Rohit Sharma Fan: ಪಂದ್ಯದ ಮಧ್ಯೆ ಪ್ರೇಕ್ಷಕ ಗ್ಯಾಲರಿಯಿಂದ ರೋಹಿತ್ ಶರ್ಮಾ ಬಳಿ ಓಡಿ ಬಂದ ಅಭಿಮಾನಿ: ಮುಂದೇನಾಯ್ತು?
India vs New Zealand T20: ರಾಂಚಿಯಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯ ವೀಕ್ಷಿಸಲು ಸ್ಟೇಡಿಯಂ ಹೌಸ್ ಫುಲ್ ಆಗಿತ್ತು. ಹೀಗಿರುವಾಗ ಭಾರತ ಫೀಲ್ಡಿಂಗ್ ಮಾಡುತ್ತಿರುವಾಗ ಪ್ರೇಕ್ಷಕ ಗ್ಯಾಲರಿಯಿಂದ ಮೈದಾನದ ಒಳಗೆ ಪ್ರವೇಶಿಸಿದ ವ್ಯಕ್ತಿ ರೋಹಿತ್ ಶರ್ಮಾ ಬಳಿ ಓಡಿ ಬಂದಿದ್ದಾರೆ.
ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟಿ20 ಪಂದ್ಯದ ವೇಳೆ ಅಚ್ಚರಿಯ ಘಟನೆಯೊಂದು ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಉಪ ನಾಯಕ ಕೆಎಲ್ ರಾಹುಲ್ (KL Rahul) ಅವರ ಆಕರ್ಷಕ ಅರ್ಧಶತಕದ ಜೊತೆ ಸಂಘಟಿತ ಬೌಲಿಂಗ್ ಪ್ರದರ್ಶನದಿಂದ ಭಾರತ ಗೆದ್ದು ಬೀಗಿ ಟಿ20 ಸರಣಿಯನ್ನು (T20I Series) ವಶಪಡಿಸಕೊಂಡಿತು. ಇದರ ನಡುವೆ ಭಾರತದ ಫೀಲ್ಡಿಂಗ್ ಇನ್ನಿಂಗ್ಸ್ ವೇಳೆ ಮೈದಾನದ ಒಳಗೆ ಅಪರಿಚಿತ ವ್ಯಕ್ತಿ (Rohit Sharma Fan) ಎಂಟ್ರಿ ಕೊಟ್ಟ ಘಟನೆ ನಡೆದಿದೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ಸರಣಿ ವೀಕ್ಷಿಸಲು ಸ್ಟೇಡಿಯಂನಲ್ಲಿ ಶೇ. 100 ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ರಾಂಚಿಯಲ್ಲಿ ನಡೆದ ಪಂದ್ಯ ವೀಕ್ಷಿಸಲು ಸ್ಟೇಡಿಯಂ ಅಂತೂ ಹೌಸ್ ಫುಲ್ ಆಗಿತ್ತು. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ಕೆ ಮಾಡಿತು. ಹೀಗಿರುವಾಗ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿರುವಾಗ ಪ್ರೇಕ್ಷಕ ಗ್ಯಾಲರಿಯ ಮೂಲೆಯಿಂದ ಮೈದಾನದ ಒಳಗೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಳಿ ಓಡಿ ಬಂದಿದ್ದಾರೆ. ಸೆಕ್ಯೂರಿಟಿ ಸಿಬ್ಬಂದಿ ಅಲ್ಲಿದ್ದರೂ ಅವರ ಕಣ್ಣು ತಪ್ಪಿಸಿ ಅಭಿಮಾನಿ ಓಡಿಕೊಂಡು ಬಂದಿದ್ದಾರೆ.
ರೋಹಿತ್ ಶರ್ಮಾ ಬಳಿ ಬಂದು ಅಲ್ಲೇ ಅಡ್ಡ ಬಿಂದು ಸಮಸ್ಕರಿಸಿದ್ದಾರೆ. ರೋಹಿತ್ ಪಾದಸ್ಪರ್ಶಕ್ಕಾಗಿ ಇವರು ಕಾದುಕುಳಿತಿದ್ದರಂತೆ. ರೋಹಿತ್ ಫೀಲ್ಡಿಂಗ್ ಅಥವಾ ಬ್ಯಾಟಿಂಗ್ ಮಾಡುವಾಗ ಅಭಿಮಾನಿಗಳು ಮೈದಾನದ ಒಳಗೇ ಪ್ರವೇಶಿಸಿ ಅವರ ಬಳಿ ಬಂದಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಅನೇಕ ಬಾರಿ ಈರೀತಿಯ ಘಟನೆಗಳು ಸಂಭವಿಸಿವೆ.
And a fan stormed into the field!!! The fellow sitting beside me, “ab maar khaaye chahe jo ho uska Sapna poora ho gaya! Ab yeh Ranchi mein Hatia mein Jharkhand mein poore India mein famous ho gaya!!” #IndiaVsNewZealand #INDVsNZT20 #fans #CricketTwitter pic.twitter.com/6NsIQDY0fO
— Sunchika Pandey/संचिका पाण्डेय (@PoliceWaliPblic) November 19, 2021
ಎರಡನೇ ಟಿ20 ಪಂದ್ಯದಲ್ಲಿ ಆಲ್‌ರೌಂಡ್ ಆಟವಾಡಿದ ಟೀಮ್ ಇಂಡಿಯಾ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡಿದೆ. ಪಂದ್ಯದಲ್ಲಿ ಗೆಲುವಿಗೆ 154 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಮೊದಲ ವಿಕೆಟ್‌ಗೆ ಆರಂಭಿಕರಾದ ರೋಹಿತ್ ಶರ್ಮಾ (55) ಮತ್ತು ಕೆಎಲ್ ರಾಹುಲ್ 117 ರನ್‌ಗಳ ಭರ್ಜರಿ ಜೊತೆಯಾಟದ ಮೂಲಕ ಅಡಿಪಾಯ ಹಾಕಿಕೊಟ್ಟರು. 18ನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ರಿಷಭ್ ಪಂತ್ (12*) ತಂಡವನ್ನು ಜಯದ ದಡ ಮುಟ್ಟಿಸಿದರು.
Harshal Patel: ಪದಾರ್ಪಣೆ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಸ್ವೀಕರಿಸುವಾಗ ಹರ್ಷಲ್ ಪಟೇಲ್ ಹೇಳಿದ್ದೇನು ಗೊತ್ತಾ?
(fan jumped between India and New Zealand and tried to touch Rohit Sharma feet Viral Video)
Published On - 12:36 pm, Sat, 20 November 21