IND vs ENG 5th Test: 5ನೇ ಟೆಸ್ಟ್ ಗೆದ್ದರೆ ವಿಶೇಷ ಸಾಧನೆ: ಧೋನಿ, ಕೊಹ್ಲಿ ಸಾಲಿಗೆ ಸೇರಲಿರುವ ರೋಹಿತ್ ಶರ್ಮಾ
Rohit Sharma Record: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಯಕನಾಗಿ 10 ಗೆಲುವು ಸಾಧಿಸಲು ರೋಹಿತ್ ಶರ್ಮಾಗೆ ಕೇವಲ ಒಂದು ಜಯದ ಅಗತ್ಯವಿದೆ. ಈ ಸಾಧನೆ ಮಾಡಿದ ಭಾರತದ ಐದನೇ ನಾಯಕ ಎಂಬ ಹೆಗ್ಗಳಿಕೆಗೆ ಹಿಟ್ಮ್ಯಾನ್ ಪಾತ್ರರಾಗಲಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ ರೋಹಿತ್ ಭಾರತೀಯ ನಾಯಕರ ಎಲೈಟ್ ಪಟ್ಟಿಗೆ ಸೇರಲಿದ್ದಾರೆ.
ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ಪ್ರಸ್ತುತ ಮುನ್ನಡೆಯಲ್ಲಿದೆ. ಹೈರಾಬಾದ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಸೋತ ನಂತರ ಟೀಮ್ ಇಂಡಿಯಾ ಈಗಾಗಲೇ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದ ಯಶಸ್ಸು ಇಲ್ಲೂ ಮುಂದುವರೆದಿದೆ. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಪ್ರಮುಖ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಹಿಟ್ಮ್ಯಾನ್ ತಂಡವನ್ನು ಮುನ್ನಡೆಸಿ ಸರಣಿಯನ್ನು ವಶಪಡಿಸಿಕೊಂಡಿದ್ದಾರೆ. ಇದೀಗ, ಧರ್ಮಶಾಲಾ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ ರೋಹಿತ್ ಭಾರತೀಯ ನಾಯಕರ ಎಲೈಟ್ ಪಟ್ಟಿಗೆ ಸೇರಲಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಯಕನಾಗಿ 10 ಗೆಲುವು ಸಾಧಿಸಲು ರೋಹಿತ್ ಶರ್ಮಾಗೆ ಕೇವಲ ಒಂದು ಜಯದ ಅಗತ್ಯವಿದೆ. ಈ ಸಾಧನೆ ಮಾಡಿದ ಭಾರತದ ಐದನೇ ನಾಯಕ ಎಂಬ ಹೆಗ್ಗಳಿಕೆಗೆ ಹಿಟ್ಮ್ಯಾನ್ ಪಾತ್ರರಾಗಲಿದ್ದಾರೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸೌರವ್ ಗಂಗೂಲಿ ಮತ್ತು ಮೊಹಮ್ಮದ್ ಅಜರುದ್ದೀನ್ ಅವರು ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಎರಡಂಕಿಯ ಗೆಲುವು ಸಾಧಿಸಿದ ನಾಲ್ವರು ಭಾರತೀಯ ನಾಯಕರು.
ಸತತ ಎರಡು ಸೋಲು: ದಿಢೀರ್ ನಾಲ್ಕನೇ ಸ್ಥಾನಕ್ಕೆ ಕುಸಿದ ಆರ್ಸಿಬಿ, ಈ ಬಾರಿ ಕೂಡ ಕಪ್…
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಭಾರತೀಯ ನಾಯಕರು:
- ವಿರಾಟ್ ಕೊಹ್ಲಿ- 40
- ಎಂಎಸ್ ಧೋನಿ- 27
- ಸೌರವ್ ಗಂಗೂಲಿ- 21
- ಮೊಹಮ್ಮದ್ ಅಜರುದ್ದೀನ್- 14
- ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್, ಮನ್ಸೂರ್ ಅಲಿ ಖಾನ್ ಪಟೌಡಿ- 9
ಭಾರತವು ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ಮೈದಾನಕ್ಕಿಳಿಯುತ್ತಿದ್ದಂತೆ ರೋಹಿತ್ ಶರ್ಮಾ ಅವರು ಗೌತಮ್ ಗಂಭೀರ್ ದಾಖಲೆ ಹಿಂದಿಕ್ಕಿ ಎಲೈಟ್ ಬ್ಯಾಟಿಂಗ್ ಪಟ್ಟಿಗೆ ಸೇರಲಿದ್ದಾರೆ. ರೋಹಿತ್ ಭಾರತಕ್ಕಾಗಿ ಟೆಸ್ಟ್ ಸ್ವರೂಪದಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಂಭೀರ್ ನಂತರದ ಸ್ಥಾನದಲ್ಲಿದ್ದಾರೆ. ಸದ್ಯ ಹಿಟ್ಮ್ಯಾನ್ 58 ಪಂದ್ಯಗಳಲ್ಲಿ 4034 ರನ್‌ಗಳಿಸಿದ್ದಾರೆ. ಗಂಭೀರ್ ದಾಖಲೆ ಹಿಂದಿಕ್ಕಲು ಇವರಿಗೆ ಕೇವಲ 121 ರನ್‌ಗಳು ಬೇಕಾಗಿವೆಯಷ್ಟೆ. ಗಂಭೀರ್ 58 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 4154 ರನ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದರು.
ಸಿಸಿಎಲ್ನಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿದ ಡಾರ್ಲಿಂಗ್ ಕೃಷ್ಣ..!
ಇತಿಹಾಸ ಸೃಷ್ಟಿಸಲು ಸಜ್ಜಾದ ಯಶಸ್ವಿ:
ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ 29 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಟೆಸ್ಟ್ ಇತಿಹಾಸದಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಬ್ಯಾಟರ್ ಆಗಲಿದ್ದಾರೆ. ಸದ್ಯ ಈ ದಾಖಲೆ ಚೇತೇಶ್ವರ ಪೂಜಾರ ಅವರ ಹೆಸರಿನಲ್ಲಿದ್ದು, ಈ ಮೈಲುಗಲ್ಲು ತಲುಪಲು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇನ್ನಿಂಗ್ಸ್ ವಿಚಾರದಲ್ಲಿ ಈ ದಾಖಲೆ ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. ಮಾಜಿ ಎಡಗೈ ಬ್ಯಾಟರ್ 12 ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ ಟೆಸ್ಟ್‌ನಲ್ಲಿ 1000 ರನ್ ಪೂರೈಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ