ಟೀಮ್ ಇಂಡಿಯಾದ (Team India) ಸಾರ್ವಕಾಲಿಕ ಅತ್ಯಂತ ಯಶಸ್ವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ (Rohit Sharma), ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ 2014ರ ನವೆಂಬರ್ 13ರಂದು ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ವಿಶ್ವ ದಾಖಲೆಗೆ ಇಂದು (ನ.13, ಬುಧವಾರ, 2019) ಏಳು ವರ್ಷಗಳು ಪೈರೈಸಿದೆ. ಇದಕ್ಕೂ ಮುನ್ನ 2013 ರಲ್ಲಿ ಹಿಟ್‌ಮ್ಯಾನ್ (Hitman) ಆಸ್ಟ್ರೇಲಿಯಾ ವಿರುದ್ದ ಮೊದಲ ದ್ವಿಶತಕ ಸಿಡಿಸಿದ್ದರು. ಈ ಮೂಲಕ ಸಚಿನ್ ತೆಂಡುಲ್ಕರ್ (Sachin Tendulkar) ಹಾಗೂ ವಿರೇಂದ್ರ ಸೆಹ್ವಾಗ್ ಬಳಿಕ ಈ ಸಾಧನೆ ಮಾಡಿದ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮರು ವರ್ಷವೇ ರೋಹಿತ್ ಶ್ರೀಲಂಕಾ ವಿರುದ್ದ ವಿಶ್ವದಾಖಲೆಯ ದ್ವಿಶತಕ (Rohit Sharma Double century) ಸಿಡಿಸಿ ದಾಖಲೆ ಬರೆದರು.
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬೌಲರ್‌ಗಳು ಮೂಕವಿಸ್ಮಿತರಾಗಿದ್ದರು. 4 ರನ್ ಗಳಿಸಿದ್ದಾಗ ತಿಸಾರ ಪೆರೆರಾ ಕ್ಯಾಚ್ ಬಿಟ್ಟು ನೀಡಿದ ಜೀವದಾನವನ್ನು ರೋಹಿತ್ ಪರಿಪೂರ್ಣವಾಗಿ ಬಳಸಿಕೊಂಡಿದ್ದರು. ರೋಹಿತ್ 264 ರನ್ ಸಿಡಿಸಿ, ಏಕದಿನದ ವೈಯುಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು.
ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿವುದು ಕನಸಿನ ಮಾತು ಎಂದಿತ್ತು. ಆದರೆ, ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಈ ಕನಸನ್ನು ನನಸಾಗಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಆದರೆ, ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು ರೋಹಿತ್ ಶರ್ಮಾ. ಏಕದಿನ ಕ್ರಿಕೆಟ್‌ನಲ್ಲಿ ಒಂದಲ್ಲ ಎರಡಲ್ಲಾ.. ಒಟ್ಟು ಮೂರು ದ್ವಿಶತಕಗಳನ್ನು ಸಿಡಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಅವರ ಹೆಸರಲ್ಲಿದೆ.
2⃣6⃣4⃣ Runs
1⃣7⃣3⃣ Balls
3⃣3⃣ Fours
9⃣ Sixes#OnThisDay in 2014, @ImRo45 set the stage on fire ? ? & registered the highest individual score in the ODIs. ? ? #TeamIndiaLet’s revisit that sensational knock ? ?
— BCCI (@BCCI) November 13, 2021
ಲಂಕಾ ಬೌಲರ್‌ಗಳನ್ನು ಮನಸೋಯಿಚ್ಛೆ ದಂಡಿಸಿದ ಹಿಟ್‌ಮ್ಯಾನ್, ಎದುರಿಸಿದ 173 ಎಸೆತಗಳಲ್ಲಿ 33 ಫೋರ್ ಮತ್ತು 9 ಅದ್ಭುತ ಸಿಕ್ಸರ್‌ಗಳನ್ನು ಸಿಡಿಸಿದ್ದರು. ರೋಹಿತ್ ಅವರ ದ್ವಿಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 5 ವಿಕೆಟ್‌ಗೆ 404 ರನ್‌ಗಳ ಬೃಹತ್ ಮೊತ್ತ ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 251ಕ್ಕೆ ಆಲ್‌ಔಟ್ ಆಗುವ ಮೂಲಕ 153 ರನ್‌ಗಳ ಹೀನಾಯ ಸೋಲುಂಡಿತ್ತು.
Khel Ratna Award: ನೀರಜ್ ಚೋಪ್ರಾ ಸೇರಿ 12 ಮಂದಿ ಸಾಧಕರಿಗೆ ಇಂದು ಖೇಲ್ ರತ್ನ ಪ್ರಶಸ್ತಿ ಪ್ರದಾನ
(Rohit Sharma Double century On this day Hit man record 264 lights up Eden Gardens sets new benchmark)