T20 World Cup 2024: ಭಾರತ vs ಸೌತ್ ಆಫ್ರಿಕಾ ನಡುವೆ ಫೈನಲ್ ಫೈಟ್

India vs South Africa Final: ಟಿ20 ಕ್ರಿಕೆಟ್​ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ 14 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಸೌತ್ ಆಫ್ರಿಕಾ ತಂಡ 11 ಬಾರಿ ಗೆಲುವು ಸಾಧಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಉಭಯ ತಂಡಗಳು ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ.

T20 World Cup 2024: ಭಾರತ vs ಸೌತ್ ಆಫ್ರಿಕಾ ನಡುವೆ ಫೈನಲ್ ಫೈಟ್
IND vs SA
Follow us
|

Updated on:Jun 28, 2024 | 7:26 AM

T20 World Cup 2024: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ನಲ್ಲಿ ಅಫ್ಘಾನಿಸ್ತಾನ್ ತಂಡದ ವಿರುದ್ದ ಅಮೋಘ ಗೆಲುವು ಸಾಧಿಸಿ ಸೌತ್ ಆಫ್ರಿಕಾ ತಂಡ ಫೈನಲ್​ಗೆ ಪ್ರವೇಶಿಸಿದರೆ, ಇದೀಗ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಅಂತಿಮ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಅದರಂತೆ ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ.

ವಿಶೇಷ ಎಂದರೆ ಉಭಯ ತಂಡಗಳು ಈ ಬಾರಿಯ ವಿಶ್ವಕಪ್​ನಲ್ಲಿ ಒಂದೇ ಒಂದು ಸೋಲು ಕಂಡಿಲ್ಲ. ಇದೀಗ ಎರಡೂ ತಂಡಗಳು ಗೆಲುವಿನ ನಾಗಾಲೋಟದೊಂದಿಗೆ ಫೈನಲ್​ಗೆ ಎಂಟ್ರಿ ಕೊಟ್ಟಿದ್ದು, ಇಲ್ಲಿ ಅಂತಿಮ ಪಂದ್ಯದಲ್ಲಿ ಯಾರು ಗೆಲುತ್ತಾರೆ ಎಂಬುದೇ ಕುತೂಹಲ.

ಅತ್ತ ಸೌತ್ ಆಫ್ರಿಕಾ ತಂಡವು ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ದ್ವಿತೀಯ ಸುತ್ತಿನಲ್ಲಿ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಸೆಮಿಫೈನಲ್​ನಲ್ಲಿ ಗೆಲ್ಲುವ ಮೂಲಕ ಒಟ್ಟು 8 ಮ್ಯಾಚ್​ಗಳಲ್ಲಿ ವಿಜಯ ಸಾಧಿಸಿದೆ.

ಇತ್ತ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ 3 ಜಯ ಸಾಧಿಸಿದರೆ ( ಮಳೆಯ ಕಾರಣ 1 ಪಂದ್ಯ ರದ್ದಾಗಿದೆ), ದ್ವಿತೀಯ ಸುತ್ತಿನಲ್ಲಿ 3 ಗೆಲುವು ದಾಖಲಿಸಿದೆ. ಇದೀಗ ಸೆಮಿಫೈನಲ್​ನಲ್ಲೂ ಗೆದ್ದು ಬೀಗುವ ಮೂಲಕ ಫೈನಲ್​ಗೆ ಪ್ರವೇಶಿಸಿದೆ. ಈ ಮೂಲಕ ಸತತ 7 ಗೆಲುವುಗಳೊಂದಿಗೆ ಟೀಮ್ ಇಂಡಿಯಾ 8 ಜಯ ಸಾಧಿಸಿರುವ ಸೌತ್ ಆಫ್ರಿಕಾ ವಿರುದ್ಧ ಸೆಣಸಲು ಎಂಟ್ರಿ ಕೊಟ್ಟಿದೆ.

ಇಲ್ಲಿ ಉಭಯ ತಂಡಗಳು ಸೋಲಿಲ್ಲದ ಸರದಾರರಾಗಿ ಫೈನಲ್​ಗೆ ಪ್ರವೇಶಿಸಿರುವ ಕಾರಣ, ಎರಡೂ ತಂಡಗಳು ಗೆಲುವಿನ ಲಯದಲ್ಲಿರುವುದು ಸ್ಪಷ್ಟ. ಅದರಲ್ಲೂ ಗೆಲುವಿನ ನಾಗಾಲೋಟದ ಮೂಲಕ ತಮ್ಮ ಬಲಿಷ್ಠತೆಯನ್ನು ತೆರೆದಿಟ್ಟಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಫೈನಲ್ ಪಂದ್ಯ ಯಾವಾಗ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.

ಉಭಯ ತಂಡಗಳು:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ

ಸೌತ್ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಗೆರಾಲ್ಡ್ ಕೋಯಟ್ಝಿ, ಜಾರ್ನ್ ಫಾರ್ಚುಯಿನ್, ರಯಾನ್ ರಿಕೆಲ್ಟನ್.

Published On - 7:22 am, Fri, 28 June 24

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ