IPL 2024: ಡ್ರೆಸ್ಸಿಂಗ್ ರೂಮ್ನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ: ಮುಂಬೈ ತಂಡದಲ್ಲಿ ಏನಾಗುತ್ತಿದೆ?
Rohit Sharma Crying MI vs SRH: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ 55ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಹಿತ್ ಶರ್ಮಾ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಪ್ರಭಾವ ಬೀರಲು ವಿಫಲರಾದರು. ಕೇವಲ 4 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆ ಬಳಿಕ ರೋಹಿತ್ ಡ್ರೆಸ್ಸಿಂಗ್ ರೂಮ್ನಲ್ಲಿ ಅಳುತ್ತಿರುವುದು ಕಂಡುಬಂತು.
ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಸೋಮವಾರ ನಡೆದ 55ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ (MI vs SRH) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಸೂರ್ಯಕುಮಾರ್ ಯಾದವ್ ಅವರ ಅಮೋಘ ಶತಕದ ನೆರವಿನಿಂದ ಮುಂಬೈ 174 ರನ್‌ಗಳ ಸವಾಲಿನ ಟಾರ್ಗೆಟ್ ಅನ್ನು 17.2 ಓವರ್ಗಳಲ್ಲಿ ಬೆನ್ನಟ್ಟಿತು. ಮುಂಬೈ ಜಯ ಕಂಡರೂ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಸಂತಸಗೊಂಡಿರಲಿಲ್ಲ. ಇವರು ಡ್ರೆಸ್ಸಿಂಗ್ ರೂಮ್ನಲ್ಲಿ ಅಳುತ್ತಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಪ್ರಭಾವ ಬೀರಲು ವಿಫಲರಾದರು. ಇವರು ಐಪಿಎಲ್ 2024 ರಲ್ಲಿ ಅಗ್ರ ರನ್ ಗಳಿಸಿರುವವರ ಸಾಲಿನಲ್ಲಿ 17 ನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದಂತೆ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಸದ್ಯ ಕಳಪೆ ಫಾರ್ಮ್ನಿಂದ ಕಂಗಡೆಟ್ಟಿದ್ದಾರೆ. ಸೋಮವಾರ ಎಸ್ಆರ್ಹೆಚ್ ವಿರುದ್ಧ ನೀಡಿದ ಕಳಪೆ ಪ್ರದರ್ಶನದ ನಂತರ ರೋಹಿತ್ ಡ್ರೆಸ್ಸಿಂಗ್ ರೂಮ್ನಲ್ಲಿ ಅಳುತ್ತಿರುವಂತೆ ಕಂಡುಬಂತು. ಇದರ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬೆಳ್ಳಂ ಬೆಳಗ್ಗೆ ಸಿಎಸ್ಕೆಗೆ ಬಿಗ್ ಶಾಕ್: ಐಪಿಎಲ್ನಿಂದ ಹೊರ ನಡೆದ ಸ್ಟಾರ್ ಆಟಗಾರ
ರೋಹಿತ್ ಶರ್ಮಾ ಕೇವಲ ಐದು ಎಸೆತಗಳನ್ನು ಆಡಿ ಒಂದು ಬೌಂಡರಿ ಗಳಿಸುವಲ್ಲಿ ಯಶಸ್ವಿಯಾದರಷ್ಟೆ. ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಹಿಟ್ಮ್ಯಾನ್ ಹೆನ್ರಿಚ್ ಕ್ಲಾಸೆನ್‌ಗೆ ಕ್ಯಾಚ್ ನೀಡಿ ಔಟಾದರು.
ರೋಹಿತ್ ಶರ್ಮಾ ಅಳುತ್ತಿರುವ ವೈರಲ್ ವಿಡಿಯೋ ಇಲ್ಲಿದೆ ನೋಡಿ:
Rohit was seen broken and crying for his string of worst performances in IPL 🥺💔
Hope he delivers big in WC 🤞 pic.twitter.com/JCNzXvETIW
— Vishwa (@itis_vishwa) May 6, 2024
If you are happy when someone cries, then humanity is dead inside you. Rohit Sharma will make a comeback once again and then you will not find a place to hide your shameless face. pic.twitter.com/vbikE3puFB
— Satya Prakash (@Satya_Prakash08) May 6, 2024
ಐಪಿಎಲ್ 2024 ರಲ್ಲಿ ರೋಹಿತ್ ಶರ್ಮಾ ಉತ್ತಮ ಆರಂಭವನ್ನು ಪಡೆದಿದ್ದರು. ತನ್ನ ಮೊದಲ ಏಳು ಇನ್ನಿಂಗ್ಸ್‌ಗಳಲ್ಲಿ 297 ರನ್ ಗಳಿಸಿದರು, ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 49 ಮತ್ತು ಸಿಎಸ್‌ಕೆ ವಿರುದ್ಧ ಅಜೇಯ 105 ರನ್ ಕೂಡ ಸಿಡಿಸಿದ್ದರು. ಆದಾಗ್ಯೂ, ಮುಂದಿನ ಐದು ಪಂದ್ಯಗಳಲ್ಲಿ, ರೋಹಿತ್ ನಾಲ್ಕು ಬಾರಿ ಒಂದಂಕಿ ಸ್ಕೋರ್‌ಗಳನ್ನು ಒಳಗೊಂಡಂತೆ ಗಳಿಸಿದ್ದು ಕೇವಲ 34 ರನ್‌ಗಳನ್ನು ಮಾತ್ರ. ಐಪಿಎಲ್ 2024 ರ ಬಳಿಕ ಭಾರತೀಯ ಆಟಗಾರರು ಟಿ20 ವಿಶ್ವಕಪ್ಗಾಗಿ ಯುಎಸ್ಎಗೆ ತೆರಳುವ ಮೊದಲು ರೋಹಿತ್ಗೆ ಫಾರ್ಮ್ ಕಂಡುಕೊಳ್ಳಲು ಇನ್ನೂ ಎರಡು ಅವಕಾಶಗಳಿವೆ. ಮುಂಬೈ ಮೇ 11 ಮತ್ತು 17 ರಂದು ಕ್ರಮವಾಗಿ ಕೆಕೆಆರ್ ಮತ್ತು ಲಖನೌ ವಿರುದ್ಧ ಆಡಲಿದೆ.
ಐಪಿಎಲ್ನಲ್ಲಿಂದು ಡೆಲ್ಲಿ-ರಾಜಸ್ಥಾನ್ ಸೆಣೆಸಾಟ: ಯಾರು ಗೆದ್ದರೆ ಯಾರಿಗೆ ಸಹಕಾರಿ?
ಸೋಮವಾರದಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಶತಕದೊಂದಿಗೆ ಮುಂಬೈ ಇಂಡಿಯನ್ಸ್ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ಅನ್ನು 173 ರನ್ಗೆ ಕಟ್ಟಿ ಹಾಕುವಲ್ಲಿ ಹಾರ್ದಿಕ್ ಪಡೆ ಯಶಸ್ವಿಯಾಯಿತು. ಸೂರ್ಯಕುಮಾರ್ ಅವರು 51 ಎಸೆತಗಳಲ್ಲಿ ಅಜೇಯ 102, ತಿಲಕ್ ವರ್ಮಾ ಅವರ 32 ಎಸೆತಗಳಲ್ಲಿ 37 ರನ್‌ಗಳ ಕೊಡುಗೆಯೊಂದಿಗೆ 143 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟವನ್ನು ಆಡಿದರು.
ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ