Rohit Sharma: ದ್ವಿತೀಯ ಟೆಸ್ಟ್ ಮುಗಿದ ಬಳಿಕ ರೋಹಿತ್ ಶರ್ಮಾ ಏನು ಹೇಳಿದರು ಗೊತ್ತೇ?: ಇಲ್ಲಿದೆ ನೋಡಿ

| Updated By: Vinay Bhat

Updated on: Mar 15, 2022 | 9:42 AM

IND vs SL 2nd Test: ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಎರಡೂ ಟೆಸ್ಟ್ ಸರಣಿಯಲ್ಲಿ ಸ್ಫೋಟಕ ಆಟವಾಡಿದ ರಿಷಭ್ ಪಂತ್ ಸರಣಿಶ್ರೇಷ್ಠ ತಮ್ಮದಾಗಿಸಿದರು. ಪಂದ್ಯ ಮುಗಿದ ಬಳಿಕ ಆಟಗಾರರ ಪ್ರದರ್ಶನದ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.

Rohit Sharma: ದ್ವಿತೀಯ ಟೆಸ್ಟ್ ಮುಗಿದ ಬಳಿಕ ರೋಹಿತ್ ಶರ್ಮಾ ಏನು ಹೇಳಿದರು ಗೊತ್ತೇ?: ಇಲ್ಲಿದೆ ನೋಡಿ
rohit sharma post match presentation
Follow us on

ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ (India vs Sri Lanka) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಧೂಳಿಪಟವಾದ ಸಿಂಹಳೀಯರು ಹೀನಾಯ ಸೋಲು ಕಂಡರೆ, ಭಾರತ 238 ರನ್​​ಗಳ ಅಮೋಘ ಜಯ ಸಾಧಿಸಿತು. ಈ ಮೂಲಕ ಕಳೆದ 10 ವರ್ಷಗಳಲ್ಲಿ ತವರು ನೆಲದಲ್ಲಿ ಯಾವುದೇ ತಂಡದ ಎದುರು ಟೆಸ್ಟ್ ಸರಣಿ ಸೋಲದ ತನ್ನ ದಾಖಲೆಯನ್ನು ಮುಂದುವರೆಸಿತು. ಅಲ್ಲದೆ ತವರಿನಲ್ಲಿ ಸತತ 15 ಸರಣಿ ಗೆದ್ದ ಏಕೈಕ ತಂಡವಾಗಿ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ (Shreyas Iyer) ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಎರಡೂ ಟೆಸ್ಟ್ ಸರಣಿಯಲ್ಲಿ ಸ್ಫೋಟಕ ಆಟವಾಡಿದ ರಿಷಭ್ ಪಂತ್ ಸರಣಿಶ್ರೇಷ್ಠ ತಮ್ಮದಾಗಿಸಿದರು. ಪಂದ್ಯ ಮುಗಿದ ಬಳಿಕ ಆಟಗಾರರ ಪ್ರದರ್ಶನದ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಏನು ಹೇಳಿದರು ಎಂಬುದನ್ನು ಕೇಳಿ.

“ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ವೈಯಕ್ತಿಕವಾಗಿ ಹಾಗೂ ತಂಡವಾಗಿ ನಾನು ಈ ಗೆಲುವನ್ನು ಬಹಳಷ್ಟು ಸಂಭ್ರಮಿಸುತ್ತಿದ್ದೇನೆ. ನಾವು ಇಲ್ಲಿ ಏನೋ ಸಾಧಿಸಬೇಕು ಎಂಬ ಅಂಶದೊಂದಿಗೆ ಕಣಕ್ಕಿಳಿದೆವು. ಈ ಗೆಲುವಿನೊಂದಿಗೆ ಅದನ್ನು ಸಾಧಿಸಿದ್ದೇವೆ ಎಂದು ಭಾವಿಸುತ್ತೇನೆ. ಬ್ಯಾಟರ್ ಆಗಿ ರವೀಂದ್ರ ಜಡೇಜಾ ಅವರ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ. ಅವರು ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. 7ನೇ ಕ್ರಮಾಂಕದಲ್ಲಿ ಅವರು ಬಲಿಷ್ಠ ಬ್ಯಾಟರ್ ಆಗಿ ರೂಪುಗೊಂಡಿದ್ದು ಅವರ ಫೀಲ್ಡಿಂಗ್ ಹಾಗೂ ಬೌಲಿಂಗ್ ಕೂಡ ತಂಡಕ್ಕೆ ತುಂಬಾ ನೆರವಾಗುತ್ತಿದೆ. ಜಡೇಜಾ ಅವರನ್ನು ಎಲ್ಲ ಕೌಶಲ್ಯವಿದೆ”, ಎಂದು ಹೇಳಿದ್ದಾರೆ.

“ಶ್ರೇಯಸ್ ಅಯ್ಯರ್ ಅವರು ಟೆಸ್ಟ್ ಸರಣಿಯಲ್ಲಿ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳೊಂದಿಗೆ ಇನ್ನಷ್ಟು ಉತ್ತಮಗೊಳ್ಳುತ್ತಾರೆ. ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ದಿಗ್ಗಜರನ್ನು ತಂಡದಿಂದ ಕೈಬಿಟ್ಟ ನಂತರ ಆ ಜಾಗ ತುಂಬಲು ಶ್ರೇಯಸ್ ಅಯ್ಯರ್ ದೊಡ್ಡ ಜವಾಬ್ದಾರಿ ಹೊಂದಿದ್ದರು, ಸರಣಿಯಲ್ಲಿ ಅವರು ಅವಕಾಶ ಸದುಪಯೋಗ ಪಡಿಸಿಕೊಂಡಿದ್ದಾರೆ. ಟಿ20 ಸರಣಿಯಲ್ಲಿ ಕಂಡುಕೊಂಡಿದ್ದ ಅದ್ಭುತ ಫಾರ್ಮ್‌ಅನ್ನು ಶ್ರೇಯಸ್ ಐಯ್ಯರ್ ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಸಿದ್ದಾರೆ. ಭಾರತ ತಂಡ ಪ್ರಸ್ತುನ ನಡೆಯುತ್ತಿರಿವ ವಿಶ್ವ ಟೆಸ್ಟ್ ಚಾಂಫಿಯನ್‌ಶಿಪ್‌ನಲ್ಲಿ ಫೈನಲ್ ಹಂತಕ್ಕೇರುವುದು ನಮ್ಮ ಮುಂದಿರುವ ದೀರ್ಘ ಕಾಲದ ಗುರಿಯಾಗಿದೆ”, ಎಂಬುದು ಅವರ ಮಾತಾಗಿತ್ತು.

ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ಶ್ರೇಯಸ್ ಅಯ್ಯರ್ ಮಾತನಾಡಿ, “ಬ್ಯಾಟರ್​​ಗಳು ಕಷ್ಟ ಪಡುತ್ತಿರುವುದನ್ನು ನಾನು ನೋಡಿದೆ. ಹೀಗಾಗಿ ಅಟಾಕ್ ಮಾಡಲು ಮುಂದಾದೆ ಮತ್ತು ಬೌಲರ್​​ಗಳಿಗೆ ಒತ್ತಡ ಹೇರಲು ಪ್ರಯತ್ನ ಪಟ್ಟೆ. ನಾನು ಶತಕದ ಬಗ್ಗೆ ಚಿಂತಿಸುತ್ತಿರಲಿಲ್ಲ. ಆದಷ್ಟು ಹೆಚ್ಚಿನ ಬಾಲ್​ಗಳನ್ನು ಆಡಬೇಕು ಎಂಬುದಷ್ಟೆ ನನ್ನ ಗುರಿಯಾಗಿತ್ತು. ಯಾಕೆಂದರೆ ಅಂತಿಮ ವಿಕೆಟ್​​ನಲ್ಲಿ ಶಮಿ ಮತ್ತು ಬುಮ್ರಾ ನನಗೆ ಸಪೋರ್ಟ್ ನೀಡುತ್ತಾರೆ ಎಂಬ ನಂಬಿಕೆಯಿತ್ತು. ಭಾರತ ಟೆಸ್ಟ್ ತಂಡದ ಪರ ಆಡಬೇಕು ಎಂಬುದು ನನ್ನ ಕನಸಾಗಿತ್ತು. ಅದೀಗ ಈಡೇರಿದೆ. ಮುಂದೆ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನ ಪಡುತ್ತೇನೆ”, ಎಂದು ಹೇಳಿದರು.

ಇನ್ನು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ರಿಷಭ್ ಪಂತ್ ಮಾತನಾಡಿ, “ಈ ಹಿಂದೆ ನಾನು ತಪ್ಪುಗಳನ್ನು ಮಾಡಿದ್ದೇನೆ ಈಗ ಅದನ್ನು ಸರಿ ಪಡಿಸಿಕೊಂಡಿದ್ದೇನೆ. ಬ್ಯಾಟಿಂಗ್ ಮಾಡಲು ವಿಕೆಟ್ ಕಷ್ಟವಿದ್ದರೆ ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ಆದಷ್ಟು ಬೇಗ ರನ್ ಹಾಕುವುದನ್ನು ಎದುರು ನೋಡುತ್ತಿರುತ್ತೇನೆ. ನಾನು ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಅದು ತಂಡದ ಮ್ಯಾನೇಜ್ಮೆಂಟ್ ನಿರ್ಧಾರ. ನಾನೀಗ ತುಂಬಾ ಯೋಚಿಸುತ್ತೇನೆ. ಪ್ರತಿಯೊಂದು ಬಾಲ್ ಎದುರಿಸುವ ಮೊದಲು ಸರಿಯಾಗಿ ಗಮನಿಸುತ್ತೇನೆ”, ಎಂದು ಹೇಳಿದರು.

R Ashwin: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ 100 ವಿಕೆಟ್: ಆರ್. ಅಶ್ವಿನ್ ನೂತನ ದಾಖಲೆ

Sandeep Nangal: ಸ್ಟಾರ್ ಕಬಡ್ಡಿ ಪ್ಲೇಯರ್ ಸಂದೀಪ್ ನಂಗಲ್​ಗೆ ಗುಂಡಿಕ್ಕಿ ಬರ್ಬರ ಹತ್ಯೆಗೈದ ದುಷ್ಕರ್ಮಿಗಳು