RCB vs GG, WPL 2023: ಸೋಫಿ ಡಿವೈನ್ ಸಿಡಿಲಬ್ಬರ: ಆರ್​ಸಿಬಿಗೆ ಭರ್ಜರಿ ಜಯ

TV9 Digital Desk

| Edited By: Zahir Yusuf

Updated on:Mar 18, 2023 | 10:38 PM

Royal Challengers Bangalore vs Gujarat Giants: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

RCB vs GG, WPL 2023: ಸೋಫಿ ಡಿವೈನ್ ಸಿಡಿಲಬ್ಬರ: ಆರ್​ಸಿಬಿಗೆ ಭರ್ಜರಿ ಜಯ
RCB vs GG

RCB vs GG, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್​ ಕಲೆಹಾಕಿತು. 189 ರನ್​ಗಳ ಕಠಿಣ ಗುರಿ ಪಡೆದ ಆರ್​ಸಿಬಿ ತಂಡಕ್ಕೆ ಸೋಫಿ ಡಿವೈನ್ ಸಿಡಿಲಬ್ಬರದ ಆರಂಭ ಒದಗಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಡಿವೈನ್ ಸ್ಮೃತಿ ಮಂಧಾನ ಜೊತೆಗೂಡಿ ಮೊದಲ ವಿಕೆಟ್​ಗೆ 125 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 37 ರನ್​ ಬಾರಿಸಿ ಸ್ಮೃತಿ ಮಂಧಾನ ಔಟಾದರು. ಆದರೆ ಮತ್ತೊಂದೆಡೆ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದ ಸೋಫಿ ಡಿವೈನ್ ಸಿಕ್ಸರ್​ಗಳ ಸುರಿಮಳೆಗೈದರು. ಆರ್​ಸಿಬಿ ಗೆಲುವಿನತ್ತ ಮುಖ ಮಾಡಿತು. ಈ ಹಂತದಲ್ಲಿ ಕೇವಲ 1 ರನ್​ನಿಂದ ಸೋಫಿ ಡಿವೈನ್ ಶತಕ ವಂಚಿತರಾದರು. 36 ಎಸೆತಗಳನ್ನು ಎದುರಿಸಿದ ಡಿವೈನ್ ಕೇವಲ 36 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ 9 ಫೋರ್​ನೊಂದಿಗೆ 99 ರನ್​ಗಳಿಸಿ ಗೆಲುವಿನ ರುವಾರಿ ಎನಿಸಿಕೊಂಡರು.

ಸೋಫಿ ಡಿವೈನ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್​ಸಿಬಿ ತಂಡವು 15.3 ಓವರ್​ಗಳಲ್ಲಿ 189 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಗುಜರಾತ್ ಜೈಂಟ್ಸ್​- 188/4 (20)

ಆರ್​ಸಿಬಿ- 189/2 (15.3)

 

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್

ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ್ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ

LIVE NEWS & UPDATES

The liveblog has ended.
 • 18 Mar 2023 10:32 PM (IST)

  RCB vs GG Live Score, WPL 2023: ಆರ್​ಸಿಬಿ ಭರ್ಜರಿ ಜಯ

  GGT 188/4 (20)

  RCBW 189/2 (15.3)

   

  ಆರ್​ಸಿಬಿಗೆ 8 ವಿಕೆಟ್​ಗಳ ಭರ್ಜರಿ ಜಯ
 • 18 Mar 2023 10:27 PM (IST)

  RCB vs GG Live Score, WPL 2023: 14 ಓವರ್ ಮುಕ್ತಾಯ

  RCBW 176/2 (14)

   ಕ್ರೀಸ್​ನಲ್ಲಿ ಹೀದರ್​ನೈಟ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್

 • 18 Mar 2023 10:18 PM (IST)

  RCB vs GG Live Score, WPL 2023: ಶತಕ ವಂಚಿತ ಸೋಫಿ ಡಿವೈನ್

  ಕೇವಲ 36 ಎಸೆತಗಳಲ್ಲಿ 99 ರನ್​ ಬಾರಿಸಿ ಔಟಾದ ಸೋಫಿ ಡಿವೈನ್

  ಕಿಮ್ ಗಾರ್ತ್ ಎಸೆತದಲ್ಲಿ ಕ್ಯಾಚ್ ನೀಡಿ 1 ರನ್​ನಿಂದ ಶತಕ ವಂಚಿತರಾದ ನ್ಯೂಜಿಲೆಂಡ್ ಆಟಗಾರ್ತಿ

  RCBW 157/2 (11.5)

    

 • 18 Mar 2023 10:15 PM (IST)

  RCB vs GG Live Score, WPL 2023: ಆಕರ್ಷಕ ಬೌಂಡರಿ

  ಕಿಮ್ ಗಾರ್ತ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಸೋಫಿ ಡಿವೈನ್

  RCBW 153/1 (11.1)

    

 • 18 Mar 2023 10:08 PM (IST)

  RCB vs GG Live Score, WPL 2023: 10 ಓವರ್ ಮುಕ್ತಾಯ

  RCBW 131/1 (10)

   ಕ್ರೀಸ್​ನಲ್ಲಿ ಸೋಫಿ ಡಿವೈನ್-ಎಲ್ಲಿಸ್ ಪೆರ್ರಿ ಬ್ಯಾಟಿಂಗ್

 • 18 Mar 2023 10:05 PM (IST)

  RCB vs GG Live Score, WPL 2023: ಆರ್​ಸಿಬಿ ಮೊದಲ ವಿಕೆಟ್ ಪತನ

  ಸ್ನೇಹ್ ರಾಣಾ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿ ಹೊರನಡೆದ ಸ್ಮೃತಿ ಮಂಧಾನ (37)

  RCBW 125/1 (9.2)

    

 • 18 Mar 2023 10:03 PM (IST)

  RCB vs GG Live Score, WPL 2023: ಸಿಕ್ಸ್​ಗಳ ಸುರಿಮಳೆ

  ತನುಜಾ ಓವರ್​ನಲ್ಲಿ ಮೂರು ಸಿಕ್ಸ್​ ಬಾರಿಸಿದ ಸೋಫಿ ಡಿವೈನ್

  ಇದುವರೆಗೆ ಒಟ್ಟು 7 ಸಿಕ್ಸ್ ಬಾರಿಸಿರುವ ನ್ಯೂಜಿಲೆಂಡ್ ಆಟಗಾರ್ತಿ ಸೋಫಿ ಡಿವೈನ್

  RCBW 125/0 (9)

    

 • 18 Mar 2023 10:02 PM (IST)

  RCB vs GG Live Score, WPL 2023: ಮತ್ತೊಂದು ಸಿಕ್ಸ್

  ತನುಜಾ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಬಾರಿಸಿದ ಸೋಫಿ ಡಿವೈನ್

  RCBW 119/0 (8.5)

    

 • 18 Mar 2023 10:01 PM (IST)

  RCB vs GG Live Score, WPL 2023: ವಾವ್ಹ್...ವಾಟ್ ಎ ಸಿಕ್ಸ್

  ತನುಜಾ ಕನ್ವರ್ ಎಸೆತದಲ್ಲಿ 94 ಮೀಟರ್ ದೂರದ ಸಿಕ್ಸ್ ಸಿಡಿಸಿದ ಸೋಫಿ ಡಿವೈನ್

  RCBW 109/0 (8.3)

    

 • 18 Mar 2023 09:59 PM (IST)

  RCB vs GG Live Score, WPL 2023: ಅರ್ಧಶತಕ ಪೂರೈಸಿದ ಸೋಫಿ ಡಿವೈನ್

  ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೋಫಿ ಡಿವೈನ್

  RCBW 100/0 (8)

   

 • 18 Mar 2023 09:47 PM (IST)

  RCB vs GG Live Score, WPL 2023: ಪವರ್​ಪ್ಲೇ ಮುಕ್ತಾಯ

  ಮೊದಲ 6 ಓವರ್​ಗಳಲ್ಲಿ 77 ರನ್​ ಕಲೆಹಾಕಿದ ಸೋಫಿ ಡಿವೈನ್-ಸ್ಮೃತಿ ಮಂಧಾನ

  ಸ್ಪೋಟಕ ಆರಂಭ ಪಡೆದ ಆರ್​ಸಿಬಿ

  RCBW 77/0 (6)

   

 • 18 Mar 2023 09:39 PM (IST)

  RCB vs GG Live Score, WPL 2023: 4 ಓವರ್ ಮುಕ್ತಾಯ

  RCBW 57/0 (4)

  ಕ್ರೀಸ್​ನಲ್ಲಿ ಸೋಫಿ ಡಿವೈನ್-ಸ್ಮೃತಿ ಮಂಧಾನ ಬ್ಯಾಟಿಂಗ್

 • 18 Mar 2023 09:37 PM (IST)

  RCB vs GG Live Score, WPL 2023: ಅರ್ಧಶತಕ ಪೂರೈಸಿದ ಆರ್​ಸಿಬಿ

  ತನುಜಾ ಎಸೆದ ನೋಬಾಲ್​ಗೆ ಬೌಂಡರಿ ಉತ್ತರ ನೀಡಿದ ಸ್ಮೃತಿ ಮಂಧಾನ

  RCBW 51/0 (3.3)

   

 • 18 Mar 2023 09:36 PM (IST)

  RCB vs GG Live Score, WPL 2023: ಸ್ಮೃತಿ ಸಿಕ್ಸ್

  ತನುಜಾ ಕನ್ವರ್ ಎಸೆತದಲ್ಲಿ ಆಕರ್ಷಕ ಸಿಕ್ಸ್ ಬಾರಿಸಿದ ಸ್ಮೃತಿ ಮಂಧಾನ

  RCBW 46/0 (3.3)

   

 • 18 Mar 2023 09:30 PM (IST)

  RCB vs GG Live Score, WPL 2023: 24 ರನ್

  ಗಾರ್ಡ್ನರ್ ಎಸೆದ ಓವರ್​ನಲ್ಲಿ 24 ರನ್​ ಚಚ್ಚಿದ ಸೋಫಿ ಡಿವೈನ್

  RCBW 37/0 (2)

   

 • 18 Mar 2023 09:29 PM (IST)

  RCB vs GG Live Score, WPL 2023: ಭರ್ಜರಿ ಸಿಕ್ಸ್

  ಗಾರ್ಡ್ನರ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಸೋಫಿ ಡಿವೈನ್

  RCBW 33/0 (1.5)

   

 • 18 Mar 2023 09:29 PM (IST)

  RCB vs GG Live Score, WPL 2023: ಭರ್ಜರಿ ಸಿಕ್ಸ-ಫೋರ್

  ಗಾರ್ಡ್ನರ್ ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಹಾಗೂ 2 ಫೋರ್ ಬಾರಿಸಿದ ಸೋಫಿ ಡಿವೈನ್

  RCBW 27/0 (1.4)

   

 • 18 Mar 2023 09:07 PM (IST)

  RCB vs GG Live Score, WPL 2023: ಗುಜರಾತ್ ಜೈಂಟ್ಸ್ ಇನಿಂಗ್ಸ್ ಅಂತ್ಯ

  GGT 188/4 (20)

   ಆರ್​ಸಿಬಿಗೆ 189 ರನ್​ಗಳ ಬೃಹತ್ ಗುರಿ ನೀಡಿದ ಗುಜರಾತ್ ಜೈಂಟ್ಸ್

 • 18 Mar 2023 09:06 PM (IST)

  RCB vs GG Live Score, WPL 2023: ಭರ್ಜರಿ ಸಿಕ್ಸ್

  ಮೇಗನ್ ಶುಟ್ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹೇಮಲತಾ

  GGT 184/4 (19.5)

    

 • 18 Mar 2023 09:05 PM (IST)

  RCB vs GG Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

  ಮೇಗನ್ ಶುಟ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ಹರ್ಲೀನ್ ಡಿಯೋಲ್

  GGT 178/4 (19.4)

    

 • 18 Mar 2023 09:01 PM (IST)

  RCB vs GG Live Score, WPL 2023: ಉತ್ತಮ ಮೊತ್ತದತ್ತ ಗುಜರಾತ್ ಜೈಂಟ್ಸ್

  19 ಓವರ್ ಮುಕ್ತಾಯ

  GGT 166/4 (19)

   ಕ್ರೀಸ್​ನಲ್ಲಿ ಹರ್ಲೀನ್ ಡಿಯೋಲ್ - ಹೇಮಲತಾ ಬ್ಯಾಟಿಂಗ್

 • 18 Mar 2023 08:52 PM (IST)

  RCB vs GG Live Score, WPL 2023: 3ನೇ ವಿಕೆಟ್ ಪತನ

  42 ಎಸೆತಗಳಲ್ಲಿ 68 ರನ್​ ಬಾರಿಸಿ ಶ್ರೇಯಾಂಕ ಪಾಟೀಲ್​ಗೆ ವಿಕೆಟ್ ಒಪ್ಪಿಸಿದ ಲೌರಾ (68)

  GGT 156/3 (18)

   

 • 18 Mar 2023 08:40 PM (IST)

  RCB vs GG Live Score, WPL 2023: ಲೌರಾ ಅಬ್ಬರ

  ಮೇಗನ್ ಶುಟ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಹಾಗೂ ಫೋರ್ ಬಾರಿಸಿದ ಲೌರಾ

  GGT 134/2 (15.5)

    

 • 18 Mar 2023 08:35 PM (IST)

  RCB vs GG Live Score, WPL 2023: ಅರ್ಧಶತಕ ಪೂರೈಸಿದ ಲೌರಾ

  ಪೆರ್ರಿ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿ ಅರ್ಧಶತಕ ಪೂರೈಸಿದ ಲೌರಾ

  35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಲೌರಾ

  GGT 113/2 (14)

    

 • 18 Mar 2023 08:30 PM (IST)

  RCB vs GG Live Score, WPL 2023: ಶತಕ ಪೂರೈಸಿದ ಗುಜರಾತ್ ಜೈಂಟ್ಸ್

  ಪೆರ್ರಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಲೌರಾ

  GGT 103/2 (13.3)

    

 • 18 Mar 2023 08:27 PM (IST)

  RCB vs GG Live Score, WPL 2023: ವಾಟ್ ಎ ಸಿಕ್ಸ್

  ಆಶಾ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಗಾರ್ಡ್ನರ್

  GGT 97/2 (12.5)

    

 • 18 Mar 2023 08:21 PM (IST)

  RCB vs GG Live Score, WPL 2023: 2ನೇ ವಿಕೆಟ್ ಪತನ

  ಪ್ರೀತಿ ಬೋಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಹೊರ ನಡೆದ ಮೇಘನಾ (31)

  GGT 90/2 (11.5)

    

 • 18 Mar 2023 08:13 PM (IST)

  RCB vs GG Live Score, WPL 2023: 78 ರನ್

  ಮೊದಲ 10 ಓವರ್​ಗಳಲ್ಲಿ 78 ರನ್​ ಕಲೆಹಾಕಿದ ಗುಜರಾತ್ ಜೈಂಟ್ಸ್

  GGT 78/1 (10)

   ಕ್ರೀಸ್​ನಲ್ಲಿ ಲೌರಾ – ಮೇಘನಾ ಬ್ಯಾಟಿಂಗ್

 • 18 Mar 2023 08:09 PM (IST)

  RCB vs GG Live Score, WPL 2023: 9 ಓವರ್ ಮುಕ್ತಾಯ

  ಆಶಾ ಎಸೆತದಲ್ಲಿ ಹಿಂಬದಿತ್ತ ಸ್ವೀಪ್ ಶಾಟ್ ಫೋರ್ ಬಾರಿಸಿದ ಲೌರಾ

  GGT 66/1 (9)

    

  ಕ್ರೀಸ್​ನಲ್ಲಿ ಲೌರಾ - ಮೇಘನಾ ಬ್ಯಾಟಿಂಗ್

 • 18 Mar 2023 07:55 PM (IST)

  RCB vs GG Live Score, WPL 2023: ಪವರ್​ಪ್ಲೇ ಮುಕ್ತಾಯ

  ಎಲ್ಲಿಸ್ ಪೆರ್ರಿ ಎಸೆದ ಕೊನೆಯ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಲೌರಾ

  ಮೊದಲ 6 ಓವರ್​ಗಳಲ್ಲಿ 45 ರನ್​ ಕಲೆಹಾಕಿದ ಗುಜರಾತ್ ಜೈಂಟ್ಸ್

  GGT 45/1 (6)

    

 • 18 Mar 2023 07:50 PM (IST)

  RCB vs GG Live Score, WPL 2023: 5 ಓವರ್ ಮುಕ್ತಾಯ

  5 ಓವರ್​ಗಳಲ್ಲಿ 40 ರನ್​ ಕಲೆಹಾಕಿದ ಗುಜರಾತ್ ಜೈಂಟ್ಸ್

  GGT 40/1 (5)

   ಕ್ರೀಸ್​ನಲ್ಲಿ ಮೇಘನಾ - ಲೌರಾ ಬ್ಯಾಟಿಂಗ್

 • 18 Mar 2023 07:46 PM (IST)

  RCB vs GG Live Score, WPL 2023: ಆಕರ್ಷಕ ಬೌಂಡರಿ

  ಮೇಗನ್ ಶುಟ್ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಲೌರಾ

  GGT 35/1 (3.5)

    

 • 18 Mar 2023 07:41 PM (IST)

  RCB vs GG Live Score, WPL 2023: ಮೊದಲ ವಿಕೆಟ್ ಪತನ

  ಸೋಫಿ ಡಿವೈನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಸೋಫಿಯಾ ಡಂಕ್ಲಿ (16)

  GGT 27/1 (2.4)

    

 • 18 Mar 2023 07:35 PM (IST)

  RCB vs GG Live Score, WPL 2023: ಗುಜರಾತ್ ಉತ್ತಮ ಆರಂಭ

  GGT 11/0 (1)

  ಮೊದಲ ಓವರ್​ನಲ್ಲಿ 11 ರನ್​ ಕಲೆಹಾಕಿದ ಗುಜರಾತ್ ಜೈಂಟ್ಸ್

  ಕ್ರೀಸ್​ನಲ್ಲಿ  ಲೌರಾ - ಡಂಕ್ಲಿ ಬ್ಯಾಟಿಂಗ್

    

 • 18 Mar 2023 07:31 PM (IST)

  RCB vs GG Live Score, WPL 2023: ಮೊದಲ ಬೌಂಡರಿ

  ಸೋಫಿ ಡಿವೈನ್ ಎಸೆತದಲ್ಲಿ ಸ್ವೀಪ್ ಶಾಟ್ ಮೂಲಕ ಫೋರ್ ಬಾರಿಸಿದ ಡಂಕ್ಲಿ

  GGT 4/0 (0.2)

    

 • 18 Mar 2023 07:07 PM (IST)

  RCB vs GG Live Score, WPL 2023: ಉಭಯ ತಂಡಗಳು ಹೀಗಿವೆ

  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸೋಫಿ ಡಿವೈನ್, ಸ್ಮೃತಿ ಮಂಧಾನ(ನಾಯಕಿ), ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ಪ್ರೀತಿ ಬೋಸ್

  ಗುಜರಾತ್ ಜೈಂಟ್ಸ್ (ಪ್ಲೇಯಿಂಗ್ XI): ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸಬ್ಬಿನೇನಿ ಮೇಘನಾ, ಸುಷ್ಮಾ ವರ್ಮಾ(ವಿಕೆಟ್ ಕೀಪರ್), ಕಿಮ್ ಗಾರ್ತ್, ಸ್ನೇಹ್ ರಾಣಾ(ನಾಯಕಿ), ತನುಜಾ ಕನ್ವರ್, ಅಶ್ವನಿ ಕುಮಾರಿ.

 • 18 Mar 2023 07:05 PM (IST)

  RCB vs GG Live Score, WPL 2023: ಟಾಸ್ ಗೆದ್ದ ಗುಜರಾತ್ ಜೈಂಟ್ಸ್

  ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

Published On - Mar 18,2023 7:03 PM

Follow us on

Related Stories

Most Read Stories

Click on your DTH Provider to Add TV9 Kannada