ಹಿಟ್‌ಮ್ಯಾನ್ ಸಾಮ್ರಾಜ್ಯ ವಿಸ್ತರಣೆ! ಅಮೆರಿಕದಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ರೋಹಿತ್ ಶರ್ಮಾ
Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ‘ಕ್ರಿಕಿಂಗ್‌ಡಮ್’ ಹೆಸರಿನ ತಮ್ಮ ಕ್ರಿಕೆಟ್ ಅಕಾಡೆಮಿಯ ಹೊಸ ಬ್ರ್ಯಾಂಚ್ವೊಂದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಪ್ರಾರಂಭಿಸಲಿದ್ದಾರೆ.
ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ‘ಕ್ರಿಕಿಂಗ್‌ಡಮ್’ ಹೆಸರಿನ ತಮ್ಮ ಕ್ರಿಕೆಟ್ ಅಕಾಡೆಮಿಯ ಹೊಸ ಬ್ರ್ಯಾಂಚ್ವೊಂದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ (USA) ದಲ್ಲಿ ಪ್ರಾರಂಭಿಸಲಿದ್ದಾರೆ. ವಾಸ್ತವವಾಗಿ ರೋಹಿತ್ ಶರ್ಮಾ, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದು, ಕ್ರಿಕಿಂಗ್‌ಡಮ್ (Crickingdom) ಹೆಸರಿನ ಅವರ ಕ್ರಿಕೆಟ್ ಅಕಾಡೆಮಿ ಭಾರತದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಇದೀಗ ತನ್ನ ಕ್ರಿಕೆಟ್ ಅಕಾಡೆಮಿಯ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗಿರುವ ರೋಹಿತ್, ತನ್ನ ಕ್ರಿಕೆಟ್ ಅಕಾಡೆಮಿ ಕೆಲಸಕ್ಕಾಗಿ ಯುಎಸ್‌ಎಗೆ ಭೇಟಿ ನೀಡಿದ್ದರು. ಈ ವೇಳೆ ಭಾರತ ತಂಡದ ನಾಯಕನಿಗೆ ಯುಎಸ್‌ಎಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಕ್ಕಿತ್ತು. ಇದೀಗ ಆ ಕಾರ್ಯಕ್ರಮದ ವೀಡಿಯೊ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಮೇರಿಕಾದಲ್ಲಿ ಅಕಾಡೆಮಿ
ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಆಡಿ ಮುಗಿಸಿದ ಭಾರತ ತಂಡದ ನಾಯಕ ಪ್ರಸ್ತುತ ವಿಶ್ರಾಂತಿಯಲ್ಲಿದ್ದಾರೆ. ಈ ಬಾರಿ ಏಷ್ಯಾಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಇರಾದೆಯೊಂದಿಗೆ ತಯಾರಿ ಆರಂಭಿಸಿರುವ ರೋಹಿತ್ ಈ ಪಂದ್ಯಾವಳಿಗೂ ಮುನ್ನ ಅಮೆರಿಕಾಗೆ ತೆರಳಿದ್ದು, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ಹಾಗೆಯೇ ತಮ್ಮ ಅಕಾಡೆಮಿ ನಿರ್ಮಾಣದ ಬಗ್ಗೆಯೂ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ರೋಹಿತ್ ವಿದೇಶದಲ್ಲಿ ಕ್ರಿಕೆಟ್ ಅಕಾಡೆಮಿ ತೆರೆಯುತ್ತಿರುವುದು ಇದೇ ಮೊದಲಲ್ಲ. ಅಮೇರಿಕಾಕ್ಕೂ ಮೊದಲು ರೋಹಿತ್, ಸಿಂಗಾಪುರ ಮತ್ತು ಜಪಾನ್ನಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಹೊಂದಿದ್ದಾರೆ.
Rohit Sharma's craze in USA…!!!
A great fan following for Hitman. pic.twitter.com/IpXMHrqWUe
— Johns. (@CricCrazyJohns) August 6, 2023
He's here! Woo hoo! #RohitSharma? #Cricket #TeamIndia #BayArea pic.twitter.com/L3SahNXtid
— Raghav Nelli (@rnelli) August 5, 2023
IND vs WI: ಅಭ್ಯಾಸಕ್ಕೆ ಗೈರು; ಹೀಗಾದರೆ ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳುವುದು ಯಾವಾಗ?
ಅಮೇರಿಕಾದಲ್ಲಿ ಕ್ರಿಕೆಟ್ ಅಲೆ
ವಾಸ್ತವವಾಗಿ ಕ್ರಿಕೆಟ್ ಗಾಳಿಯೇ ಸುಳಿಯದ ಅಮೇರಿಕಾದಲ್ಲಿ ರೋಹಿತ್ ಶರ್ಮಾ ಕ್ರಿಕೆಟ್ ಅಕಾಡೆಮಿ ತೆರೆಯಲು ಕಾರಣವೂ ಇದೆ. ಇತರೆ ಕ್ರೀಡೆಗಳಿಗೆ ಹೋಲಿಸಿದರೆ, ಅಮೇರಿಕಾದಲ್ಲಿ ಕ್ರಿಕೆಟ್ ಮೇಲಿರುವ ಕ್ರೇಜ್ ತೀರ ಕಡಿಮೆ. ಪ್ರಸ್ತುತ ಕ್ರೀಡೆಗಳಲ್ಲಿ ಫುಟ್ಬಾಲ್ ಬಿಟ್ಟರೆ, ಅತಿ ಜನಪ್ರಿಯ ಕ್ರೀಡೆಯಿಂದರೆ ಅದು ಕ್ರಿಕೆಟ್. ಹೀಗಾಗಿ ಅಮೇರಿಕಾದಲ್ಲೂ ಕ್ರಿಕೆಟ್ ಜನಪ್ರಿಯತೆಯನ್ನು ಹೆಚ್ಚಿಸಲು ಅಲ್ಲಿನ ಸರ್ಕಾರ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಫಲವಾಗಿ ಮುಂದಿನ ವರ್ಷ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ ಅಮೇರಿಕಾ ಆಥಿತ್ಯವಹಿಸುತ್ತಿದೆ.
ಇದಲ್ಲದೆ, ಇತ್ತೀಚೆಗಷ್ಟೇ ಅಮೆರಿಕದಲ್ಲಿ ಫ್ರಾಂಚೈಸಿ ಟಿ20 ಲೀಗ್ ಅನ್ನು ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಮೇಜರ್ ಲೀಗ್ ಕ್ರಿಕೆಟ್ ಹೆಸರಿನೊಂದಿಗೆ ಆರಂಭದ ಈ ಟೂರ್ನಿಯ ಮೊದಲ ಪ್ರಶಸ್ತಿಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ನ್ಯೂಯಾರ್ಕ್ ಗೆದ್ದುಕೊಂಡಿತು. ಈ ಲೀಗ್ಗೆ ಅಮೇರಿಕಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು. ಇದನ್ನು ಗಮನಿಸಿದ ನಾಯಕ ರೋಹಿತ್ ಇದೀಗ ಅಮೇರಿಕಾದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಲು ತಯಾರಿ ನಡೆಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ