Rohit Sharma: ದೇಹ ದಂಡಿಸಿದ ಹಿಟ್​ಮ್ಯಾನ್: ರೋಹಿತ್ ಶರ್ಮಾ ಕಂಬ್ಯಾಕ್ ಯಾವಾಗ? ಇಲ್ಲಿದೆ ಉತ್ತರ

| Updated By: ಝಾಹಿರ್ ಯೂಸುಫ್

Updated on: Jan 17, 2022 | 3:51 PM

Rohit sharma New Look: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇದೀಗ ಹಿಟ್​ಮ್ಯಾನ್ ದೇಹ ತೂಕವನ್ನು ಇಳಿಸಲು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹೊಸ ಲುಕ್​ನಲ್ಲಿರುವ ಫೋಟೋವೊಂದನ್ನು ಕೂಡ ಹಿಟ್​ಮ್ಯಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Rohit Sharma: ದೇಹ ದಂಡಿಸಿದ ಹಿಟ್​ಮ್ಯಾನ್: ರೋಹಿತ್ ಶರ್ಮಾ ಕಂಬ್ಯಾಕ್ ಯಾವಾಗ? ಇಲ್ಲಿದೆ ಉತ್ತರ
Rohit Sharma
Follow us on

ಜನವರಿ 19 ರಿಂದ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಶುರುವಾಗಲಿದೆ. ವಿಶೇಷ ಎಂದರೆ ಈ ಸರಣಿಯಿಂದ ರೋಹಿತ್ ಶರ್ಮಾ (Rohit Sharma) ಹೊರಗುಳಿದಿದ್ದಾರೆ. ಅಂದರೆ ಟೀಮ್ ಇಂಡಿಯಾ (Team India) ಏಕದಿನ ತಂಡಕ್ಕೆ ನಾಯಕರಾದ ಬಳಿಕ ಹಿಟ್​ಮ್ಯಾನ್​ಗೆ ಇದು ಮೊದಲ ಸರಣಿ ಆಗಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದಲೂ ರೋಹಿತ್ ಶರ್ಮಾ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಹಿಟ್​ಮ್ಯಾನ್ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಿಂದ ಗಾಯದ ಕಾರಣ ಹೊರಗುಳಿಯಬೇಕಾಯಿತು. ಇದೀಗ ಫಿಟ್​ನೆಸ್​ನತ್ತ ಗಮನ ಹರಿಸಿರುವ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಎರಡು ಸರಣಿಗಳಿಂದ ಹೊರಗುಳಿದಿದ್ದಾರೆ. ಇನ್ನು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.

ಮತ್ತೊಂದೆಡೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್​ನೆಸ್​ಗಾಗಿ ಕಸರತ್ತು ನಡೆಸುತ್ತಿರುವ ಹಿಟ್​ಮ್ಯಾನ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಯಾವಾಗ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ ಫೆಬ್ರವರಿ ತಿಂಗಳಲ್ಲಿ ಎಂಬುದು. ಹೌದು, ರೋಹಿತ್ ಶರ್ಮಾ ಮುಂಬರುವ ವೆಸ್ಟ್ ಇಂಡೀಸ್ ಸರಣಿ ವೇಳೆಗೆ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಸೇರಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ಏಕದಿನ ತಂಡದ ನಾಯಕರಾಗಿ ಪದಾರ್ಪಣೆ ಮಾಡಲಿದ್ದಾರೆ.

ಭಾರತ-ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 6 ರಂದು ಶುರುವಾಗಲಿದೆ. ಈ ವೇಳೆಗೆ ರೋಹಿತ್ ಶರ್ಮಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಲ್ಲದೆ ಏಕದಿನ ಹಾಗೂ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮತ್ತೊಂದೆಡೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಇದೀಗ ಹಿಟ್​ಮ್ಯಾನ್ ದೇಹ ತೂಕವನ್ನು ಇಳಿಸಲು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹೊಸ ಲುಕ್​ನಲ್ಲಿರುವ ಫೋಟೋವೊಂದನ್ನು ಕೂಡ ಹಿಟ್​ಮ್ಯಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಂಪೂರ್ಣ ತಯಾರಿಯೊಂದಿಗೆ ಯಂಗ್ ಅ್ಯಂಡ್ ಎನರ್ಜಿಟಿಕ್ ಆಗಿ ಕಂಬ್ಯಾಕ್ ಮಾಡಲು ರೋಹಿತ್ ಶರ್ಮಾ ಸಿದ್ದತೆಯಲ್ಲಿದ್ದಾರೆ.

ಏಕೆಂದರೆ ಪ್ರಸ್ತುತ ಬಿಸಿಸಿಐ ನಿಯಮದ ಪ್ರಕಾರ, ಫಿಟ್‌ನೆಸ್ ಪ್ರಮಾಣಪತ್ರವನ್ನು ಪಡೆಯಲು ಪ್ರತಿಯೊಬ್ಬ ಆಟಗಾರನು ಎನ್‌ಸಿಎಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಇದಾದ ಬಳಿಕ ಆಯ್ಕೆ ಸಮಿತಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೀಗಾಗಿ ಸಂಪೂರ್ಣ ಫಿಟ್​ನೆಸ್​ ಕಡೆಗೆ ರೋಹಿತ್ ಶರ್ಮಾ ಗಮನಹರಿಸಿದ್ದು, ಈ ಮೂಲಕ ಎನ್​ಸಿಎ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವಷ್ಟೇ ಆಯ್ಕೆಗೆ ತಮ್ಮ ಲಭ್ಯತೆಯನ್ನು ತಿಳಿಸಲು ರೋಹಿತ್ ಶರ್ಮಾ ನಿರ್ಧರಿಸಿದ್ದಾರೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯೊಂದಿಗೆ ಹೊಸ ಲುಕ್​ನಲ್ಲಿ ಹಿಟ್​ಮ್ಯಾನ್ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಐರ್ಲೆಂಡ್‌ಗೆ: 8 ಸಾವಿರ ಕಿ.ಮೀ ನಡೆದು ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಯುವ ಬೌಲರ್..!

ಇದನ್ನೂ ಓದಿ:  ಈ ಫೋಟೋದಲ್ಲಿರುವ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Rohit Sharma likely to be available for home series against West Indies)