Rohit Sharma: ರೋಹಿತ್ ಶರ್ಮಾಗೆ ಗಂಭೀರ ಗಾಯ: ಮೈದಾನದಿಂದ ಹೊರಕ್ಕೆ

| Updated By: ಝಾಹಿರ್ ಯೂಸುಫ್

Updated on: Dec 07, 2022 | 1:32 PM

India vs Bangladesh 2nd ODI: ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಮಿಂಚಿದರು. ಮೊದಲಿಗೆ ಶಕೀಬ್ ಅಲ್ ಹಸನ್ (8) ವಿಕೆಟ್ ಪಡೆದ ಸುಂದರ್, ಆ ಬಳಿಕ ಮುಶ್ಪಿಕುರ್ ರಹೀಮ್ (12) ಹಾಗೂ ಅಫಿಫ್ ಹೊಸೈನ್ (0) ಸ್ಪಿನ್ ಬಲೆಗೆ ಬೀಳಿಸಿದರು.

Rohit Sharma: ರೋಹಿತ್ ಶರ್ಮಾಗೆ ಗಂಭೀರ ಗಾಯ: ಮೈದಾನದಿಂದ ಹೊರಕ್ಕೆ
Rohit Sharma
Follow us on

India vs Bangladesh 2nd ODI:  ಢಾಕಾದ ಶೇರೆ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ಚೆಂಡು ಅನಾಮುಲ್ ಹಕ್ ಅವರ ಬ್ಯಾಟ್ ಸವರಿ ಸ್ಲಿಪ್​ನತ್ತ ಚಿಮ್ಮಿತ್ತು. ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ರೋಹಿತ್ ಶರ್ಮಾ ಕ್ಯಾಚ್ ಹಿಡಿಯುವ ಯತ್ನ ಮಾಡಿದ್ದರು. ಆದರೆ ಚೆಂಡು ನೇರವಾಗಿ ಹಿಟ್​ಮ್ಯಾನ್ ಅವರ ಹೆಬ್ಬೆರಳಿಗೆ ತಾಗಿ ಕೆಳಗೆ ಬಿದ್ದಿದೆ. ಇದರಿಂದ ಹೆಬ್ಬೆರಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ರೋಹಿತ್ ಶರ್ಮಾ ಮೈದಾನ ತೊರೆದರು. ಇದೀಗ ಗಾಯವನ್ನು ಪರಿಶೀಲಿಸಿರುವ ಫಿಸಿಯೋ ಸ್ಕ್ಯಾನಿಂಗ್ ಮಾಡಲು ಸೂಚಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಬ್ಯಾಟಿಂಗ್​ಗೆ ಇಳಿಯುವುದು ಅನುಮಾನ.  ಸದ್ಯ ಟೀಮ್ ಇಂಡಿಯಾವನ್ನು ಉಪ ನಾಯಕ ಕೆಎಲ್ ರಾಹುಲ್ ಮುನ್ನಡೆಸಿದ್ದಾರೆ.

ಇದಕ್ಕೂ ಮುನ್ನ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಟೀಮ್ ಇಂಡಿಯಾ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ರನ್​ಗಳಿಸಲು ಬಾಂಗ್ಲಾ ಬ್ಯಾಟರ್​ಗಳು ಪರದಾಡಿದರು. 2ನೇ ಓವರ್​ನ 5ನೇ ಎಸೆತದಲ್ಲಿ ಅನಾಮುಲ್ ಹಕ್ (11) ಅವರ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು.

ಇದಾದ ಬಳಿಕ 10ನೇ ಓವರ್​​ನಲ್ಲಿ ಮತ್ತೆ ದಾಳಿಗಿಳಿದ ಸಿರಾಜ್ ಲಿಟನ್ ದಾಸ್ (7) ಕ್ಲೀನ್ ಬೌಲ್ಡ್ ಮಾಡಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಜ್ಮುಲ್ ಹೊಸೈನ್​ರನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಕ್ಲೀನ್ ಬೌಲ್ಡ್ ಮಾಡಿ ಉಮ್ರಾನ್ ಮಲಿಕ್ ಪೆವಿಲಿಯನ್​ಗೆ ಕಳುಹಿಸಿದರು.

ಇದರ ನಡುವೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿ ಮಿಂಚಿದರು. ಮೊದಲಿಗೆ ಶಕೀಬ್ ಅಲ್ ಹಸನ್ (8) ವಿಕೆಟ್ ಪಡೆದ ಸುಂದರ್, ಆ ಬಳಿಕ ಮುಶ್ಪಿಕುರ್ ರಹೀಮ್ (12) ಹಾಗೂ ಅಫಿಫ್ ಹೊಸೈನ್ (0) ಸ್ಪಿನ್ ಬಲೆಗೆ ಬೀಳಿಸಿದರು. ಪರಿಣಾಮ 20 ಓವರ್ ಮುಕ್ತಾಯದ ವೇಳೆಗೆ ಬಾಂಗ್ಲಾದೇಶ್ ತಂಡವು 6 ವಿಕೆಟ್ ಕಳೆದುಕೊಂಡಿತು. ಅಲ್ಲದೆ ಕಲೆಹಾಕಿದ್ದು ಕೇವಲ 71 ರನ್​ಗಳು ಮಾತ್ರ.

ಭಾರತ (ಪ್ಲೇಯಿಂಗ್ ಇಲೆವೆನ್): ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್

ಬಾಂಗ್ಲಾದೇಶ (ಪ್ಲೇಯಿಂಗ್ ಇಲೆವೆನ್): ನಜ್ಮುಲ್ ಹೊಸೈನ್ ಶಾಂಟೊ, ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಇಬಾದತ್ ಹೊಸೈನ್, ಮುಸ್ತಫಿಜುರ್ ರೆಹಮಾನ್