Rohit Sharma Press Conference: ಸುದ್ದಿಗೋಷ್ಠಿಯಲ್ಲಿ ಹೆಚ್ಚು ಕೊಹ್ಲಿ ಬಗ್ಗೆಯೇ ಮಾತನಾಡಿದ ರೋಹಿತ್ ಶರ್ಮಾ

IND vs SL, Kohli 100th Test: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.

Rohit Sharma Press Conference: ಸುದ್ದಿಗೋಷ್ಠಿಯಲ್ಲಿ ಹೆಚ್ಚು ಕೊಹ್ಲಿ ಬಗ್ಗೆಯೇ ಮಾತನಾಡಿದ ರೋಹಿತ್ ಶರ್ಮಾ
Rohit Sharma press conference and Virat Kohli
Follow us
| Updated By: Vinay Bhat

Updated on: Mar 03, 2022 | 2:01 PM

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4 ಶುಕ್ರವಾರದಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಟೆಸ್ಟ್ ಪಂದ್ಯ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಮಹತ್ವದ್ದಾಗಿದೆ. ನಾಯಕನಾಗಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ರೋಹಿತ್ ಮುನ್ನಡೆಸುತ್ತಿದ್ದರೆ, ಇತ್ತ ವಿರಾಟ್ ಕೊಹ್ಲಿ (Virat Kohli) ಐತಿಹಾಸಿಕ 100ನೇ ಟೆಸ್ಟ್​ಗೆ ಸಜ್ಜಾಗಿದ್ದಾರೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಂತು ಕಾದುಕುಳಿತಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಗಣ್ಯರು ಈ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ. ಸದ್ಯ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಏನು ಹೇಳಿದರು ಎಂಬುದನ್ನು ನೋಡೋಣ.

ಆರಂಭದಲ್ಲಿ ಟೆಸ್ಟ್ ನಾಯಕತ್ವದ ಬಗ್ಗೆ ಮಾತನಾಡಿದ ರೋಹಿತ್, “ಟೆಸ್ಟ್ ನಾಯಕನಾಗಿ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಾವು ದೊಡ್ಡ ತಪ್ಪುಗಳನ್ನು ಮಾಡಿದ್ದೇವೆ ಎಂದು ನನಗೆ ಅನಿಸುವುದಿಲ್ಲ. ಆದರೆ, ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕು,” ಎಂದು ಹೇಳುದ್ದಾರೆ.

ಕೊಹ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಇವರು, “ಕೊಹ್ಲಿಗೆ ಇದೊಂದು ಅದ್ಭುತ ಮತ್ತು ತುಂಬಾ ದೊಡ್ಡವಾದ ಹಾದಿ. ಈ ಮಾದರಿಯ ಕ್ರಿಕೆಟ್​ನಲ್ಲಿ ಅವರು ಅಮೋಘ ಸಾಧನೆ ಮಾಡಿದ್ದಾರೆ. ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಮಹತ್ವದ ಬದಲಾವಣೆ ಮಾಡಿದ್ದಾರೆ. ತಂಡವಾಗಿ ನಾವು 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದು ನನಗೆ ಇಂದಿಗೂ ನೆನಪಿದೆ. ನನಗೆ 2013 ರಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ ಶತಕ ಫೆವರಿಟ್. ಆ ಸಂದರ್ಭ ಅವರು ಘಾತಕ ವೇಗಿಗಳಾದ ಡೇಲ್ ಸ್ಟೈನ್, ಮಾರ್ಕೆಲ್, ಕ್ಯಾಲಿಸ್ ಅವರ ಬೌಲಿಂಗ್​ ಅನ್ನು ಎದುರಿಸಿ ಶತಕ ಬಾರಿಸಿದ್ದರು. ಇದರ ಜೊತೆಗೆ ಕೊಹ್ಲಿ 2018 ರಲ್ಲಿ ಪರ್ತ್​ನಲ್ಲಿ ಸೆಂಚುರಿಗಳಿಸಿದ್ದು ಕೂಡ ನೆನಪಿದೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಅವರು ಶತಕ ಗಳಿಸಿದ್ದು ನನ್ನ ಫೆವರಿಟ್,” ಎಂದು ಹೇಳಿದ್ದಾರೆ.

“ನಾವು ಮೊದಲಿಗೆ ಮುಂಬರುವ ಒಂದು ಟೆಸ್ಟ್ ಪಂದ್ಯದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಮುಂದಿನ ಒಂಬತ್ತು ಟೆಸ್ಟ್ ಕೂಡ ನಮಗೆ ಮುಖ್ಯವಾಗಿದೆ. ಇದರಲ್ಲಿ ಪ್ರತಿ ಪಂದ್ಯವನ್ನು ನಾವು ಗೆಲ್ಲಬೇಕು. ಇದರಿಂದ ಆಟಗಾರರ ಬೆಳವಣಿಗೆ ಕೂಡ ಸಾಧ್ಯವಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಇರುವುದರಿಂದ ನಾವು ಆಡುವ ಪ್ರತಿಯೊಂದು ಪಂದ್ಯ ಕೂಡ ಮಹತ್ವ ಪಡೆದುಕೊಳ್ಳುತ್ತದೆ.” – ರೋಹಿತ್ ಶರ್ಮಾ

ಇನ್ನು ಪೂಜಾರ- ರಹಾನೆ ಕೈಬಿಟ್ಟ ಬಗ್ಗೆ ಮಾತನಾಡಿದ ರೋಹಿತ್, “ಮುಂದಿನ ದಿನಗಳಲ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗುವುದಿಲ್ಲ ಎಂದು ಹೇಳಲಾರೆ. ನಾವೆಲ್ಲ ಅವರ ಮೇಲೆ ಕಣ್ಣಿಟ್ಟಿದ್ದೇವೆ. ಭಾರತ ತಂಡಕ್ಕೆ ಇವರಿಬ್ಬರ ಕೊಡುಗೆ ಅಪಾರವಾಗಿದೆ. ಅವರ ವರ್ಷಗಳ ಶ್ರಮ ಮತ್ತು ಕೊಡುಗೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಾವು ವಿದೇಶದಲ್ಲಿ ಗೆಲುವು ಸಾಧಿಸಿದ್ದು ಆಗಿರಬಹುದು ಅಥವಾ ಭಾರತ ನಂಬರ್ ಒನ್ ಟೆಸ್ಟ್ ತಂಡವಾಗಿ ಹೊರಹೊಮ್ಮಲು ಇವರು ಪಾತ್ರ ದೊಡ್ಡದಿದೆ,” ಎಂದಿದ್ದಾರೆ.

“ನಾನು ಎದುರಾಳಿಯ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ಅವರ ಬೌಲಿಂಗ್ ಮತ್ತು ಬ್ಯಾಟಿಂಗ್​ಗೆ ಸಂಬಂಧ ಪಟ್ಟಂತೆ ಕೆಲ ಯೋಜನೆ ಮಾಡಿಕೊಳ್ಳುತ್ತೇವಷ್ಟೆ. ಉಳಿದಿರುವುದು ನಮ್ಮ ಸಾಮರ್ಥ್ಯದ ಮೇಲೆ. ನಾವು ಯಾವರೀತಿ ಬ್ಯಾಟಿಂಗ್ ಮಾಡುತ್ತೇವೆ ಮತ್ತು ಯಾವರೀತಿ ಬೌಲಿಂಗ್ ಮಾಡುತ್ತೇವೆ ಎಂಬುದರ ಮೇಲೆ ನಿಂತಿದೆ.” ಮೊಹಾಲಿ ಪಿಚ್ ಅದ್ಭುತ ಪಿಚ್ ಆಗಿದೆ. ಇಲ್ಲಿ ಚೆಂಡು ಟರ್ನ್ ಆಗುತ್ತದೆ ಎಂದು ನಾನು ನಂಬಿದ್ದೇನೆ. ಕೊಹ್ಲಿ ಅವರ 100ನೇ ಟೆಸ್ಟ್ ಆಗಿರುವುದರಿಂದ ಪ್ರೇಕ್ಷಕರು ಹಾಜರಿರುವುದು ಸಂತಸ ನೀಡಿದೆ,” ಎಂದಿದ್ದಾರೆ.

IND vs SL: ಬಲಿಷ್ಠವಾಗಿದೆ ಭಾರತ: ಮೊದಲ ಟೆಸ್ಟ್​ಗೆ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೇಗಿರಲಿದೆ?

IND vs SL Test: ಭಾರತ- ಶ್ರೀಲಂಕಾ ಮೊದಲ ಟೆಸ್ಟ್ ಯಾವಾಗ?, ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?

ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್