RCB vs PBKS, IPL 2021: ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಆರ್​ಸಿಬಿಗೆ ಬೇಕು ಗೆಲುವು: ಪಂಜಾಬ್ ಸೋತರೆ ಟೂರ್ನಿಯಿಂದ ಔಟ್

| Updated By: Vinay Bhat

Updated on: Oct 03, 2021 | 7:16 AM

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಮತ್ತು ಪಂಜಾಬ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

RCB vs PBKS, IPL 2021: ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಆರ್​ಸಿಬಿಗೆ ಬೇಕು ಗೆಲುವು: ಪಂಜಾಬ್ ಸೋತರೆ ಟೂರ್ನಿಯಿಂದ ಔಟ್
RCB vs PBKS
Follow us on

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2021) ಸೂಪರ್ ಸಂಡೆಯ ಎರಡು ಪಂದ್ಯಗಳು ನಡೆಯಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಲಿರುವ ಮೊದಲ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (Punjab Kings) ತಂಡಗಳು ಸೆಣೆಸಾಟ ನಡೆಸಲಿವೆ. ಉಭಯ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಲ್ಲಿರುವ ಆರ್​ಸಿಬಿ (RCB) ತಂಡ ಪಂಜಾಬ್‌ ಅನ್ನು ಮಣಿಸಿ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ. ಇತ್ತ ರಾಹುಲ್‌ (PBKS) ಪಡೆಗೆ ಗೆದ್ದರಷ್ಟೇ ಮುಂದಿನ ಹಂತಕ್ಕೇರಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಸೋತರೆ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ.

ಇಲ್ಲಿವರೆಗೂ ಆಡಿರುವ ಒಟ್ಟು 11 ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ 7 ರಲ್ಲಿ ಗೆದ್ದು ಇನ್ನುಳಿದ 4ರಲ್ಲಿ ಸೋಲು ಅನುಭವಿಸಿದೆ. ಒಟ್ಟು 14 ಅಂಕಗಳನ್ನು ಕಲೆ ಹಾಕಿರುವ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, -0.200 ರಷ್ಟು ಆರ್‌ಸಿಬಿಯ ರನ್‌ರೇಟ್‌ ಮೈನಸ್‌ನಲ್ಲಿದೆ. ಆದರೂ ಇನ್ನೊಂದು ಪಂದ್ಯದಲ್ಲಿ ಕೊಹ್ಲಿ ಪಡೆ ಗೆದ್ದರೆ, ನಾಕೌಟ್‌ ಟಿಕೆಟ್‌ ಪಡೆದುಕೊಳ್ಳಲಿದೆ. ಇತ್ತ ಪಂಜಾಬ್ ಆಡಿರುವ 12 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಮತ್ತು ಏಳು ಪಂದ್ಯಗಳಲ್ಲಿ ಸೋಲು ಕಂಡಿದೆ. 10 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ. -0.236 ರಷ್ಟು ರಾಹುಲ್ ಪಡೆಯ ರನ್​ರೇಟ್ ಕೂಡ ಮೈನಸ್​ನಲ್ಲಿದೆ.

ಆರ್​ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬೊಂಬಾಟ್ ಆರಂಭ ಒದಗಿಸುತ್ತಿರುವುದು ಪಾಸಿಟಿವ್ ಸೈನ್ ಆಗಿದೆ. ಇದರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶ್ರೀಕರ್ ಭರತ್ ಭರವಸೆ ಮೂಡಿಸಿದ್ದಾರೆ. ಪ್ರಚಂಡ ಫಾರ್ಮ್​ಗೆ ಮರಳಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದಾರೆ. ಆದರೆ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಅರಬ್‌ ನಾಡಿನಲ್ಲಿ ಅಬ್ಬರಿಸಲು ವಿಫ‌ಲರಾಗಿರುವುದು ಆರ್‌ಸಿಬಿಗೆ ಹಿನ್ನಡೆ ಎಂಬುದರಲ್ಲಿ ಆನುಮಾನವಿಲ್ಲ. ನಂತರ ಬರುವ ಬ್ಯಾಟರ್​ಗಳ ಮೇಲೆ ನಿರೀಕ್ಷೆಯೂ ಇಲ್ಲ.

ಈಗಾಗಲೇ ಪರ್ಪಲ್‌ ಕ್ಯಾಪ್‌ ಏರಿಸಿಕೊಂಡಿರುವ ಹರ್ಷಲ್‌ ಪಟೇಲ್‌ ಡೆತ್ ಓವರ್​ನಲ್ಲಿ ಅದ್ಭುತವಾಗಿ ಗೋಚರಿಸಿದ್ದಾರೆ. ಯುಜ್ವೇಂದ್ರ ಚಹಾಲ್ ಸ್ಪಿನ್ ಮೋಡಿ ಸಖತ್ ವರ್ಕೌಟ್ ಆಗುತ್ತಿದ್ದು, ಶಹ್ಬಾಜ್ ಅಹ್ಮದ್ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಇವರಿಗೆ ಸಾಥ್ ನೀಡಬೇಕಿದೆ.

ಇತ್ತ ಪಂಜಾಬ್ ಕಿಂಗ್ಸ್​ನಲ್ಲಿ ಓಪನರ್​ಗಳಾದ ಕೆ. ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮಿಂಚದಿದ್ದರೆ ಪಂದ್ಯ ಅರ್ಧದಷ್ಟು ಕಳೆದುಕೊಂಡಂತೆ. ನಿಕೋಲಸ್ ಪೂರನ್ ಫಾರ್ಮ್ ಕಳೆದುಕೊಂಡಿದ್ದಾರೆ. ಆ್ಯಡೆನ್ ಮರ್ಕ್ರಮ್ ಕೆಲವೊಂದು ಪಂದ್ಯದಲ್ಲಿ ಮಾತ್ರ ಮಿಂಚುತ್ತಿದ್ದಾರೆ. ಶಾರುಕ್ ಖಾನ್ ಹಾಗೂ ಹರ್ಪ್ರೀತ್ ಬ್ರರ್ ಕೂಡ ತಂಡಕ್ಕೆ ಇನ್ನಷ್ಟು ಕೊಡುಗೆ ನೀಡಿದರೆ ಮಾತ್ರ ಗೆಲುವು ಸಾಧ್ಯ. ಬೌಲಿಂಗ್​ನಲ್ಲೂ ಪಂಜಾಬ್ ಪರ ರವಿ ಬಿಷ್ಟೋಯಿ ಬಿಟ್ಟರೆ ಮತ್ಯಾರು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಮತ್ತು ಪಂಜಾಬ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021: ಕೊನೆಯ ಬಾಲ್​ನಲ್ಲಿ ಸಿಕ್ಸರ್! ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ರುತುರಾಜ್ ಗಾಯಕ್ವಾಡ್

(Royal Challengers Bangalore RCB will clash against Punjab Kings in today IPL 2021 Match)