ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳ ಪೈಕಿ ಎರಡನ್ನೂ ಭಾರತ (IND vs WI 3rd ODI) ಗೆದ್ದು ಬೀಗಿದೆ. ಈ ಮೂಲಕ ರೋಹಿತ್ ಶರ್ಮಾ (Rohi Sharma) ತಮ್ಮ ಚೊಚ್ಚಲ ನಾಯಕತ್ವದಲ್ಲಿ ನೂತನ ದಾಖಲೆ ಬರೆದರು. ಇದೀಗ ಇತಿಹಾಸ ರಚಿಸಲು ಹಿಟ್ಮ್ಯಾನ್ ಸಜ್ಜಾಗಿದ್ದಾರೆ. ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಮೂರನೇ ಪಂದ್ಯ ನಡೆಯಲಿದೆ. ಇದರಲ್ಲೂ ಟೀಮ್ ಇಂಡಿಯಾ (Team India) ಗೆದ್ದರೆ ಸರಣಿ ಕ್ಲೀನ್ಸ್ವೀಪ್ ಗೈದ ಸಾಧನೆ ಮಾಡಲಿದೆ. ಜೊತೆಗೆ ರೋಹಿತ್ ಶರ್ಮಾ ಅವರು ಕಪಿಲ್ ದೇವ್, ಎಂಎಸ್ ಧೋನಿ, ವಿರಾಟ್ ಕೊಹ್ಲಿಯ ದಿಗ್ಗಜರ ಸಾಲಿಗೆ ಸೇರಲಿದ್ದಾರೆ. ಹಾಗಾದ್ರೆ ರೋಹಿತ್ ಸೃಷ್ಟಿಸಲಿರುವ ಆ ದಾಖಲೆ ಏನು ಎಂಬುದನ್ನು ನೋಡೋಣ.
ಭಾರತ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ 2017 ರಲ್ಲಿ ಕೊನೆಯದಾಗಿ ಏಕದಿನ ಸರಣಿಯನ್ನು ವೈಟ್ವಾಷ್ ಮಾಡಿ ಗೆದ್ದಿತ್ತು. ಇದೀಗ ರೋಹಿತ್ ಕ್ಲೀನ್ಸ್ವೀಪ್ ಮಾಡಿದರೆ 50 ಓವರ್ಗಳ ಪಂದ್ಯದಲ್ಲಿ ಈ ಸಾಧನೆ ಗೈದ ಭಾರತದ ಎಂಟನೇ ನಾಯಕ ಆಗಲಿದ್ದಾರೆ. ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ವೈಟ್ವಾಷ್ ಮಾಡಿದ ಮೊದಲ ನಾಯಕನಾಗಲಿದ್ದಾರೆ.
ಈ ಸಾಧನೆ ಮಾಡಿದ ಮೊದಲ ನಾಯಕ ಕಪಿಲ್ ದೇವ್ ಆಗಿದ್ದಾರೆ. ಇವರ ನಾಯಕತ್ವದಡಿಯಲ್ಲಿ ಭಾರತ 1982/83 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನ 3-0 ಅಂತರದಿಂದ ವೈಟ್ವಾಷ್ ಮಾಡಿತ್ತು. ಟೀಮ್ ಇಂಡಿಯಾ ಈವರೆಗೆ ಏಕದಿನ ಕ್ರಿಕೆಟ್ನಲ್ಲಿ 11 ವೈಟ್ವಾಷ್ ಮಾಡಿದೆ. ಕೊಹ್ಲಿ ಮತ್ತು ಧೋನಿ ತಮ್ಮ ನಾಯಕತ್ವದಡಿಯಲ್ಲಿ ಮೂರು ಬಾರಿ ಎದುರಾಳಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದ್ದಾರೆ. ಇದೇ ಸಾಲಿನಲ್ಲಿ ದಿಲೀಪ್ ವೆಂಗಾಸ್ಕರ್, ಮೊಹಮ್ಮದ್ ಸಜರುದ್ದೀನ್ ಮತ್ತು ಗೌತಮ್ ಗಂಭೀರ್ ಹೆಸರು ಕೂಡ ಇದೆ.
ಇನ್ನು ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ನಿಂದಲೂ ನೂತನ ದಾಖಲೆ ಮಾಡಲು ಸಜ್ಜಾಗಿದ್ದಾರೆ. ಇವರ ಖಾತೆಯಿಂದ ಕೇವಲ 1 ಸಿಕ್ಸ್ ಸಿಡಿದರೆ ಭಾರತದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಧೋನಿ ದಾಖಲೆ ಹಿಂದಿಕ್ಕಲಿದ್ದಾರೆ. ಎಂಎಸ್ಡಿ 113 ಇನ್ನಿಂಗ್ಸ್ಗಳಲ್ಲಿ 116 ಸಿಕ್ಸ್ ಬಾರಿಸಿದ್ದರೆ ರೋಹಿತ್ 68 ಇನ್ನಿಂಗ್ಸ್ಗಳಲ್ಲಿ ಇಷ್ಟೇ ಸಿಕ್ಸ್ ಸಿಡಿಸಿದ್ದಾರೆ. ಅಂತೆಯೆ ರೋಹಿತ್ ಇನ್ನು 5 ಸಿಕ್ಸ್ ಸಿಡಿಸಿದರೆ ಭಾರತ ಪರ ಏಕದಿನ ಕ್ರಿಕೆಟ್ನಲ್ಲಿ 250 ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.
ಟೀಮ್ ಇಂಡಿಯಾ ಸರಣಿ ಕ್ಲೀನ್ಸ್ವೀಪ್ ಮಾಡುವತ್ತ ಚಿತ್ತ ನೆಟ್ಟಿದೆ. ಇತ್ತ ಪ್ರವಾಸಿ ಕೆರಿಬಿಯನ್ನರು ಕನಿಷ್ಠ ಒಂದು ಪಂದ್ಯವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳುವ ಪ್ಲಾನ್ನಲ್ಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 6 ವಿಕೆಟ್ಗಳಿಂದ ಗೆದ್ದರೆ, ಬುಧವಾರ ಮುಕ್ತಾಯಗೊಂಡ ಎರಡನೇ ಕದನಲ್ಲಿ 44 ರನ್ಗಳಿಂದ ಜಯಿಸಿತು. ಹೀಗೆ ಎರಡೂ ಪಂದ್ಯದಲ್ಲಿ ರೋಹಿತ್ (Rohit Sharma) ಪಡೆ ಗೆದ್ದು ಬೀಗಿದ್ದು ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಬೌಲರ್ಗಳ ಅದ್ಭುತ ಪ್ರದರ್ಶನದಿಂದ ಜಯ ಸಾಧಿಸಿತ್ತು. ಬ್ಯಾಟಿಂಗ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ. ಹೀಗಾಗಿ ಈ ಕದನದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
Ajinkya Rahane: ಟೀಮ್ ಇಂಡಿಯಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅಜಿಂಕ್ಯಾ ರಹಾನೆ: ಏನು ಹೇಳಿದ್ರು?
PKL 8: ಪ್ಲೇ ಆಫ್ಗೆ ಲಗ್ಗೆಯಿಟ್ಟ ಪಾಟ್ನಾ ಪೈರೇಟ್ಸ್: ಬೆಂಗಾಲ್ ವಾರಿಯರ್ -ದಬಾಂಗ್ ದಿಲ್ಲಿ ಪಂದ್ಯ ರೋಚಕ ಟೈ