- Kannada News Photo gallery Cricket photos Ms dhoni completes 200 matches as captain in ipl first player to do so
IPL 2021: ಐಪಿಎಲ್‌ನಲ್ಲಿ ಧೋನಿ ದ್ವಿಶತಕ! ಈ ಸಾಧನೆ ಮಾಡಿದ ಮೊದಲ ಆಟಗಾರ ಮಹೀ
IPL 2021: ಧೋನಿ ಐಪಿಎಲ್‌ನಲ್ಲಿ 200 ಪಂದ್ಯಗಳಲ್ಲಿ ನಾಯಕನಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಇಂದು ಐಪಿಎಲ್‌ನಲ್ಲಿ 200 ನೇ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ.
Updated on: Oct 02, 2021 | 9:11 PM

IPL 2021 RR vs CSK Rajasthan Royals faces a must-win game against Chennai Super Kings

ಧೋನಿ ಐಪಿಎಲ್‌ನಲ್ಲಿ 200 ಪಂದ್ಯಗಳಲ್ಲಿ ನಾಯಕನಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಇಂದು ಐಪಿಎಲ್‌ನಲ್ಲಿ 200 ನೇ ಪಂದ್ಯದಲ್ಲಿ ನಾಯಕನಾಗಿ ಇಳಿಯುತ್ತಿದ್ದಾರೆ. ಚೆನ್ನೈ ಹೊರತುಪಡಿಸಿ, ಧೋನಿ ಐಪಿಎಲ್‌ನಲ್ಲಿ ಒಂದು ಋತುವಿನಲ್ಲಿ ರೈಸಿಂಗ್ ಪುಣೆ ಸೂಪರ್‌ಜೆಂಟ್ಸ್ ತಂಡದ ನಾಯಕತ್ವ ವಹಿಸಿದ್ದರು. ಅವರು ಐಪಿಎಲ್‌ನಲ್ಲಿ ಹೆಚ್ಚು ನಾಯಕತ್ವ ವಹಿಸಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧೋನಿಯ ನಾಯಕತ್ವದಲ್ಲಿ ಚೆನ್ನೈ 2010, 2011 ಮತ್ತು 2018 ರಲ್ಲಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಇದರ ಹೊರತಾಗಿ, ಅವರು ಐದು ಬಾರಿ ರನ್ನರ್ ಅಪ್ ಆಗಿದ್ದಾರೆ. 2008 ರಲ್ಲಿ ಅವರು ಫೈನಲ್ ಆಡಿದರು ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ. ಅವರು 2012, 2013 ರಲ್ಲಿ ರನ್ನರ್ ಅಪ್ ಕೂಡ ಆಗಿದ್ದರು. 2015 ರಲ್ಲಿ ಅವರು ಮತ್ತೆ ಪ್ರಶಸ್ತಿಯನ್ನು ಕಳೆದುಕೊಂಡರು, 2019 ರಲ್ಲಿಯೂ ಅವರು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಧೋನಿ .

ಧೋನಿ ನಂತರ, ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವ ವಹಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನಾಯಕತ್ವ ವಹಿಸಿದ್ದಾರೆ. ಅವರು ಇದುವರೆಗೆ 136 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಅವರ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ 129 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ.




