VIDEO: ನಿಂಗೆ ಬುದ್ಧಿ ಇಲ್ವಾ? ಸಹೋದರನ ವಿರುದ್ಧ ರೋಹಿತ್ ಶರ್ಮಾ ಗರಂ

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ರೋಹಿತ್ ಶರ್ಮಾ ಪಾಲಿಗೆ ವಿಶೇಷ. ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಅನಾವರಣಗೊಂಡಿದ್ದು, ಈ ವಿಶೇಷ ಗೌರವದ ಬಳಿಕ ನಡೆಯುವ ಮೊದಲ ಪಂದ್ಯ ಇದಾಗಿದೆ.

VIDEO: ನಿಂಗೆ ಬುದ್ಧಿ ಇಲ್ವಾ? ಸಹೋದರನ ವಿರುದ್ಧ ರೋಹಿತ್ ಶರ್ಮಾ ಗರಂ
Rohit Sharma

Updated on: May 17, 2025 | 9:04 AM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾಗೆ (Rohit Sharma) ವಿಶೇಷ ಗೌರವ ನೀಡಲಾಗಿದೆ. ಅದು ಕೂಡ ರೋಹಿತ್ ಶರ್ಮಾ ಹೆಸರಿನಲ್ಲಿ ಹೊಸ ಸ್ಟ್ಯಾಂಡ್​ ಅನ್ನು ಅನಾವರಣಗೊಳಿಸುವ ಮೂಲಕ ಎಂಬುದು ವಿಶೇಷ. ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದ ಮೂಲಕ ಸ್ಟ್ಯಾಂಡ್​ವೊಂದಕ್ಕೆ ರೋಹಿತ್ ಶರ್ಮಾ ಹೆಸರಿಡಲಾಗಿದೆ. ಈ ವಿಶೇಷ ಕಾರ್ಯಕ್ರಮದ ರೋಹಿತ್ ಶರ್ಮಾ ಅವರ ಕುಟುಂಬಸ್ಥರು ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ, ರೋಹಿತ್ ಶರ್ಮಾ ಅವರು ಸಹೋದರ ವಿಶಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ. ಅದರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ, ರೋಹಿತ್ ತನ್ನ ಕಿರಿಯ ಸಹೋದರನನ್ನು ಗದರಿಸುತ್ತಿರುವುದು ಕಾಣಬಹುದು.

ತರಾಟೆ ತೆಗೆದುಕೊಂಡ ಹಿಟ್​ಮ್ಯಾನ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ರೋಹಿತ್ ಶರ್ಮಾ ವಿಶಾಲ್ ಗೆ ತನ್ನ ಕಾರಿನ ಕಡೆಗೆ ಬೆರಳು ತೋರಿಸುತ್ತಾ, ಏನು ಇದು ಎಂದು ಡೆಂಟ್​ ಆಗಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಿಶಾಲ್ ರಿವರ್ಸ್ ತೆಗೆಯುವಾಗ ತಾಗಿದೆ ಎಂದು ಉತ್ತರಿಸಿದ್ದಾರೆ.

ಯಾರಿಂದ? ನಿನ್ನಿಂದನಾ? ಎಂದು ರೋಹಿತ್ ಶರ್ಮಾ ಮರು ಪ್ರಶ್ನಿಸಿದರು. ಅತ್ತ ವಿಶಾಲ್ ಕಡೆಯಿಂದ ಉತ್ತರ ಬರುತ್ತಿದ್ದಂತೆ, ಹಿಟ್​ಮ್ಯಾನ್, ನಿನಗೇನು ಬುದ್ದಿ ಇಲ್ವಾ? ಎಂದು ಕೋಪಗೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋಗೆ ಪರ – ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ರೋಹಿತ್ ಶರ್ಮಾ ಅವರ ವರ್ತನೆಯನ್ನು ಸಮರ್ಥಿಸಿದರೆ ಮತ್ತೆ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಸಹೋದರನನ್ನು ತರಾಟೆಗೆ ತೆಗೆದುಕೊಳ್ಳಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ – ವಿಶಾಲ್ ವಿಡಿಯೋ:

ಮುಂಬೈನಲ್ಲಿ ಮೊದಲ ಮ್ಯಾಚ್:

ರೋಹಿತ್ ಶರ್ಮಾ ಹೆಸರು ಹೊಂದಿರುವ ವಾಂಖೆಡೆ ಸ್ಟೇಡಿಯಂನಲ್ಲೇ ಮುಂಬೈ ಇಂಡಿಯನ್ಸ್ ತಂಡವು ಮೇ 21 ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಎರಡೂ ತಂಡಗಳು ಪ್ಲೇಆಫ್ ರೇಸ್​ನಲ್ಲಿದ್ದು, ಹೀಗಾಗಿ ಈ ಮ್ಯಾಚ್​ನಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದೆ.