Rohit Sharma: ಹಿಟ್ಮ್ಯಾನ್ ಈಸ್ ಬ್ಯಾಕ್: ಇಂಗ್ಲೆಂಡ್ಗೆ ಭಯ ಶುರು..!
India vs England: ವಿಶ್ವಕಪ್ ಮೂಲಕ ವರ್ಲ್ಡ್ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಆರು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ಸರಿಗಟ್ಟಿದರು.
ಇಂಗ್ಲೆಂಡ್ ವಿರುದ್ದ 5ನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ (Team India) ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಜುಲೈ 7 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕೊರೋನಾ ಸೋಂಕಿಗೆ ಒಳಗಾಗಿದ್ದ ಹಿಟ್ಮ್ಯಾನ್ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯವಾಡಿರಲಿಲ್ಲ. ಇದೀಗ ಐಸೊಲೇಷನ್ನಿಂದ ರೋಹಿತ್ ಶರ್ಮಾ ಹೊರಬಂದಿದ್ದು, ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಇತ್ತ ಟೀಮ್ ಇಂಡಿಯಾ ನಾಯಕ ಅಭ್ಯಾಸ ಆರಂಭಿಸುತ್ತಿದ್ದಂತೆ ಅತ್ತ ಇಂಗ್ಲೆಂಡ್ ಬೌಲರ್ಗಳಿಗೆ ಚಿಂತೆ ಶುರುವಾಗಿದೆ. ಏಕೆಂದರೆ ಇಂಗ್ಲೆಂಡ್ ಪಿಚ್ನಲ್ಲಿ ಹಿಟ್ಮ್ಯಾನ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಅದರಲ್ಲೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಆಂಗ್ಲರ ನಾಡಿನಲ್ಲಿ ಅಬ್ಬರಿಸಿದ ಇತಿಹಾಸವಿದೆ.
3 ವರ್ಷಗಳ ಹಿಂದೆ ಅಂದರೆ 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ವಿಶ್ವ ದಾಖಲೆಯನ್ನು ನಿರ್ಮಿಸಿ ಅಬ್ಬರಿಸಿದ್ದರು. ಜುಲೈ 6 ರಂದು ಶ್ರೀಲಂಕಾ ವಿರುದ್ಧ ಶತಕ ಬಾರಿಸುವ ಮೂಲಕ ಒಂದೇ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್‌ಮನ್ ಕುಮಾರ್ ಸಂಗಕ್ಕಾರ (4 ಶತಕ) ಹೆಸರಿನಲ್ಲಿತ್ತು. ಆದರೆ ವಿದೇಶಿ ಪಿಚ್ನಲ್ಲಿ 5 ಶತಕ ಸಿಡಿಸುವ ಮೂಲಕ ಹಿಟ್ಮ್ಯಾನ್ ಆರ್ಭಟಿಸಿದ್ದರು.
ಅಷ್ಟೇ ಅಲ್ಲದೆ ಈ ವಿಶ್ವಕಪ್ ಮೂಲಕ ವರ್ಲ್ಡ್ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಆರು ಶತಕಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೂಡ ರೋಹಿತ್ ಶರ್ಮಾ ಸರಿಗಟ್ಟಿದರು. ಸಚಿನ್ 4 ವಿಶ್ವಕಪ್‌ಗಳಲ್ಲಿ 6 ಶತಕಗಳನ್ನು ಗಳಿಸಿದ್ದರೆ, ರೋಹಿತ್ ಎರಡನೇ ವಿಶ್ವಕಪ್‌ನಲ್ಲಿಯೇ ಈ ವಿಶ್ವದಾಖಲೆಯನ್ನು ಸರಿಗಟ್ಟಿದ್ದರು. ಅಂದರೆ ರೋಹಿತ್ ಶರ್ಮಾ 2015ರ ವಿಶ್ವಕಪ್‌ನಲ್ಲಿ ಒಂದು ಶತಕ ಸಿಡಿಸಿದ್ದಲ್ಲದೆ, 2019ರ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದ್ದರು.
ಈ ಐದು ಶತಕಗಳು ಮೂಡಿಬಂದಿದ್ದು ಇಂಗ್ಲೆಂಡ್ನ ಪಿಚ್ಗಳಲ್ಲಿ ಎಂಬುದು ವಿಶೇಷ. 2019ರ ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ 144 ಎಸೆತಗಳಲ್ಲಿ 122 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಹಿಟ್ಮ್ಯಾನ್ ಬ್ಯಾಟ್ನಿಂದ 13 ಬೌಂಡರಿ ಮತ್ತು 2 ಸಿಕ್ಸರ್‌ಗಳು ಮೂಡಿಬಂದಿತ್ತು. ಇನ್ನು ಪಾಕಿಸ್ತಾನದ ವಿರುದ್ಧ ಎರಡನೇ ಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ಶತಕ ಪೂರೈಸಿ ಮಿಂಚಿದ್ದರು. ಅಲ್ಲದೆ ಅಂತಿಮವಾಗಿ 113 ಎಸೆತಗಳಲ್ಲಿ 140 ರನ್ ಬಾರಿಸಿ ಅಬ್ಬರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಹಿಟ್ಮ್ಯಾನ್ 14 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಇನ್ನು ಮೂರನೇ ಶತಕ ಬಾರಿಸಿದ್ದು ಇಂಗ್ಲೆಂಡ್ ವಿರುದ್ದ ಎಂಬುದು ವಿಶೇಷ. 109 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ 102 ರನ್ ಬಾರಿಸಿದ್ದರು. ಇದರ ನಂತರ ಬಾಂಗ್ಲಾದೇಶ ವಿರುದ್ಧ 92 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 104 ರನ್ ಗಳಿಸಿದ್ದರು. ಹಾಗೆಯೇ ಶ್ರೀಲಂಕಾ ವಿರುದ್ಧ 94 ಎಸೆತಗಳಲ್ಲಿ 103 ರನ್ ಗಳಿಸುವ ಮೂಲಕ ಐದನೇ ಶತಕ ಸಿಡಿಸಿದ್ದರು.
ಇದೀಗ ಹಿಟ್ಮ್ಯಾನ್ ಶತಕಗಳನ್ನು ಸಿಡಿಸಿದ್ದ ಪಿಚ್ಗಳಲ್ಲೇ ಟೀಮ್ ಇಂಡಿಯಾ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಈ ಬಾರಿ ಟೀಮ್ ಇಂಡಿಯಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ ಮತ್ತೆ ಅಬ್ಬರಿಸಲು ಅಭ್ಯಾಸವನ್ನು ಆರಂಭಿಸಿದ್ದಾರೆ. ಅತ್ತ ಇಂಗ್ಲೆಂಡ್‌ನಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅಂಕಿ ಅಂಶಗಳನ್ನು ನೋಡಿ ದಂಗಾಗಿರುವ ಇಂಗ್ಲೆಂಡ್ ಬೌಲರ್ಗಳು ಹಿಟ್ಮ್ಯಾನ್ಗಾಗಿ ವಿಶೇಷ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಒಟ್ಟಿನಲ್ಲಿ ಟೆಸ್ಟ್ನಲ್ಲಿ ಹೀನಾಯ ಸೋತು ಕಳೆದುಕೊಂಡ ಮಾನವನ್ನು ಸೀಮಿತ ಓವರ್ಗಳ ಮೂಲಕ ಮರಳಿ ಪಡೆಯಲು ರೋಹಿತ್ ಶರ್ಮಾ ಅ್ಯಂಡ್ ಟೀಮ್ ಸಜ್ಜಾಗಿ ನಿಂತಿದೆ.