Rohit Sharma: ಭಾರತ ತಂಡ ಫೈನಲ್​ಗೆ: ಕಣ್ಣೀರಿಟ್ಟ ರೋಹಿತ್ ಶರ್ಮಾ, ವಿಡಿಯೋ ವೀಕ್ಷಿಸಿ

T20 World Cup 2024: ಟಿ20 ವಿಶ್ವಕಪ್​ನ ಫೈನಲ್ ಪಂದ್ಯವು ಶನಿವಾರ (ಜೂ.29) ನಡೆಯಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಜರುಗಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ವಿಶ್ವ ಚಾಂಪಿಯನ್ ಪಟ್ಟಕ್ಕೇರಲಿದೆ. ಹೀಗಾಗಿ ಈ ಬಾರಿ ಯಾರು ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದೇ ಕುತೂಹಲ.

Rohit Sharma: ಭಾರತ ತಂಡ ಫೈನಲ್​ಗೆ: ಕಣ್ಣೀರಿಟ್ಟ ರೋಹಿತ್ ಶರ್ಮಾ, ವಿಡಿಯೋ ವೀಕ್ಷಿಸಿ
Rohit Sharma
Follow us
|

Updated on: Jun 28, 2024 | 8:32 AM

T20 World Cup 2024: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಭಾರತ ತಂಡ ಟಿ20 ವಿಶ್ವಕಪ್​ ಫೈನಲ್​ಗೆ ಲಗ್ಗೆಯಿಟ್ಟಿದೆ. ಗಯಾನಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್​ಗಳಿಂದ ಸೋಲಿಸಿ ಟೀಮ್ ಇಂಡಿಯಾ 10 ವರ್ಷಗಳ ಬಳಿಕ ಮತ್ತೆ ಫೈನಲ್​ಗೇರಿದೆ. ದಶಕದ ಬಳಿಕ ಭಾರತ ತಂಡ ಫೈನಲ್​ಗೆ ಪ್ರವೇಶಿಸುತ್ತಿದ್ದಂತೆ ಅತ್ತ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾವುಕಾರದರು.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 39 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 57 ರನ್ ಬಾರಿಸಿದರು. ಇನ್ನು ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 47 ರನ್ ಸಿಡಿಸಿದರು. ಹಾಗೆಯೇ ಹಾರ್ದಿಕ್ ಪಾಂಡ್ಯ 23 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

172 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಭಾರತೀಯರ ಸ್ಪಿನ್ ದಾಳಿಗೆ ಕಂಗಾಲಾದರು. ಒಂದೆಡೆ ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿದರೆ, ಮತ್ತೊಂದೆಡೆ ಕುಲ್ದೀಪ್ ಯಾದವ್ 3 ವಿಕೆಟ್ ಉರುಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡವು 16.4 ಓವರ್​ಗಳಲ್ಲಿ 103 ರನ್​ಗಳಿಸಿ ಆಲೌಟ್ ಆಯಿತು.

ಕಣ್ಣೀರಿಟ್ಟ ರೋಹಿತ್ ಶರ್ಮಾ:

68 ರನ್​ಗಳ ಭರ್ಜರಿ ಜಯದೊಂದಿಗೆ ಫೈನಲ್​ಗೆ ಪ್ರವೇಶಿಸಿದ ಟೀಮ್ ಇಂಡಿಯಾ ಆಟಗಾರರು ಖುಷಿ ಖುಷಿಯಾಗಿ ಡ್ರೆಸ್ಸಿಂಗ್ ರೂಮ್​ನತ್ತ ಮುಖ ಮಾಡಿದ್ದರು. ಆದರೆ ಅದಾಗಲೇ ಪೆವಿಲಿಯನ್​ಗೆ ತೆರಳಿದ್ದ ರೋಹಿತ್ ಶರ್ಮಾ ಭಾವುಕರಾಗಿ ಅಲ್ಲೇ ಡ್ರೆಸ್ಸಿಂಗ್ ರೂಮ್ ಗ್ಯಾಲರಿಯಲ್ಲಿ ಕೂತಿದ್ದರು.

ಅಲ್ಲದೆ ಟೀಮ್ ಇಂಡಿಯಾ ಆಟಗಾರರು ಗೆದ್ದ ಖುಷಿಯಲ್ಲಿ ಆಗಮಿಸುತ್ತಿದ್ದಂತೆ ಅತ್ತ ರೋಹಿತ್ ಶರ್ಮಾ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡು ಬಂತು. ಇದೀಗ ಟೀಮ್ ಇಂಡಿಯಾ ನಾಯಕ ಕಣ್ಣೀರು ಹಾಕುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೋಹಿತ್ ಶರ್ಮಾ ಭಾವುಕರಾಗಿ ಕಣ್ಣೀರಿಟ್ಟ ವಿಡಿಯೋ:

ಫೈನಲ್ ಪಂದ್ಯ ಯಾವಾಗ?

ಮೊದಲ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಗೆದ್ದಿರುವ ಸೌತ್ ಆಫ್ರಿಕಾ ಮತ್ತು ಎರಡನೇ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿರುವ ಭಾರತ ತಂಡಗಳು ಜೂನ್ 29 ರಂದು ಫೈನಲ್ ಪಂದ್ಯವಾಡಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ತಂಡ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

ತಾಜಾ ಸುದ್ದಿ