಿ, ಭಾರತ್ ಆರ್ಮಿ ಸದಸ್ಯರು “ಇಂಗ್ಲೆಂಡ್ ಅವರು ಹೋದಲ್ಲೆಲ್ಲಾ ಜರ್ಜರಿತರಾಗುತ್ತಾರೆ” ಎಂದು ಹಾಡುತ್ತಿರುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಬಾರ್ಮಿ ಆರ್ಮಿ “ಇಡೀ ಹಾಡನ್ನು ಹಾಡಿ ಸೋಲುವುದನ್ನು ಕಲ್ಪಿಸಿಕೊಳ್ಳಿ” ಎಂಬ ಶೀರ್ಷಿಕೆಯೊಂದಿಗೆ ವ್ಯಂಗ್ಯವಾಡಿದ್ದಾರೆ.
— Jonny Bairstow’s Barmy Army (@TheBarmyArmy) July 5, 2022
Imagine singing this the whole game and losing ????
? @thebharatarmy pic.twitter.com/c1FHl8ys7M
— Jonny Bairstow’s Barmy Army (@TheBarmyArmy) July 5, 2022
Bairstow has scored more runs in the last 25 days than Kohli has in the last 18 months.#ENGvIND pic.twitter.com/RJ6QWAJFxL
— Jonny Bairstow’s Barmy Army (@TheBarmyArmy) July 5, 2022
ಹಾಗೆಯೇ ಕಳೆದ 18 ತಿಂಗಳಲ್ಲಿ ಕೊಹ್ಲಿ ಗಳಿಸಿದ್ದಕ್ಕಿಂತ ಹೆಚ್ಚು ರನ್‌ಗಳನ್ನು ಬೈರ್‌ಸ್ಟೋವ್ ಕಳೆದ 25 ದಿನಗಳಲ್ಲಿ ಗಳಿಸಿದ್ದಾರೆ ಎಂದು ಕೂಡ ಟ್ರೋಲ್ ಮಾಡಿದ್ದಾರೆ. ಏತನ್ಮಧ್ಯೆ, ಭಾರತ್ ಆರ್ಮಿ ಕೂಡ ತಮ್ಮ ಪ್ರತಿಸ್ಪರ್ಧಿಗಳನ್ನು ಸ್ಲ್ಯಾಮ್ ಮಾಡಲು ಒಂದೆರಡು ಟ್ವೀಟ್‌ಗಳೊಂದಿಗೆ ತಿರುಗೇಟು ನೀಡಿದೆ. ಭಾರತದ ಅಭಿಮಾನಿಗಳ ಗುಂಪು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯ ಚಿತ್ರವನ್ನು ಹಂಚಿಕೊಂಡಿದ್ದು, ಈ ಪಾಯಿಂಟ್ ಟೇಬಲ್ನಲ್ಲಿ ಇಂಗ್ಲೆಂಡ್ 7ನೇ ಸ್ಥಾನದಲ್ಲಿದೆ ಎಂದು ಟ್ರೋಲ್ ಮಾಡಿದ್ದಾರೆ.
https://t.co/GPvpDlyb1I pic.twitter.com/PCSzoNWg0a
— The Bharat Army (@thebharatarmy) July 5, 2022
ಒಟ್ಟಿನಲ್ಲಿ ಪಂದ್ಯ ಮುಗಿಯುತ್ತಿದ್ದಂತೆ ಇತ್ತ ಸೋಷಿಯಲ್ ಮೀಡಿಯಾದ ಅಭಿಮಾನಿಗಳ ಆರ್ಮಿಗಳ ನಡುವೆ ಟ್ವೀಟ್ ವಾರ್ ಏರ್ಪಟ್ಟಿದ್ದು, ಇದು ಮುಂಬರುವ ಸೀಮಿತ ಓವರ್ಗಳ ಸರಣಿಯವರೆಗೂ ಮುಂದುವರೆಯಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಜುಲೈ 7 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳನ್ನು ಆಡಲಾಗುತ್ತದೆ.
Published On - 11:04 am, Wed, 6 July 22